spot_img
spot_img

ಮೋರಟಗಿಯಲ್ಲಿ ಸಂಗೊಳ್ಳಿ ರಾಯಣ್ಣರ 226ನೇ ಜಯಂತ್ಯುತ್ಸವ ಸಮಾರಂಭ

Must Read

spot_img

ಸಂಗೊಳ್ಳಿ ರಾಯಣ್ಣರ ಶೌರ್ಯ ಮೆಚ್ಚುವಂಥದ್ದು  – ಶಾಸಕ ಭೂಸನೂರ

ಸಿಂದಗಿ: ಸ್ವಾಮಿ ನಿಷ್ಠೆ, ಮತ್ತು ಪ್ರಾಮಾಣಿಕತೆಯಿಂದ, ಕಿತ್ತೂರ ರಾಣಿ ಚನ್ನಮ್ಮನ  ಮನಗೆದ್ದು ನೂರಾರು ಬ್ರಿಟೀಷರ ರುಂಡಗಳನ್ನು ಕತ್ತರಿಸಿದ ಕೀರ್ತಿ ದೇಶ ಭಕ್ತ ಸಂಗೋಳ್ಳಿ ರಾಯಣ್ಣನಿಗೆ ಸಲ್ಲುತ್ತದೆ ರಾಯಣ್ಣರ ಶೌರ್ಯ ಮೆಚ್ಚುವಂಥದ್ದು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ತಾಲೂಕಿನ ಮೋರಟಗಿ  ಗ್ರಾಮದಲ್ಲಿ ರವಿವಾರ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ಸಮಿತಿ ಹಾಗೂ ಹಾಲುಮತ ಸಮಾಜದ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.

ಮಕ್ಕಳಲ್ಲಿ ಶಿಕ್ಷಣ, ಸ್ವಾಭಿಮಾನ, ಮಾನವೀಯ ಮೌಲ್ಯ, ದೇಶಾಭಿಮಾನ ಬೆಳೆಸಿದಾಗ ಮಾತ್ರ ತಮ್ಮ ಮಕ್ಕಳು ದೇಶಕ್ಕೆ ಕೊಡುಗೆ ಕೊಡಲು ಸಾಧ್ಯವಾಗುತ್ತದೆ ಆ ನಿಟ್ಟಿನಲ್ಲಿ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿ ಎಂದರು.

ನಂತರ ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ ಸೋಮಜಾಳ, ಓಬಿಸಿ ಮಂಡಳ ಅಧ್ಯಕ್ಷ ರವಿಕಾಂತ ನಾಯ್ಕೊಡಿ, ಶಿಲ್ಪಾ ಕುದರಗೊಂಡ, ಮೈಬೂಬಸಾಬ ಕಣ್ಣಿ , ಮಾತನಾಡಿ  ರಾಯಣ್ಣ ಹುಟ್ಟಿದ್ದು ಅಗಷ್ಟ-15 ಸ್ವತಂತ್ರೋತ್ಸವ, ರಾಯಣ್ಣನ ಗಲ್ಲಿಗೇರಿಸಿದ್ದು ಜನೇವರಿ-26 ಗಣರಾಜ್ಯೋತ್ಸವ, ರಾಯಣ್ಣನ ಹುಟ್ಟು ಸಾವು ಚರಿತ್ರೆಯಾಗಿದೆ, ಎಲ್ಲರೂ ಒಗ್ಗಟ್ಟಾಗಿ ಬದುಕಿ, ಒಗ್ಗಟ್ಟಿನಲ್ಲಿ ಬಲವಿದೆ, ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಬೇಡಿ, ಶಿಕ್ಷಣ ನೀಡಿ, ಶಿಕ್ಷಣದಲ್ಲಿ ಹೆಣ್ಣು ಗಂಡು ಭೇದ-ಭಾವ ಮಾಡಬೇಡಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸಿಂದಗಿ ಪಿಎಸ್‍ಐ ನಿಂಗಣ್ಣ ಪೂಜಾರಿ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು ಹಾಗೂ ಶೇ 99% ಅಂಕ ಪಡೆದ ಕುಮಾರಿ ಮೀನಾಕ್ಷಿ ಸಿದ್ದು ಕೆರಿಗೊಂಡ ವಿದ್ಯಾರ್ಥಿನಿಗೆ ಶಾಸಕ ಸೇರಿದಂತೆ ವೇದಿಕೆ ಮೇಲಿರುವ ಗಣ್ಯರು ಸನ್ಮಾನಿಸಿ ಬಹುಮಾನ ನೀಡಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ಬಿಳಿಯಾನಸಿದ್ದ ಒಡೆಯರ್, ರಾವುತ್ ಮುತ್ತ್ಯಾ ವಹಿಸಿದ್ದರು, ಗ್ರಾ.ಪಂ.ಅಧ್ಯಕ್ಷ ಅಮೋಗಿ ಒಡೆಯರ, ಪಿಎಸ್‍ಐ ನಿಂಗಣ್ಣ ಪೂಜಾರಿ, ಉಪಾಧ್ಯಕ್ಷ ಲಗಮವ್ವ ಕೆರಿಗೊಂಡ, ನಿಂಗಣ್ಣ ಅಗಸರ, ಪ್ರಕಾಶ ನೆಲ್ಲಗಿ ಸಂತೋಷ ಮದರಿ,  ಮಂಜು ಮಯೂರ, ಸಂತೋಷ ಕೆರಿಗೊಂಡ ಶಿವು ಕೆರಿಗೊಂಡ ಇದ್ದರು ಭೂತಾಳಿ ಖಾನಾಪೂರ ನಿರೂಪಿಸಿ, ವಂದಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!