- Advertisement -
ಮೂಡಲಗಿ: ಮೂಡಲಗಿ ಲಯನ್ಸ ಕ್ಲಬ್ ಪರಿವಾರದ 2024-25ನೇ ಸಾಲಿನ ಅಧ್ಯಕ್ಷರಾಗಿ ಎಂಜಿನಿಯರ ಸಂಜಯ ಮೋಕಾಶಿ, ಕಾರ್ಯದರ್ಶಿಯಾಗಿ ಸೋಮಶೇಖರ ಹಿರೇಮಠ ಮತ್ತು ಖಜಾಂಚಿಯಾಗಿ ಕೃಷ್ಣಾ ಕೆಂಪಸತ್ತಿ ಅವರು ಆಯ್ಕೆಯಾಗಿರುವರು.
ಪದಗ್ರಹಣ:
ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದ 2024-25ನೇ ಸಾಲಿನ 10ನೇ ಪದಗ್ರಹಣ ಕಾರ್ಯಕ್ರಮವು ಜುಲೈ 13ರಂದು ಸಂಜೆ 5ಕ್ಕೆ ಮೂಡಲಗಿ ಶಿಕ್ಷಣ ಸಂಸ್ಥೆಯ ಶ್ರೀ ಕಲ್ಮೇಶ್ವಬೋಧ ಸ್ವಾಮಿ ಸಭಾಭವನದಲ್ಲಿ ಜರುಗಲಿದೆ.
- Advertisement -
ಪದಗ್ರಹಣ ಅಧಿಕಾರಿಯಾಗಿ ಯಲ್ಲಟ್ಟಿಯ ಕೊಣ್ಣೂರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೊ. ಬಸವರಾಜ ಕೊಣ್ಣೂರ ಭಾಗವಹಿಸುವರು. ಮುಖ್ಯ ಅತಿಥಿಯಾಗಿ ಮೂಡಲಗಿಯ ಪಶು ಸಂಗೋಪನಾ ಇಲಾಖೆಯ ಪಾಲಿಕ್ಲಿನಿಕ ಉಪನಿರ್ದೇಶಕ ಡಾ. ಎಂ.ಬಿ. ವಿಭೂತಿ ಭಾಗವಹಿಸುವರು.
ವಿಶೇಷ ಸಾಧಕರಿಗೆ ಮತ್ತು ಅನ್ನದಾಸೋಹಿಗಳಿಗೆ ಸನ್ಮಾನ ಇರುವುದು ಎಂದು ಸಂಘಟಕರು ತಿಳಿಸಿದ್ದಾರೆ.