ಬೆಳಗಾವಿ :-ತಾಲೂಕಿನ ಪ್ರಸಿದ್ಧ ಸುಕ್ಷೇತ್ರ ಪಂಚಗ್ರಾಮ, ಭೂಕೈಲಾಸ ಎಂದೇ ಪ್ರಖ್ಯಾತ ವಾಗಿರುವ ಭೂತರಾಮನಹಟ್ಟಿಯ ಮುಕ್ತಿಮಠದ ಜಾತ್ರಾ ಮಕರ ಸಂಕ್ರಮಣ ಜಾತ್ರಾ ಮಹೋತ್ಸವವು ಶ್ರೀಕ್ಷೇತ ಮುಕ್ತಿಮಠದ ಪರಮ ಪೂಜ್ಯ ಧರ್ಮಶ್ರೀ ತಪೋರತ್ನ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿದ್ಯ, ಮುಂದಾಳತ್ವದಲ್ಲಿ ಜನವರಿ ದಿ 14ರಿಂದ ಪ್ರಾರಂಭವಾಗಿ ದಿ 18 ರ ವರೆಗೆ ಜರುಗಲಿದೆ.
ಪ್ರತಿದಿನ ಸಂಜೆ ಧರ್ಮ ಸಭೆ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಪೂಜಾವಿಧಿ ಕಾರ್ಯಕ್ರಮಗಳು ಜರುಗಲಿವೆ, ನಾಡಿನ ವಿವಿಧ ಪರಮ ಪೂಜ್ಯ ಸ್ವಾಮೀಜಿಗಳು, ರಾಜಕೀಯ, ಸಾಮಾಜಿಕ ಕ್ಷೇತ್ರದ ಗಣ್ಯರು, ಸಾಹಿತಿಗಳು, ಸಂಗೀತ ಗಾರರು ಸಾಧಕರು ಆಗಮಿಸುವರು
ದಿ 14 ರಂದು ಮುಂಜಾನೆ ಹಿರೇಮುನವಳ್ಳಿಯ ಶಾಂಡಿಲೇಶ್ವರ ಮಠದ ಪೂಜ್ಯ ಶಂಭುಲಿಂಗ ಶಿವಾಚಾರ್ಯರು ಧರ್ಮ ಧ್ವಜಾರೋಹಣ ನೆರವೇರಿಸುವರು, ಶ್ರೀ ಮುಕ್ತಾ0ಭಿಕಾ ದೇವಿ ಅಮ್ಮನವರ ಉತ್ಸವ ಮೂರ್ತಿ ಕಾರ್ಯಕ್ರಮ ಬಸವನಕುಡಚಿ ಗ್ರಾಮದಿಂದ ಶ್ರೀಕ್ಷೇತ್ರ ಮುಕ್ತಿಮಠದ ವರೆಗೆ ಜರಗುವುದು, ಸಂಜೆ 4 ಘಂಟೆಗೆ ಧರ್ಮ ಸಭೆ ಕಾರ್ಯಕ್ರಮವು ಮಹರ್ಷಿ ಧರ್ಮ ಶ್ರೀ ತಪೋರತ್ನ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಹಾ ಸ್ವಾಮಿಗಳು, ರಾಜಕೀಯ ನಾಯಕರು, ಸರ್ಕಾರಿ ಅಧಿಕಾರಿಗಳು ಉಪಸ್ಥಿತಿಯಲ್ಲಿ ಜರಗುವುದು.
ಹಳ್ಯಾಳ ದ ಶ್ರೀಶಕ್ತಿ ಅಶೋಕ ಮೇತ್ರಿ ಯವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯುವುದು, ಬೆಳಗಾವಿ ಜಯ ನಗರದ ಸಮೃದ್ಧಾ ಅಂಗವಿಕಲರ ಸಂಸ್ಥೆಯ ವತಿಯಿಂದ ಸಂಗೀತಕಾರ್ಯಕ್ರಮ ಜರುಗುವುದು, ಕಿರ್ಲೊಸ್ಕರ ವಾಡಿಯ ಡಾ ಜಿ ಎಮ್ ಸುತಾರ ರವರಿಂದ ಉಚಿತ ಆರೋಗ್ಯ ಶಿಬಿರವು ನಡೆಯುವುದು,
ದಿ 15 ರಂದು ಸಂಜೆ ನಡೆಯುವ ಧರ್ಮ ಸಭೆಯಲ್ಲಿ ನಾಡಿನ ವಿವಿಧಲೋಹರ ಪೂಜ್ಯರು,ಸಾಮಾಜಿಕ,, ಧಾರ್ಮಿಕ, ರಾಜಕೀಯ ನಾಯಕರು ಆಗಮಿಸುವರು ಕಸಬೆ ನಂದಗಡದ ಪ್ರಭಾಕರ ಸುತಾರ ಹಾಗೂ ಮಾರುತಿ ಮಹಾರಾಜರಿಂದ ಭಜನಾ ಮತ್ತು ಕೀರ್ತನೆ ಸೇವೆ ಜರುಗಲಿದೆ ಅಕ್ಕತಂಗೇರಹಾಳದ ಸತೀಶ್ ಮೆಲೋಡಿಜ್ ಅವರಿಂದ ಸಂಗೀತ ಕಾರ್ಯಕ್ರಮವಿದೆ
ದಿ 16 ರಂದು ನಡೆಯುವ ಧರ್ಮ ಸಭೆಯಲ್ಲಿ ಬೆಳಗಾವಿ ಕಾರಂಜಿಮಠದ ಶ್ರೀ ಗುರುಕುಮಾರೇಶ್ವರ ಸಂಗೀತ ಬಳಗದಿಂದ ಸಂಗೀತ ಸೇವೆ, ಬೆಂಗಳೂರಿನ ಯಮನಪ್ಪ ಶಿವಪ್ಪ ಕುಂಬಾರ ಹಾಗೂ ಅವರ ಧರ್ಮ ಪತ್ನಿ ಸೌಭಾಗ್ಯ ರವರಿಂದ ಶ್ರೀ ಚೌಡೇಶ್ವರಿ ಕುಣಿತವು ಐದು ದಿನಗಳ ಪರ್ಯಂತ ನಡೆಯಲಿದೆ ಹುಬ್ಬಳ್ಳಿಯ ನಾಟ್ಯಾ0ಗಣ ನಾಟ್ಯ ಮಂದಿರದ ಶ್ರೀಮತಿ ವೀಣಾ ಎಮ್ ಭಟ್ ಹಾಗೂ ಕು, ವೇದಾ ಅವರಿಂದ ಭರತನಾಟ್ಯ ಹಾಗೂ ಭಗವದ್ಗೀತಾ ಸಾರ ಹಾಗೂ ವಾರಣಾ ನಗರದ ಮಧುಕರ್ ಲೋಹಾರ ಹಾಗೂ ಸುಕುಮಾರ ಲೋಹಾರ ರವರಿಂದ ಭಜನಾ ಸೇವೆ ಜರುಗಲಿದೆ
ದಿ.17 ರಂದು ನಡೆಯುವ ಧರ್ಮ ಸಭೆಯಲ್ಲಿ ವಿವಿಧ ಪೂಜ್ಯರು, ಸಚಿವರು, ಲೋಕಸಭಾ ಸದಸ್ಯರು, ಮಾಜಿ ಸಚಿವರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು, ನಂತರ ಸಂಗೀತ ಸೇವೆ, ಹುಬ್ಬಳ್ಳಿಯ ಕು. ಪೂಜಾ ಲಿಂಗರಾಜ ಹಿರೇಮಠರವರಿಂದ ಭರತ ನಾಟ್ಯ, ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ ವಾಗಲಿದೆ,
ದಿ 18 ರಂದು ಮುಂಜಾನೆ ಶ್ರೀ ಮುಕ್ತಿಮಠದ ಶ್ರೀಗಳವರ ದೇವಗಿರಿ ಗ್ರಾಮದಿಂದ ಶ್ರೀಕ್ಷೇತ್ರ ಮುಕ್ತಿ ಮಠದ ವರೆಗೆ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಸಾಯಂಕಾಲ ಧರ್ಮ ಸಭೆ ಜರುಗಲಿದೆ ಸಂಗೀತ ಸೇವೆ ಹಾಗೂ ಶ್ರೀಮಠದ ಸೇವೆ ಸಲ್ಲಿಸಿದ ಸದ್ಭಕ್ತ ರಿಗೆ ಹಾಗೂ ಧರ್ಮ ಪರ ಸೇವೆಯಲ್ಲಿ ಪಾಲ್ಗೊಂಡ ಭಕ್ತರಿಗೆ, ಸಮಾಜ ಸುಧಾರಕರಿಗೆ ಶ್ರೀಮಠದ ವತಿಯಿಂದ ಗುರು ರಕ್ಷೆ, ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಜಾತ್ರಾ ಮಹೋತ್ಸವದಲ್ಲಿ ತುಲಾ ಭಾರ ಸೇವೆಯನ್ನು ಭಕ್ತರು ನೆರವೇರಿಸುವರು
ಐದು ದಿನಗಳ ಕಾಲ ಧಾರ್ಮಿಕ ಸಾಂಸ್ಕೃತಿಕವಾಗಿ ಪೂಜಾವಿಧಿಗಳಿಂದ ಇತರರ ಗಮನ ಸೆಳೆಯುವ ರೀತಿಯಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ನಾಡಿನ, ಹೊರರಾಜ್ಯದ ಅಪಾರ ಭಕ್ತರು ಪಾಲ್ಗೊಳ್ಳುವರು, ಈ ಐದು ದಿನಗಳ ಜಾತ್ರಾ ಮಹೋತ್ಸವದಲ್ಲಿ ಸದ್ಭಕ್ತರು ಆಗಮಿಸಿ ಗುರುವಿನ ಕೃಪೆಗೆ ಪಾತ್ರರಾಗಲು ಪೀಠಾಧಿಪತಿಗಳಾದ ಶ್ರೀ ತಪೋರತ್ನ ಧರ್ಮಶ್ರೀ ಶಿವ ಸಿದ್ದ ಸೋಮೇಶ್ವರ ಮಹಾಸ್ವಾಮಿಗಳು ಕೋರಿದ್ದಾರೆ