ಸಿಂದಗಿ: ಭಾರತದ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಸುಮಾರು ನಾಲ್ಕು ಸಾವಿರ ವರ್ಷಗಳಷ್ಟು ಪುರಾತನವಾದದ್ದು. ಭಾರತದ ದೇಶಿ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡುವ ಕಾರ್ಯವಾಗಬೇಕಾಗಿದೆ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.
ನಗರದ ಸಾತವೀರೇಶ್ವರ ಸಭಾಭವನದಲ್ಲಿ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಈ ವೇಳೆ ಕೊಣ್ಣೂರು ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಸಹ ಕಾರ್ಯದರ್ಶಿ ಅಶೋಕ ವಾರದ, ಪ್ರಾಚಾರ್ಯ ಎಸ್.ಎಂ ಪೂಜಾರಿ, ರಾಜಶೇಖರ ಬೆನಕನಹಳ್ಳಿ, ಮಹಾಂತೇಶ ಲಾಯದಗುಂದಿ, ಹನುಮಂತಯ್ಯ ಪೂಜಾರ, ಜಗದೀಶ ಗಸ್ತಿ ವೇದಿಕೆಯ ಮೇಲಿದ್ದರು.
ಈ ವೇಳೆ ನಿರ್ಣಾಯಕರಾಗಿ ಸಿ.ಕೆ ಸಿಂಪಿ, ಎಸ್.ಎಸ್ ಮಲ್ಲೇದ, ಆರ್.ಆರ್ ನಿಂಬಾಳಕರ, ಮಂಜುನಾಥ್ ತಳವಾರ, ನೀಲಕಂಠ ಗೋಡೆಕರ ಕಾರ್ಯ ನಿರ್ವಹಿಸಿದರು. ಆರ್.ಡಿ. ಪಾಟೀಲ ಕಾಲೇಜಿನ ದೈಹಿಕ ಶಿಕ್ಷಕ ಗವಿಸಿದ್ದಪ್ಪ ಆನೆಗುಂದಿ ಸ್ವಾಗತಿಸಿದರು. ಉಪನ್ಯಾಸಕ ಜಿ.ಎ. ನಂದಿಮಠ ನಿರೂಪಿಸಿ ವಂದಿಸಿದರು.
ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್ ಮಹಿಳಾ ಕಾಲೇಜ್ ಪ್ರಥಮ ಸ್ಥಾನ ಪಡೆದುಕೊಂಡರೆ ಮುದೋಳದ ದಾನಮ್ಮದೇವಿ ಕಲಾ ಮತ್ತು ವಾಣಿಜ್ಯ ಕಾಲೇಜ್ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಇದೇ ಸಂದರ್ಭದಲ್ಲಿ ಎಂ.ಎಸ್. ಹೈಯ್ಯಾಳಕರ, ಕೆ.ಎಚ್ ಸೋಮಾಪುರ, ದೈಹಿಕ ನಿರ್ದೇಶಕ ರವಿ ಗೋಲಾ, ಎಸ್.ಎಸ್ ಮಲ್ಲೇದ, ಎಸ್.ಎನ್ ಸಂಗಮ, ಮಂಜುನಾಥ್ ತಳವಾರ್, ಎಸ್.ಎ ಜಾಹಗೀರದಾರ್, ಪ್ರವೀಣ ಹಿರೇಕುರಬರ, ಸತೀಶ ಬಸರಕೋಡ, ಎಮ್.ಎನ್ ನೂಲಾನವರ, ಯು.ಸಿ ಪೂಜೇರಿ, ಜಿ.ಎಸ್. ಕುಲಕರ್ಣಿ, ಎ.ಆರ್.ರಜಪೂತ, ಪಿ.ಎಮ್.ಮಾಲಿಪಾಟೀಲ, ಎಸ್.ಎಮ್.ಹೂಗಾರ, ಜಿ.ವಿ ಪಾಟೀಲ, ಎಮ್.ಕೆ ಬಿರಾದಾರ, ಎಮ್.ಎಮ್.ಈಳಗೇರ, ಪಿ.ಆರ್.ಬ್ಯಾಕೋಡ, ಬಿ.ಬಿ.ನಂದಿಮಠ, ಎಸ್.ಸಿ.ದುದ್ದಗಿ ಡಿ.ಎಮ್.ಪಾಟೀಲ, ಹೇಮಾ ಕಾಸರ, ಮಮತಾ ಹರನಾಳ, ಶಂಕರ ಕುಂಬಾರ ಸೇರಿದಂತೆ ವಿವಿಧ ಜಿಲ್ಲೆಯ ತಂಡಗಳು, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕ್ರೀಡಾಭಿಮಾನಿಗಳು ಇದ್ದರು.