spot_img
spot_img

ಸಸಿ ನೆಟ್ಟು ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ

Must Read

spot_img

ಪರಿಸರ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ – ವಿರೂಪಾಕ್ಷಯ್ಯ ಶಾಸ್ತ್ರಿಗಳು

ಸಿಂದಗಿ: ಒಂದು ಸಸಿಯನ್ನು ನೆಟ್ಟರೆ ಕನಿಷ್ಟ ಅದು ಇನ್ನೂರು ಜನರಿಗೆ ಆಮ್ಲಜನಕ ಕೊಡುತ್ತದೆ. ಹೀಗೆಯೇ ನೂರಾರು, ಸಾವಿರಾರು ನೆಡುವುದರಿಂದ ಮುಂದಿನ ದಿನಮಾನಗಳಲ್ಲಿ ಪ್ರಪಂಚಕ್ಕೆ ಆಮ್ಲಜನಕ ನೀಗುತ್ತದೆ. ಆಮ್ಲಜನಕದ ಕೊರತೆಯಿಂದ ಎಷ್ಟೋ ಜನರು ಅಸುನಿಗಿದ ಘಟನೆ ಮರೆತಿಲ್ಲ ಕಾರಣ ಎಲ್ಲರೂ ಪರಿಸರ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ವಿರುಪಾಕ್ಷಯ್ಯ ಶಾಸ್ತ್ರಿಗಳು ಹಿರೇಮಠ ಹೇಳಿದರು.

ತಾಲೂಕಿನ ಚಟ್ಟರಕಿ ಗ್ರಾಮದ ಎಸ್ ಬಿ  ದೇವರೆಡ್ಡಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಹಚ್ಯಾಳ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಿದ್ಧಾರೂಢ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತವಾಗಿ ಶಾಲಾ ಆವರಣದಲಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಇಂಥ ಶಿಕ್ಷಣ ಸಂಸ್ಥೆಗಳಿಗೆ ಪರಿಸರ ಪ್ರೇಮಿಗಳಿಂದ ಗಿಡಗಳನ್ನು ನೀಡುವುದರ ಮೂಲಕ ಮಕ್ಕಳಿಗೆ ಸ್ವಚ್ಛ ಶುದ್ಧವಾದ ವಾತಾವರಣ ಕಲ್ಪಿಸಲು ಅವಕಾಶ ಮಾಡಿಕೊಟ್ಟಿದ್ದು ಶ್ಲಾಘನೀಯ ಎಂದರು.

ಶಾಲಾ ಆವರಣದಲ್ಲಿ ಬೇಕಾಗುವ ಸುಮಾರು 400 ಸಸಿಗಳನ್ನು ದೇಣಿಗೆಯಾಗಿ ನೀಡಿದ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಶರಣಪ್ಪ ಶಿರಶ್ಯಾಡ  ಅವರು ಮಾತನಾಡಿ, ಪರಿಸರವನ್ನು ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ನಿಸರ್ಗವೇ ದೊಡ್ಡ ವೈದ್ಯ. ನಿಸರ್ಗವನ್ನು ನಾವು ಬೆಳೆಸಿದರೆ ನಮ್ಮನ್ನು ಜೀವನಪೂರ್ತಿ ಅದು ನಮ್ಮನ್ನು ಉಳಿಸುತ್ತದೆ. ಆಮ್ಲಜನಕದ ಕೊರತೆಯಿಂದ ಕೋವಿಡ್ ನಂತಹ ಮಾಹಾಮಾರಿಗಳು ನಮ್ಮನ್ನು ಆಳುತ್ತಿವೆ. ಒಬ್ಬರ ಮುಖ ಒಬ್ಬರು ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಗಳು ದೂರಾಗಿವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಸರ, ಕಾಡು ಬೆಳೆಸುವುದೊಂದೆ ಪರಿಹಾರ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹನುಮಂತ ದೇವರಡ್ಡಿ ಹಾಗೂ  ಉಪಾಧ್ಯಕ್ಷ ಮಾನಪ್ಪ ದೇವರೆಡ್ಡಿ  ನಿರ್ದೇಶಕರಾದ ರಾಜಶೇಖರ್ ಪಾಟೀಲ್, ಸಿದ್ದನ ಬಡಿಗೇರ್ ಊರಿನ ಪ್ರಮುಖರಾದ ಶಿವಪ್ಪ ಚೂರಿ, ಮುದುಕಪ್ಪ  ವಡವಡಗಿ ಹಾಗೂ ಶಾಂತಗೌಡ ಆಸ್ಕಿ, ಬಿಮನಗೌಡ ಬೋರಗಿ, ಚಿದಾನಂದ ಆಸ್ಕಿ, ಪವಾಡಪ್ಪ ಹಡಪದ  ಉಪಸ್ಥಿತರಿದ್ದರು.

ಸಂಗರೆಡ್ಡಿ ಬೋರಗಿ  ನಿರೂಪಿಸಿದರು ಅರವಿಂದ ಬಡಿಗೇರ್ ವಂದಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!