spot_img
spot_img

ಮಾತೋಶ್ರೀ ನಂದಾ ಮನೋಹರ ಹಂಚನಾಳ ಪೌಂಡೇಶನ್ ವತಿಯಿಂದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ

Must Read

ಸಿಂದಗಿ: ಭಾವೈಕ್ಯತೆ ಎಂಬುದು ಬಾಯಿಮಾತಲ್ಲ, ಅದು ಆಚರಣೆಗೆ ತಂದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ ಇಂತಹ ಸರ್ವಧರ್ಮಗಳ ಭಾವೈಕ್ಯತೆ ಬೆಸುಗೆಯ ಕೊಂಡಿಯನ್ನು ಬಿಗಿಗೊಳಿಸಲು ಮುಂದಾದ ವಿನೋದ ಹಂಚಿನಾಳ ನಿಜಕ್ಕೂ ಮಾನವೀಯತೆ ಮರೆದಿದ್ದಾರೆ ಎಂದು ಡಾ ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.

ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ತಂದೆ-ತಾಯಿ ಸ್ಮರಣಾರ್ಥವಾಗಿ ಮಾತೋಶ್ರೀ ನಂದಾ ಮನೋಹರ ಹಂಚನಾಳ ಪೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ವಿಶ್ವದಲ್ಲಿಯೇ ಭಾರತದಲ್ಲಿ ಮಾತ್ರ ಇಂತಹ ಏಕತೆಯನ್ನು ಕಾಣಲು ಸಾಧ್ಯ. ನಾವೆಲ್ಲರು ನಮ್ಮ ಜಾತಿ, ಧರ್ಮಗಳ ಸಾರವನ್ನೇ ಅನುಭವಿಸಿ ಸಮತೆಯ ಸಹಬಾಳ್ವೆಯನ್ನು ನಿರೂಪಿಸಿ ಆದರ್ಶವನ್ನು ಮುಂದಿನ ಪೀಳಿಗೆಗೂ ಹಂಚುವಂಥ ಮಾನವೀಯತೆಯೊಂದು ನಮ್ಮಲ್ಲಿ ಹುಟ್ಟಬೇಕು ಎಂದು ತಿಳಿಸಿದರು.

ಮೂರ್ಝಾವಮಠದ ರಾಮಚಂದ್ರ ಸ್ವಾಮಿಗಳು ಮಾತನಾಡಿ, ಸರ್ವೇಜನಃ ಸುಖಿನೋ ಭವಂತು ಎನ್ನುವಂತೆ ಜಾತಿ, ಮತ, ಪಂಥಗಳೆಣಿಸದೇ ನೀತಿಯಂತೆ ಸಹೃದಯಿಗಳಾಗಿ ಸರ್ವರು ಎನ್ನುವ ಭಾತೃತ್ವದಲ್ಲಿ ಬೆರೆತು ನಮ್ಮ ಧರ್ಮಗಳ ಧಾರ್ಮಿಕತೆಯನ್ನು ನಾವು ಪ್ರೀತಿಸಿ, ಇತರ ಧರ್ಮಗಳನ್ನು ಪ್ರೀತಿಯಿಂದ ಕಂಡಾಗ ಮಾತ್ರ ಭಾರತದ ಭ್ರಾತೃತ್ವದ ಪದಕ್ಕೆ ಒಂದು ಗೌರವ ಸಿಗುತ್ತದೆ. ಈ ದಿಸೆಯಲ್ಲಿ ನಾವು ಒಂದಾಗಿ ನಮ್ಮ ಪೀಳಿಗೆಯನ್ನು ಏಕತೆ ಮಂತ್ರದಲ್ಲಿ ಬದುಕಿನ ಸಾರ್ಥಕತೆಯನ್ನು ತಿಳಿಸೋಣ ಎಂದರು.

ಸಾನ್ನಿಧ್ಯ ವಹಿಸಿದ ಚೆನ್ನಯ್ಯನಗರಿ ಗುರುಬಸವ ಮಹಾಮನೆ ಮನಗುಂಡಿಮಠದ ಬಸವಾನಂದ ಸ್ವಾಮಿಗಳು ಮಾತನಾಡಿ, ಇಂದು ಒಂದು ಮದುವೆ ಮಾಡಬೇಕಾದರೆ ಲಕ್ಷಗಟ್ಟಲೆ ಖರ್ಚು ಮಾಡಬೇಕಾಗುತ್ತದೆ ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು, ಮಠ-ಮಾನ್ಯಗಳು ಸಾಮೂಹಿಕ ವಿವಾಹಗಳಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಬಡ ಮತ್ತು ಕೂಲಿ ಹಾಗೂ ನಿರ್ಗತಿಕರಿಗೆ, ಆರ್ಥಿಕ ದುರ್ಬಲರಿಗೆ ಅನುಕೂಲಗಳಾಗುತ್ತಿವೆ. ಮಾತೋಶ್ರೀ ನಂದಾ ಮನೋಹರ ಹಂಚನಾಳ ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ತಾಲೂಕಿನ ವಿವಿಧ ಗ್ರಾಮಗಳ 12 ಜೋಡಿಗಳು ನವ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅಧ್ಯಕ್ಷತೆ ವಹಿಸಿದ ಪೌಂಡೇಶನ್ ಅಧ್ಯಕ್ಷ ವಿನೋದ ಹಂಚನಾಳ, ಕಾರ್ಯದರ್ಶಿ ಸುಹಾಸಿನಿ ಹಂಚನಾಳ, ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ, ಚಡಚಣ ಇಂಡಿಯನ್ ಶುಗರ್ಸನ ನಿರ್ದೇಶಕ ಡಾ.ವ್ಹಿ.ಎಸ್.ಪತ್ತಾರ, ವಸಂತ ಹಂಚನಾಳ, ಮಲ್ಲಿಕಾರ್ಜುನ ಬಡಿಗೇರ, ಮಧು ಬಡಿಗೇರ, ಸಂಗಮೇಶ ಮಲ್ಲೇದ, ಪ್ರಮೋದ ಹಂಚನಾಳ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಶಿಕ್ಷಕ ಜಗದೀಶ ಸಿಂಗೆ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!