spot_img
spot_img

ಮೂಡಲಗಿಯಲ್ಲಿ ಡಬಲ್ ಕೇರಂ ಬೋರ್ಡ ಟೂರ್ನಿ ಉದ್ಘಾಟಿಸಿದ ಸರ್ವೋತ್ತಮ ಜಾರಕಿಹೊಳಿ

Must Read

- Advertisement -

ಮೂಡಲಗಿ: ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತವಾಗಿ  ಪಟ್ಟಣದ ರಾಜೀವಗಾಂಧಿ ನಗರದ ಹತ್ತಿರ  ಅಂಬೇಡ್ಕರ ಭವನದಲ್ಲಿ ಏರ್ಪಡಿಸಿದ ಡಬಲ್ ಕೇರಂ ಬೋರ್ಡ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ಶುಕ್ರವಾರದಂದು ಜರುಗಿತು.

ಪಂದ್ಯಾವಳಿಯನ್ನು ಉದ್ಘಾಟಿಸಿದ ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡಾಕೂಟದಲ್ಲಿ ಒಂದಾದ ಕೇರಂ-ಚೇಸ್ ಪಂದ್ಯಾಳಿಯಲ್ಲಿ  ಭಾಗವಹಿಸುವದರಿಂದ ಆಟಗಾರರಲ್ಲಿ ಏಕಾಗ್ರತೆ ಮತ್ತು ಕ್ರಿಯಾಶೀಲತೆ ಹಾಗೂ ಚುರುಕುತನವನ್ನು ಬೆಳೆಸುವ ಮೂಲಕ ಉತ್ಸಾಹವನ್ನು ತುಂಬುತ್ತದೆ, ಇಂತಹ ಆಟಗಳಿಗೆ ಪ್ರೋತ್ಸಾಹ ದೊರಕಿಸಿ ಕೊಡುವುದು ಅವಶ್ಯಕತೆ ಇದೆ, ಸಮಯವನ್ನು ವ್ಯರ್ಥವಾಗಿ ಬಳಸದೆ ನಮ್ಮ ನೈಪುಣ್ಯತೆ ಬೆಳೆಸುವಂತಾಗಬೇಕು, ರಾಷ್ಟ್ರ ಮಟ್ಟದಲ್ಲಿ  ಜನಪ್ರಿಯತೆಯನ್ನು ಕೇರಂ ಆಟ ಪಡೆದುಕೊಂಡಿದೆ.  ಯುವಕರು ಇಂತಹ ಕ್ರೀಡೆಗಳನ್ನು ಸಂಘಟಿಸುವ ಮೂಲಕ ಜನರಲ್ಲಿ ಒಗ್ಗಟ್ಟು, ಸೌಹಾರ್ದತೆ ಬೆಳೆಸುತ್ತದೆ ಎಂದರು.

ಮೂಡಲಗಿ ಮೆಥೋಡಿಸ್ಟ್ ಚರ್ಚ ಸಭಾಪಾಲಕರಾದ ರೇ.ಡ್ಯಾನಿಯಲ್ ಬಾಬು ಅವರು ಪ್ರಾರ್ಥಿಸಿದರು.

- Advertisement -

ಸಮಾರಂಭದಲ್ಲಿ ಪಟ್ಟಣದ ಸಾಯಿ ಸೊಸೈಟಿಯ ಅಧ್ಯಕ್ಷ ಎಮ್.ವಾಯ್. ಮರೆಪ್ಪಗೋಳ,ಶಾಸಕರ ಆಪ್ತ ಸಹಾಯಕ ಅಬ್ದುಲ್ ಮಿರ್ಜಾನಾಯಿಕ, ಪುರಸಭೆ ಸದಸ್ಯ ಸುಭಾಸ ಸಣ್ಣಕ್ಕಿ, ಡಿಎಸ್‌ಎಸ್ ಮುಖಂಡರಾದ ರಮೇಶ ಸಣ್ಣಕ್ಕಿ, ಶಾಬು ಸಣ್ಣಕ್ಕಿ, ಪ್ರಭಾಕರ ಬಂಗೆನ್ನವರ, ವಿಲಾಸ ಸಣ್ಣಕ್ಕಿ, ಚನ್ನಪ್ಪ ಢವಳೇಶ್ವರ, ಹನಮಂತ ಸಣ್ಣಕ್ಕಿ, ಯಲ್ಲವ ಸಣ್ಣಕ್ಕಿ, ಸಂಗಪ್ಪ ಗಾಡಿಕಾರ, ಸುಂದರ ಸಣಕ್ಕಿ, ಅಶೋಕ ಸಿದ್ಲಿಂಗಪ್ಪಗೋಳ ಮತ್ತು ಪಂದ್ಯಾವಳಿಯ ಸಂಘಟರು ಮತ್ತಿತರರು ಇದ್ದರು. ಜೋಶೊ ಸಣ್ಣಕ್ಕಿ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group