ಸರ್ವರಲ್ಲೂ ಸಮಾನತೆಯೆಂಬ ಪ್ರಭೆಯನ್ನು ಬೀರಿ ಕಾಯಕದ ಜೊತೆಗೆ ವಂಚನೆ ಮೋಸ ಮರೆತು ಸದ್ಭಕ್ತಿಯಿಂದ ಜ್ಞಾನವನ್ನು ಉಣಬಡಿಸಿ ತಮ್ಮಲ್ಲೇ ಕಾಲಪ್ರಜ್ಞೆ, ಸ್ಥಿತಪ್ರಜ್ಞೆ ಮೂಲಕ ನಡೆನುಡಿ ಒಂದಾಗಿ ತಾವು ದುಡಿದುದರಲ್ಲಿ ದಾಸೋಹದ ಪರಿಕಲ್ಪನೆ ಸರ್ವರಲ್ಲೂ ಮೂಡುವಂತೆ 12ನೇ ಶತಮಾನದಲ್ಲಿ ಶರಣರು ಮಾಡಿದರು ಎಂದು ಖಾನಾಪುರದ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಅಡಿವೇಶ ಇಟಗಿ ತಮ್ಮ ವಿಶೇಷ ಉಪನ್ಯಾಸದಲ್ಲಿ ನುಡಿದರು.
ದಿ.28 ರಂದು ಬೆಳಗಾವಿ ನಗರದ ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ‘ವಾರದ ಸತ್ಸಂಗ ಮತ್ತು ವಿಶೇಷ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕನ್ನು ಗೆಲ್ಲಲು ಪ್ರತಿಕ್ಷಣ ಪ್ರೀತಿಸಬೇಕು. ನಾವು ಮನುಷ್ಯರಾಗಿ ಇದ್ದರೆ ಸಾಲದು ಮನುಷ್ಯತ್ವ ನಮಗೆ ಬೇಕು. ಚಿಂತೆಯನ್ನು ಚಿಂತನೆ ಮಾಡಿ ಬದುಕಿನಲ್ಲಿ ಚೇತನ ಬರುವಂತಾಗಬೇಕು ಹೊರತು ಚಿತೆಯತ್ತ ಸಾಗುವಂತೆ ಆಗಬಾರದು ಎಂದು ಶರಣರು ನಡೆದುಬಂದ ದಾರಿ ಮತ್ತು ಅವರು ಹಾಕಿಕೊಟ್ಟ ಪರಿಕಲ್ಪನೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸಂಘಟನೆ ವತಿಯಿಂದ ಶ್ರಾವಣ ತಿಂಗಳ ಪರ್ಯಂತ ಹಮ್ಮಿಕೊಳ್ಳಲಾದ ವಿಶೇಷ ಕಾರ್ಯಕ್ರಮಗಳನ್ನು ಜನರಲ್ಲಿ ಭಕ್ತಿಭಾವವನ್ನು ಮೂಡಿಸುವುದರ ಜೊತೆಗೆ ಎಲ್ಲರ ಮನಸ್ಸನ್ನು ಪರಿಶುದ್ಧಗೊಳಿಸಿದವು ಎಂದು ಸಂಘಟನೆಯ ಉಪಾಧ್ಯಕ್ಷ ಸುರೇಶ ನರಗುಂದ ನುಡಿದರು.
ಇದೇ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರರವರು ಈ ತಿಂಗಳಲ್ಲಿ ಜನಿಸಿದವರ ಜನ್ಮದಿನಾಚರಣೆಯನ್ನು ಸಂಘಟನೆ ವತಿಯಿಂದ ಅತ್ಯಂತ ಸರಳವಾಗಿ ಮತ್ತು ವಿಶೇಷವಾಗಿ ದೀಪ ಬೆಳಗಿಸಿ ವಚನ ಮಂತ್ರಗಳನ್ನು ಪಠಣ ಮಾಡುವುದರ ಮೂಲಕ ಆಚರಣೆ ಮಾಡಿದರು .
ಕಾರ್ಯಕ್ರಮದಲ್ಲಿ ಶರಣರಾದ ಶಶಿಭೂಷಣ ಪಾಟೀಲ, ಬಿ. ಹೆಚ್. ಮಾರದ, ಮಲ್ಲಿಕಾರ್ಜುನ್ ಶಿರಗುಪ್ಪಿ ಶೆಟ್ಟರ, ಆನಂದ ಕರ್ಕಿ,ಬಿ.ಕೆ ಪಾಟೀಲ, ಶಂಕರ ಶೆಟ್ಟಿ ,ಸಿದ್ದಪ್ಪ, ಎಂ ವೈ ಮೆಣಸಿನಕಾಯಿ, ಶಿವಾನಂದ ತಲ್ಲೂರ, ಜ್ಯೋತಿ ಬದಾಮಿ, ಸುವರ್ಣ ಗುಡಸ, ಜಯಕ್ಕ ಪಾಟೀಲ ನೇತ್ರಾ ರಾಮಾಪುರಿ ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ಪ್ರಸ್ತುತಪಡಿಸಿದರು. ಸಂಗಮೇಶ ಅರಳಿ ಸ್ವಾಗತಿಸಿದರು ವಚನ ಮಂಗಲ ದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.