spot_img
spot_img

ವಚನ ಸಾಹಿತ್ಯದ ಸತ್ಸಂಗ ಕಾರ್ಯಕ್ರಮ; ಮನೆ ಮನೆಗೆ ವಚನ

Must Read

ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಆಯೋಜಿಸಲಾದ ಮನೆ ಮನೆಗಳಲ್ಲಿ ಮನ ಮನಕ್ಕೆ ವಚನ ಸಾಹಿತ್ಯದ ಸತ್ಸಂಗದ ಕಾರ್ಯಕ್ರಮ ದಿನಾಂಕ 9ರಂದು ಶರಣ ಶಂಕರ ಶೆಟ್ಟಿ ಅವರ ಮನೆಯಲ್ಲಿ ನೆರವೇರಿತು.

ಧ್ವಜಾರೋಹಣದ ಮೂಲಕ ಕಾರ್ಯಕ್ರಮ ಆರಂಭಿಸಿ ವಚನ ಪ್ರಾರ್ಥನೆಯನ್ನು ಪ್ರೊಫೆಸರ್ ಶ್ರೀಕಾಂತ್ ಶಾನವಾಡರು ನಡೆಸಿಕೊಟ್ಟರು.

ಇಂದಿನ ವಿಷಯ “ನೀಲಾಂಬಿಕೆಯ ಜೀವನ ಚರಿತ್ರೆ” ಕುರಿತ ಶ್ರೀಮತಿ ಸುನಿತಾ ನಂದೆಣ್ಣವರ ಮಾತನಾಡಿದರು.

ನೀಲಾಂಬಿಕೆಯು ಬಸವಣ್ಣವರ ಎಲ್ಲ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಯಲ್ಲಿ ತಂದವರು ಅವರು “ವಿಚಾರ ಪತ್ನಿ” ಎನಿಸಿಕೊಂಡವರು ದಾಸೋಹದ ಎಲ್ಲ ಜವಾಬ್ದಾರಿಗಳನ್ನು ಹೊತ್ತು ಸದುವಿನಯದಿಂದ ಮಾತೃವಾತ್ಸಲ್ಯದಿಂದ ಎಲ್ಲ ಜಂಗಮರನ್ನು ಅನ್ನ ದಾಸೋಹದಿಂದ ಸಂತೃಪ್ತಿಗೂಳಿಸಿ ಮಹಾಮನೆಯ ಮಹಾ ತಾಯಿ ಎನಿಸಿಕೊಂಡವರು, ಬಸವಣ್ಣನವರ ಸಮಾಜೋಧ್ಧಾರ್ಮಿಕ ಎಲ್ಲ ಕ್ಷೇತ್ರಗಳಲ್ಲಿ ಮೂಂಚೂಣಿಯಲ್ಲಿದ್ದು ಅವರಿಗೆ ಬಲವಾಗಿ ನಿಂತವರು , ಒಂದು ಮನೆ ಮನೆತನಕ್ಕೆ ಸ್ತ್ರೀ ಪಾತ್ರವೇನೆಂದು ತೊರಿಸಿಕೊಟ್ಟವರು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಹೇಳಿದರು.

ಗುರುಗಳಾದ ಶಿವಜಾತಯ್ಯ ದಳವಾಯಿ ಅಪ್ಪನವರು ಶರಣರ ನಡೆದು ಬಂದ ದಾರಿ ನಮಗೆ ದಾರಿ ದೀಪವಾಗಿದೆ ಅವರ ನೀಡಿರುವ ವಚನ ಸಾಹಿತ್ಯವನ್ನು ನಾವು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ತಮ್ಮ ಆಶಿರ್ವಚನದಲ್ಲಿ ಹೇಳಿದರು.

ಶರಣರಾದ ಬಾಳಿಯವರು ಸುಂದರವಾಗಿ ನಿರೂಪಣೆ ಮಾಡಿದರು. ಶರಣರಾದ ಕಟ್ಟಿಮನಿ , ಮುನವಳ್ಳಿ, ಮಗ್ದುಮ, ಕೋರಿ, ಗುರವಣ್ಣವರ ಪಾಟೀಲ, ರುದ್ರಗೌಡರು, ಹಾಗೂ ಶರಣೆಯರಾದ ಶಾಂತಿ, ಪ್ರೇಮಾ, ಮೇಘಾ ಶೋಭಾ, ಅನುಪಮಾ, ಶಾರಾದಾ ವಿಜಯಾ, ಕೋತವರು ಹಾಗೂ ಇನ್ನುಳಿದ ಶರಣ ಶರಣಿಯರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!