ಮೂಡಲಗಿ:- ಪಟ್ಟಣದ ಆರ್.ಡಿ.ಎಸ್ ಕಾಲೇಜಿನ ಮೈದಾನದಲ್ಲಿ ವಿಶ್ವ ಶಾಂತಿಗಾಗಿ “15 ನೆಯ ಸತ್ಸಂಗ ಸಮ್ಮೇಳನ “ಡಿಸೆಂಬರ್,03 ರಿಂದ 09 ರವರೆಗೆ ಏಳು ದಿನಗಳ ಕಾಲ ಸಂಜೆ,6 ಗಂಟೆಗೆ ಶ್ರೀಗಳ ನೇತೃತ್ವದಲ್ಲಿ ಪ್ರವಚನ,ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ವೇದ ಮೂರ್ತಿ ಶಂಕ್ರಯ್ಯ ಹಿರೇಮಠ ಸತ್ಸಂಗ ಕರಪತ್ರ ಬಿಡುಗಡೆ ಮಾಡುವ ಸಂದರ್ಭದಲ್ಲಿ ತಿಳಿಸಿದರು.
ಸಾಧು ಸಂಸ್ಥಾನ ಮಠ ಇಂಚಲ ಶ್ರೀ ಡಾllಶಿವಾನಂದ ಭಾರತಿ ಮಹಾಸ್ವಾಮೀಜಿಯವರ ಉದ್ಘಾಟನೆಯಲ್ಲಿ ಹಾಗೂ ಚಿದಂಬರಾಶ್ರಮ ಸಿದ್ದರೂಢ ಮಠ ಬೀದರ ಶ್ರೀ ಡಾllಶಿವಕುಮಾರ ಮಹಾಸ್ವಾಮಿಗಳ ಘನ ಅಧ್ಯಕ್ಷತೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ ಎಂದರು.
ಸಿದ್ದರೂಢ ಮಠ,ಮಹಾಲಿಂಗಪೂರ ಶ್ರೀ ಸಹಜಾನಂದ ಮಹಾಸ್ವಾಮಿಗಳು, ಎಮ್.ಎ.ಪೂರ್ಣಪ್ರಜ್ಞಾ ಯೋಗಾಶ್ರಮ ಮಠ, ಕಲಬುರ್ಗಿ ಶ್ರೀ ಮಾತೊಶ್ರೀ ಲಕ್ಷ್ಮೀ ತಾಯಿಯವರು, ಸಿದ್ದಾರೂಢ ಮಠ, ಜೋಡುಕುರಳಿ ಶ್ರೀ ಚಿದ್ಘನಾನಂದ ಮಹಾಸ್ವಾಮಿಗಳು, ಅಡವಿಸಿದ್ದೇಶ್ವರ ಮಠ,ಶಿವಾಪೂರ (ಹ) ಶ್ರೀ ಅಡವಿಸಿದ್ದರಾಮ ಮಹಾಸ್ವಾಮಿಗಳು, ಮೈಲಾರಲಿಂಗೇಶ್ವರ ದೇವಸ್ಥಾನ ,ಶ್ರೀ ಸಿದ್ದೇಶ್ವರ ಆಶ್ರಮ,ಇಟನಾಳ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸಾನಿದ್ಯದಲ್ಲಿ ಪ್ರವಚನ, ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದರು.
ನೇಮಿನಾಥ ಬೇವಿನಕಟ್ಟಿ, ವಿಲಾಸ ನಾಶಿ, ತಮ್ಮಣ್ಣ ಗಡಾದ ಹಾಗೂ ಹಣಮಂತ ಗುಬಚಿ ಉಪಸ್ಥಿತರಿದ್ದರು.