ಸತ್ಸಂಗಗಳು ರಾಜಕೀಯಕ್ಕೆ ಒಳಪಡಬಾರದು

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಹಲವರಿಗೆ ಎಲ್ಲಾ ಸಂಘಟನೆಯಲ್ಲಿರುವ ಉತ್ತಮ ವಿಚಾರ ತಿಳಿಯೋ ಆಸಕ್ತಿಯಿದ್ದರೂ ಕೆಲವೊಮ್ಮೆ ತಮ್ಮ ಆತ್ಮಸಾಕ್ಷಿಗೆ ವಿರುದ್ದ ನಡೆಯಲಾಗದೆ ತಟಸ್ಥರಾಗಬೇಕಾಗುತ್ತದೆ. ವಿಚಾರಗಳನ್ನು ತಿಳಿಯುವುದರಿಂದ ಜ್ಞಾನ ಹೆಚ್ಚಾಗುತ್ತದೆ ನಿಜ, ಆದರೆ ವಿಚಾರದಿಂದ ನಮ್ಮತನ ನಷ್ಟವಾಗೋ ಸಾಧ್ಯತೆ ಇದ್ದರೆ ಬಿಟ್ಟು ಹೊರಬರಬೇಕು.

ಇಲ್ಲ ಸುಮ್ಮನಿರಬೇಕು. ಇಡೀ ವಿಶ್ವ, ದೇಶವನ್ನು ಯಾರೊಬ್ಬರಿಂದ ಸರಿಪಡಿಸಲಾಗದು.ಆದರೆ, ಎಲ್ಲರನ್ನೂ ಆವರಿಸಿರುವ ಸಾಮಾನ್ಯಜ್ಞಾನ ದಿಂದ ಒಗ್ಗಟ್ಟು ಬೆಳೆಸಿಕೊಂಡರೆ ಅವರವರ ಚೌಕಟ್ಟಿನಲ್ಲಿ ಬದಲಾವಣೆ ತರಬಹುದು. ಆದರೆ ಚೌಕಟ್ಟಿನಲ್ಲಿ ವಿರೋಧಿಗಳು ರಾಜಕೀಯತೆ ಹೆಚ್ಚಾದರೆ ಚೌಕಟ್ಟಿನಲ್ಲಿ ಹೊರಬರೋದರಲ್ಲಿ ಅರ್ಥ ವಿದೆ.

ಈಸಬೇಕು ಇದ್ದು ಜೈಸಬೇಕು.ಎಂದರೆ ಪ್ರತಿಯೊಂದು ಪರಮಾತ್ಮನ ಇಚ್ಚೆಯಂತೇ ನಡೆದಿರುವಾಗ ವಿರೋಧಿಸಿ ಉಪಯೋಗವಿಲ್ಲ. ನಮ್ಮನ್ನು ನಾವು ಗಟ್ಟಿ ಮಾಡಿಕೊಳ್ಳುವಷ್ಟು ಸದ್ವಿಚಾರ ಪಡೆದು ಎಲ್ಲರೊಂದಿಗಿದ್ದೂ ಇಲ್ಲದಂತಿದ್ದರೆ ನಮ್ಮತನ, ಆತ್ಮರಕ್ಷಣೆ ಕಷ್ಟವಿಲ್ಲ.

- Advertisement -

ಆದರೆ ನಾವು ಯಾರಿಂದಲೂ ಪ್ರತಿಫಲ ಬಯಸದಿದ್ದರೆ ಮಾತ್ರ ಸಾಧ್ಯ. ಪ್ರತಿಫಲ ಪಡೆದು ತಿರುಗಿ ನಿಲ್ಲೋದೆ ಅಧರ್ಮ ವಾಗುತ್ತದೆ. ಸಂಘಟನೆಯಿಂದ ಒಗ್ಗಟ್ಟು ಹೆಚ್ಚಾದರೆ ಬಲವಿರುತ್ತದೆ. ಸಂಘರ್ಷದ ರಾಜಕೀಯತೆ ಇದ್ದರೆ ದುರ್ಭಳಕೆ ಹೆಚ್ಚಾಗುತ್ತದೆ. ಅಸಂಖ್ಯಾತ ಸಂಘಗಳಿಗಿಂತ ಒಂದೇ ಸಂಘವಿದ್ದರೆ ತೃಪ್ತಿ, ನೆಮ್ಮದಿ ಸಂತೋಷ ಎಲ್ಲಾ ಸಂಘಗಳಿಂದಲೂ ಒಂದೊಂದು ಕಲಿಯೋ ವಿಚಾರವಿರುತ್ತದೆ.

ಇದು ಸದ್ವಿಚಾರದ ಸತ್ಸಂಗ ವಾದರೆ ಉತ್ತಮ ಬೆಳವಣಿಗೆ. ಒಂದೇ ದೇಶದೊಳಗಿರುವ ಅಸಂಖ್ಯಾತ ಸಂಘಗಳು ದೇಶದ ಪರ ನಿಂತು ನಿಸ್ವಾರ್ಥ ಸೇವೆ ಮಾಡಿದರೆ ದೇಶೋದ್ದಾರ. ಸಂಘಗಳೇ ಸ್ವಾರ್ಥ ಕ್ಕೆ ಕಟ್ಟುಬಿದ್ದು ರಾಜಕೀಯ ನಡೆಸಿದರೆ ದೇಶಕ್ಕೆ ಕಷ್ಟ ನಷ್ಟ.

ಸತ್ಸಂಗಗಳಾಗಲಿ ಯಾವುದೇ ಸಂಘಟನೆಯಾಗಲಿ ಅತಿಯಾದ ರಾಜಕೀಯಕ್ಕೆ ಒಳಪಟ್ಟರೆ ಸಂಘರ್ಷಣೆಯೇ ಹೆಚ್ಚು. ಒಗ್ಗಟ್ಟಿನಿಂದ ಮುಂದೆ ನಡೆಯೋದು ಸಂಘಗಳ ಉದ್ದೇಶ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!