ಸವದತ್ತಿ – ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಒಳ್ಳೆಯ ಮಳೆಯಾಗಲಿ ಆ ದೇವಿಯು ಎಲ್ಲರಿಗೂ ಸುಖ ಶಾಂತಿ ನೀಡಲಿ ಪಟ್ಟಣದಲ್ಲಿ ಈಗಾಗಲೇ ಅಭಿವೃದ್ದಿ ಕೆಲಸಗಳು ನಡೆದಿವೆ 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಹಾಗೂ ಗಟಾರಿಗಳ ನಿರ್ಮಾಣ ಕಾಮಗಾರಿಗಳು ನಡೆದಿವೆ ಈಗಿರುವ ದನದ ಮಾರ್ಕೆಟನ್ನು ಸುಮಾರು 2. ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ದಿಪಡಿಸಿ ಅಲ್ಲಿ ಕಾಯಿಪಲ್ಲೆ ಮಾರುಕಟ್ಟೆ ಮಾಡಲಾಗುವುದು ಅದೇ ರೀತಿಯಾಗಿ ಪುರಸಭೆಯಿಂದ ತಾಲೂಕು ಪಂಚಾಯತವರೆಗೆ 10 ಕೋಟಿ ರೂಪಾಯಿಗಳ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ” ಎಂದು ಶಾಸಕ ಹಾಗೂ ಉಪ ಸಭಾದ್ಯಕ್ಷ ಆನಂದ ಮಾಮನಿ ಮಾತನಾಡಿದರು.
ಅವರು ಪಟ್ಟಣದ ಉಳ್ಳಿಗೇರಿ ಓಣಿಯಲ್ಲಿ ಕರೆಮ್ಮಾ ದೇವಸ್ಥಾನದ ಮೊದಲ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇವರ ಅನುಗ್ರಹದಿಂದ ಒಳ್ಳೆಯ ಮಳೆ ಬೆಳೆಯಾಗಲಿ ನಾಡು ಸಮೃದ್ಧಿಯಾಗಲಿ.ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಶಕ್ತಿಯನ್ನು ಕೂಡ ನನಗೆ ದಯಪಾಲಿಸಲಿ.ತಮ್ಮ ಈ ಸನ್ಮಾನ ತಾಲೂಕಿನ ಸೇವೆಗೆ ಇನ್ನಷ್ಷು ಸ್ಪೂರ್ತಿ.ಸರ್ವ ಜನಾಂಗದ ಅಭಿವೃದ್ಧಿಗೆ ಸದಾ ಕಂಕಣಬದ್ದನಾಗಿ ಕೆಲಸ ಮಾಡುವೆ ಎಂದು ಸನ್ಮಾನ ಸ್ವೀಕರಿಸಿ ತಿಳಿಸಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಶಿವಲಿಂಗಯ್ಯ ಕುಂಟಯ್ಯನವರಮಠ. ಮೌಳೇಶ ಬೆಳವಡಿ.ಟಿ ಎಮ್ ಬಿಕ್ಕಣ್ಣವರ.ಗಂಗಪ್ಪ ಉಳ್ಳಿಗೇರಿ ಸೋಮು ಹದ್ಲಿ .ಮಲ್ಲಪ್ಪ ಬೆಳವಡಿ.ಮಲ್ಲಿಕಾರ್ಜುನ ಹಾದಿಮನಿ ಮಡಿವಾಳೆಪ್ಪ ಪೆಂಟೇದ. ಪುರಸಭೆ ಸದಸ್ಯ ಸಂಗಮೇಶ ಹಾದಿಮನಿ ಸೇರಿದಂತೆ ಓಣಿಯ ಮುಖಂಡರು ಉಪಸ್ಥಿತರಿದ್ದರು ಈಶ್ವರ ಚೌಲಗಿ ಕಾರ್ಯಕ್ರಮ ನಿರೂಪಿಸಿದರು.