spot_img
spot_img

Savadatti News: ಸವದತ್ತಿಯಲ್ಲಿ ರಂಗ ಆರಾಧನಾ ಸಂಘಟನೆಯವರಿಂದ ದಿ.೨೭ ರಂದು ವಿಶ್ವ ರಂಗಭೂಮಿ ದಿನಾಚರಣೆ

Must Read

ಸವದತ್ತಿ – ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ರಂಗ ಆರಾಧನಾ ಸಾಂಸ್ಕ್ರತಿಕ ಸಂಘಟನೆ ಸವದತ್ತಿ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 27/3/2021 ಶನಿವಾರ ರಂದು ಪಟ್ಟಣದ ಭಗೀರಥ ಸರ್ಕಲ್ ಹತ್ತಿರದ ರಂಗ ಆರಾಧನಾ ನಾಟಕ ಮನೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಆಚರಿಸಲಾಗುವುದು.

ಸ್ಥಳೀಯ ವೈದ್ಯರಾದ ಡಾ.ಮಹೇಶ ಮಟ್ಟಿ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಝಕೀರ ನದಾಫ್ ಸಂದೇಶ ವಾಚನ ಮಾಡಲಿದ್ದಾರೆ.ಡಾಕ್ಟರ ನಯನ ಹೇಮಂತ್ ಭಸ್ಮೇ ಅತಿಥಿಗಳಾಗಿ ಆಗಮಿಸಲಿದ್ದಾರೆ.

ನ್ಯಾಯವಾದಿಗಳಾದ ಎಮ್ ಎಮ್ ಯಲಿಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗಕರ್ಮಿಗಳು ಹಾಗೂ ನಿವೃತ್ತ ಶಿಕ್ಷಕರಾದ ಎಸ್ ಬಿ ಜಗಾಪುರ ಮನೋಹರ ದೊಡಮನಿ ಸನ್ಮಾನಿತರಾಗಿ ಆಗಮಿಸಲಿದ್ದಾರೆ ಮಯೂರ ಶಿಂಧೆ ರಂಗ ಗೀತೆಗಳನ್ನು ಹಾಡಲಿದ್ದಾರೆ.

ರಂಗ ಆರಾಧನಾ ಸಾಂಸ್ಕ್ರತಿಕ ಸಂಘಟನೆ ಸವದತ್ತಿ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 28/3/2021 ರವಿವಾರ ರಂದು ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತವಾಗಿ ಗಂಗಾಶಂಕರ ಮಂಗಲ ಕಾರ್ಯಾಲಯದಲ್ಲಿ “ಹುಚ್ಚರ ಸಂತೆ ” ಎಂಬ ನಾನ್ ಸ್ಟಾಪ್ ಕಾಮಿಡಿ ಹಾಸ್ಯ ನಾಟಕವನ್ನು ಧಾರವಾಡದ ಟೂರಿಂಗ ಟಾಕೀಸ ಇವರು ಪ್ರಸ್ತುತ ಪಡಿಸಲಿದ್ದಾರೆ ಎಂದು ರಂಗ ಆರಾಧನಾ ಸಾಂಸ್ಕ್ರತಿಕ ಸಂಘಟನೆಯ ಅಧ್ಯಕ್ಷ ಶ್ರೀನಿವಾಸ ಗದಗ ರವರು ತಿಳಿಸಿದ್ದಾರೆ.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!