ಮೂಡಲಗಿ: ಸೋಮವಾರ ದಿನಾಂಕ 20-2-23 ರಂದು ಮೂಡಲಗಿ ತಹಶೀಲ್ದಾರ ಕಚೇರಿಯ ಸಭಾ ಭವನದಲ್ಲಿ ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಗ್ರೇಡ್-2 ತಹಶೀಲ್ದಾರ ಶಿವಾನಂದ ಬಬಲಿ ಮತ್ತು ಶಿರಸ್ತೇದಾರ ಪರಸಪ್ಪ ನಾಯಿಕ ಅವರು ಪೂಜೆ ಸಲ್ಲಿಸಿ ಮಾತನಾಡಿ, 16ನೇ ಶತಮಾನದಲ್ಲಿ ತಮ್ಮ ತ್ರಿಪದಿಗಳ ಮೂಲಕ ಸಮಾಜದಲ್ಲಿನ ಅಂಕು ಡೊಂಕುಗಳನ್ನು
ತಿದ್ದಿದ ಸರ್ವಜ್ಞ ಜನಮಾನಸದಲ್ಲಿ ಉಳಿದುಕೊಂಡ ಮಾನವತಾವಾದಿ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೌಡ್ಯಗಳ ವಿರುದ್ಧ ತ್ರಿಪದಿಗಳ ಮೂಲಕ ಜಾಗೃತಿಗೊಳಿಸಿದರು. ದೇಶದಲ್ಲಿ ಸಾಧು ಸಂತರು, ದಾರ್ಶನಿಕರು, ಸಮಾಜ ಸುಧಾರಕರು ಹಾಗೂ ತತ್ವಜ್ಞಾನಿಗಳು ಹುಟ್ಟಿರುವು ದರಿಂದಲೇ ಭಾರತ ಇಂದು ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಶ್ರೇಷ್ಠ ವಚನಕಾರರಲ್ಲಿ ಸರ್ವಜ್ಞನು ಒಬ್ಬರು ಎಂದರು. ಸಮಾರಂಭದಲ್ಲಿ ಮೂಡಲಗಿ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ. ಬಿ. ಪಾಟೀಲ, ಕಲ್ಲೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಾಂಡು ಬಂಗೆನ್ನವರ, ನ್ಯಾಯವಾದಿ ರಮೇಶ ಮಳಲಿ, ಎಂ. ಎಲ್.ಮಾಸ್ತರಡಿ, ಸಿದ್ದು ಬಿಸ್ವಾಗರ, ಎಸ್. ಎಸ್. ಮುದಗಲ್, ಸಚಿನ ಕೊಣ್ಣೂರ, ಯಲ್ಲಾಲಿಂಗ ಬೆಳ್ಳುವರಿ, ಮಂಜು, ಭಾರತಿ ಕಾಳಿ, ಸುರೇಖಾ ಇರಕಾರ, ಅಕ್ಷಯ ಅವಾಡೆ , ಕರಿಷ್ಮಾ ನದಾಫ ಮತ್ತಿತರರು ಉಪಸ್ಥಿತರಿದ್ದರು.