spot_img
spot_img

ಗಣೇಶ ಪೆಂಡಾಲ್ ನಲ್ಲಿ ರಾರಾಜಿಸಿದ ಸಾವರ್ಕರ್, ತಿಲಕರು

Must Read

ಬೀದರ್: ಪ್ರತಿಯೊಂದು ಗಲ್ಲಿಯಲ್ಲಿ ಕೂಡ್ರಿಸಲಾದ ಗಣೇಶನ ಪೆಂಡಾಲ್ ನಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಭಾವಚಿತ್ರಗಳು ರಾರಾಜಿಸುತ್ತಿವೆ.

ಮೊಟ್ಟಮೊದಲ ಬಾರಿಗೆ ಬೀದರ್ ನಲ್ಲಿ ಸಾವರ್ಕರ್ ಗಣೇಶ್ ಮಂಡಳ ಕೂಡ ಅಸ್ತಿತ್ವಕ್ಕೆ ಬಂದಿದ್ದು ಬೀದರ್ ತಾಲ್ಲೂಕಿನ ಕೊಳರ( ಕೆ) ಗ್ರಾಮದಲ್ಲಿ ಸ್ಥಾಪನೆ ಸಾವರ್ಕರ್ ಭಾವಚಿತ್ರದೊಡನೆ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ.

ಅಲ್ಲದೆ ಸಾವರ್ಕರ್ ಜೊತೆ ಹಿಂದೂ ಶ್ರೀರಾಮ ಸೇನೆ  ಮುಖ್ಯಸ್ಥ ಪ್ರಮೋದ್ ಮುತಾಲಿಕ ಪೋಟೋವನ್ನು ಕೂಡ ಹಾಕಲಾಗಿದೆ. ನಗರದ ಕೀರ್ತಿ ಗಣೇಶ್ ಮಂಡಳ ಪ್ರತಾಪ್ ನಗರದ  ದಲ್ಲಿ ಯುವಕರು ಸಾವರ್ಕರ್ ಜೊತೆ ಅಪ್ಪು ಪೋಟೋ ಅಳವಡಿಸಿದ್ದಾರೆ.

ವಿದ್ಯಾ ನಗರ ಕಾಲೋನಿಯಲ್ಲಿ ಸಾವರ್ಕರ್ ಮಹಾ ದ್ವಾರದಲ್ಲಿ ಪ್ರತಿಯೊಂದು ಸ್ವತಂತ್ರ ಹೋರಾಟಗಾರರ ಪೋಟೊಗಳನ್ನು ಮಹಾ ದ್ವಾರದಲ್ಲಿ ಅವಳಡಿಸಿರುವ ಯುವಕರು ಸ್ವಾತಂತ್ರ್ಯ ಹೋರಾಟಗಾರರ ಮಹತ್ವವನ್ನು ಸಾರುವ ಪ್ರಯತ್ನ ಮಾಡಿದ್ದಾರೆ.

ಒಟ್ಟಿನಲ್ಲಿ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸಾವರ್ಕರ್ ಸೇರಿದಂತೆ ಅನೇಕ ಮಹನೀಯರು ಗಣೇಶ ಉತ್ಸವದಲ್ಲಿ ಮಹತ್ವ ಪಡೆದುಕೊಂಡಿದ್ದು ಮುಂಬರುವ ಪೀಳಿಗಗೆ ಸ್ವಾತಂತ್ರ್ಯ ವೀರರ ಇತಹಾಸವನ್ನು ಸಾರುವಂತೆ ಆಗಿದ್ದು ಶ್ಲಾಘನೀಯ ಕಾರ್ಯ ಎಂದು ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!