spot_img
spot_img

ಎಂಪಿಎಲ್-೨೦೨೪ ಕ್ರಿಕೆಟ್ ಟೂರ್ನಿ: ಚಾಂಪಿಯನ್‌ಷಿಪ್ ಮುಡಿಗೇರಿಸಿಕೊಂಡ ‘ಎಸ್‌ಬಿಇ ತಂಡ’

Must Read

spot_img
- Advertisement -

ಮೂಡಲಗಿ: ಕನ್ನಡ ರಾಜ್ಯೋತ್ಸವ ಅಂಗವಾಗಿ ಮೂಡಲಗಿಯಲ್ಲಿ ಮಾರ‍್ನಿಂಗ ಸ್ಟಾರ‍್ಸ್ ಕ್ರಿಕೆಟ್ ಮತ್ತು ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ಸಹಯೋಗದಲ್ಲಿ ಆಯೋಜಿಸಿದ್ದ ‘ಎಂಪಿಎಲ್-೨೦೨೪’ ಕ್ರಿಕೆಟ್ ಟೂರ‍್ನಿಯಲ್ಲಿ ಮೂಡಲಗಿಯ ಎಸ್‌ಬಿಇ ತಂಡವು ಚಾಂಪಿಯನ್ ಷಿಪ್ ದೊಂದಿಗೆ ರೂ.೫೦,೦೦೧ ಮತ್ತು ಟ್ರೋಪಿಯನ್ನು ಪಡೆದುಕೊಂಡಿತು.

ಮೂಡಲಗಿ ರಾಯಲ್ ಚಾಲೇಂಜರ‍್ಸ್ ತಂಡವು ರನ್ನರ ಅಪ್ ಸ್ಥಾನದೊಂದಿಗೆ ರೂ೩೦,೦೦೧ ಹಾಗೂ ಟ್ರೋಪಿ ಮತ್ತು ಮೂಡಲಗಿ ಅಡ್ವೋಕೆಟರ‍್ಸ್ ತಂಡವು ರೂ.೨೦,೦೦೧ ಹಾಗೂ ಟ್ರೋಪಿಯನ್ನು ಪಡೆದುಕೊಂಡವು.

೩೬ ಬಾಲ್‌ಗಳಲ್ಲಿ ೧೦೩ ರನ್ ಪಡೆದು ಟೂರ‍್ನಿಯಲ್ಲಿ ಅತೀ ಹೆಚ್ಚು ರನ್ ಪಡೆದುಕೊಂಡಿರುವ ದರ್ಶನ ಪಾಟೀಲ ಸರಣಿ ಪುರುಷೋತ್ತಮ ಮತ್ತು ಅತ್ಯುತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಗೆ ಭಾಜನರಾದರು. ರಂಜೀತ ಉತ್ತಮ ಬಾಲರ್ ಪ್ರಶಸ್ತಿಯನ್ನ ಪಡೆದುಕೊಂಡರು.

- Advertisement -

ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ಎನ್.ಟಿ. ಪಿರೋಜಿ, ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ, ಲಯನ್ಸ್ ಕ್ಲಬ್ ಪರಿವಾರ ಅಧ್ಯಕ್ಷ ಸಂಜಯ ಮೋಕಾಶಿ, ಬಹುಮಾನ ಪ್ರಾಯೋಜಕರಾದ ಕಿರಣ ಪ್ರಕಾಶ ಸೋನವಾಲಕರ, ಸಂದೀಪ ಮಲ್ಲಪ್ಪ ಸೋನವಾಲಕರ, ಡಾ. ಮಹೇಶ ಶಿವರಾಯಪ್ಪ ಕಂಕಣವಾಡಿ ಇವರು ವಿಜೇತ ತಂಡಗಳಿಗೆ ಬಹುಮಾನಗಳನ್ನು ನೀಡಿದರು.

ಅತಿಥಿಗಳಾಗಿ ಪ್ರೊ. ಎಸ್.ಬಿ. ಖೋತ, ಬಾಲಶೇಖರ ಬಂದಿ, ಪುರಸಭೆ ಸದಸ್ಯ ಶಿವು ಚಂಡಕಿ, ಪಿಕೆಪಿಎಸ್ ಸೊಸೈಟಿ ಅಧ್ಯಕ್ಷ ಪ್ರಶಾಂತ ನಿಡಗುಂದಿ, ಈರಣ್ಣ ಜಕಾತಿ, ವೀರೇಶ ಢವಳೇಶ್ವರ, ಗಿರೀಶ ಆಸಂಗಿ, ಭೀಮಶಿ ಬಡಗಣ್ಣವರ, ಭುಜನ್ನವರ ಇದ್ದರು.

ಸಂಘಟಕರಾದ ಮಾರ‍್ನಿಂಗ್ ಸ್ಟಾರ್ ಕ್ರಿಕೆಟ್ ನ  ಶಿವಾನಂದ ಗಾಡವಿ, ಮಲ್ಲು ಕುರಬಗಟ್ಟಿ, ಸನಿತ ಸೋನವಾಲಕರ, ಗಿರೀಶ ಮೇತ್ರಿ, ಸೋಮು ಮಠಪತಿ,  ಪ್ರವೀಣ ಕುರಬಗಟ್ಟಿ, ಲಕ್ಕಪ್ಪ ತಳವಾರ, ಶಂಕರಯ್ಯ ಹಿರೇಮಠ, ರವಿ ಪತ್ತಾರ, ಎಂ.ಜಿ. ಗೌಡರ, ದೇವೆಂದ್ರ ಕಲಾಲ, ಉಸ್ಮಾನ ಮುಲ್ಲಾ ಇದ್ದರು.

- Advertisement -

 

- Advertisement -

LEAVE A REPLY

Please enter your comment!
Please enter your name here

- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group