spot_img
spot_img

ಬೇಕೆ ಬೇಕು ಬಸ್ ಬೇಕು ಎಂದು ರೋಡಿಗೆ ಇಳಿದ ಶಾಲೆ ಮಕ್ಕಳು

Must Read

spot_img

ಬೀದರ – ಮುಂಜಾನೆ ಒಂದೇ ಬಸ್ ಎಂಟು ಗಂಟೆಗೆ ಇದೆ. ಅದು ಹೋದರೆ ಶಾಲೆಗೆ ರಜೆಯೇ ಗತಿ ಆದ ಕಾರಣ ತಮಗೆ ಬಸ್ಸಿನ ಅನುಕೂಲ ಮಾಡಿಕೊಡಬೇಕು ಎಂದು ಶಾಲಾ ಮಕ್ಕಳು ಧರಣಿ ನಡೆಸಿದರು.

ಕೇಂದ್ರ ಸಚಿವ ಭಗವಂತ ಖೊಬಾ ಮತ್ತು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರ ತವರೂರಾದ ಔರಾದ ತಾಲ್ಲೂಕಿನ ಸೋರಳ್ಳಿ ಗ್ರಾಮದಲ್ಲಿ ನಡೆಯುತ್ತಿದೆ ಪ್ರತಿಭಟನೆ.

ಔರಾದ ಕ್ಷೇತ್ರದಲ್ಲಿ ಇಬ್ಬರು ಸಚಿವರು ಇದ್ದರೂ ಕೂಡ ಶಾಲೆಯ ಮಕ್ಕಳಿಗೆ ಶಾಲೆಗೆ ಹೋಗಲು ಬಸ್ ಇಲ್ಲದ ಕಾರಣ ಸೋರಳ್ಳಿ ಗ್ರಾಮದ ಸುತ್ತ ಮುತ್ತ ಇರುವ ನಾಲ್ಕೈದು ಹಳ್ಳಿಗಳ ಮಕ್ಕಳು ಸೇರಿ ಪ್ರತಿಭಟನೆ ನಡೆಸಿದರು.

ಸೋರಳ್ಳಿ ಗ್ರಾಮದಿಂದ ಔರದ ಕಡೆ ಮತ್ತು ಬೀದರ್ ಹೋಗಲು ಬಸ್ ಇಲ್ಲದೇ ಶಾಲೆ ಮಕ್ಕಳು ಹೈರಾಣವಾಗುತ್ತಿದ್ದಾರೆ ಆದ್ದರಿಂದ ಸರ್ಕಾರ ಬಸ್ ಅನುಕೂಲ ಮಾಡಿ ಕೊಡಲೇ ಬೇಕು ಎಂದು ಧರಣಿ ನಡೆಸಿದರು. ಶಾಲೆ ಮಕ್ಕಳಿಗೆ ಪ್ರತಿಭಟನೆ ನಡೆಸಲು ಪಾಲಕರು ಸಾಥ್ ನೀಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!