spot_img
spot_img

ಶಾಲಾ ಮಕ್ಕಳ ಯು.ಡಿ.ಐ.ಡಿ ಮತ್ತು ವೈದ್ಯಕೀಯ ಪ್ರಮಾಣಪತ್ರ ಶಿಬಿರ

Must Read

- Advertisement -

ಸವದತ್ತಿ – ತಾಲೂಕ ಮಟ್ಟದಲ್ಲಿ ವಿಕಲಚೇತನ ಮಕ್ಕಳಿಗೆ ಯು.ಡಿ.ಐ.ಡಿ ಮತ್ತು ವೈದ್ಯಕೀಯ ಪ್ರಮಾಣಪತ್ರ ನೀಡುವ ಸಲುವಾಗಿ ಶಿಬಿರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ನಿರ್ದೇಶನದಂತೆ ಸವದತ್ತಿಯಲ್ಲಿ ಬುಧವಾರ ಮತ್ತು ಗುರುವಾರ ಶಿಬಿರಗಳನ್ನು ಆಯೋಜಿಸುತ್ತಿದ್ದು ಇದರ ಸದುಪಯೋಗವನ್ನು ಪಾಲಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಮಕ್ಕಳ ವೈದ್ಯಕೀಯ ತಪಾಸಣೆ ಮಾಡಿಸುವ ಮೂಲಕ ಪಡೆದುಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ ಕರೆ ನೀಡಿದರು.

ಅವರು ಸವದತ್ತಿಯಲ್ಲಿ ಜರುಗಿದ ಶಾಲಾ ಮಕ್ಕಳ ಯು.ಡಿ.ಐ.ಡಿ ಮತ್ತು ವೈದ್ಯಕೀಯ ಪ್ರಮಾಣಪತ್ರ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಸವದತ್ತಿ ಮತ್ತು ತಾಲೂಕಾ ಆಸ್ಪತ್ರೆ ಸವದತ್ತಿ ಇವರ ಜಂಟಿ ಆಯೋಜನೆಯಲ್ಲಿ ಏರ್ಪಡಿಸಲಾಗಿದ್ದ ವಿಕಲಚೇತನ ಮಕ್ಕಳ ವೈದ್ಯಕೀಯ ಶಿಬಿರದಲ್ಲಿ ಕಿವಿ, ಮೂಗು ಗಂಟಲು ತಜ್ಞರಾದ ಡಾ.ಮಲ್ಲನಗೌಡರ ಮಾತನಾಡಿ, ಮನುಷ್ಯನಿಗೆ ಕಿವಿ, ಮೂಗು, ಗಂಟಲುಗಳು ಅವುಗಳ ಸ್ಥಾನ ಮತ್ತು ಕ್ರಿಯೆಗಳ ನಿಮಿತ್ತ ಪರಸ್ಪರ ನಿಕಟವಾದ ಸಂಬಂಧವನ್ನು ಪಡದಿವೆ. ಇಲ್ಲಿ ತಪಾಸಣೆ ಸಂದರ್ಭದಲ್ಲಿ ತಮಗೆ ತಿಳಿಸಲಾಗುವ ಸಲಹೆಗಳನ್ನು ಪಾಲಕರು ತಪ್ಪದೇ ಪಾಲಿಸಿ ಮಕ್ಕಳ ಆರೋಗ್ಯದ ಕಾಳಜಿ ವಹಿಸಿರಿ, ಜೊತೆಗೆ ಇಲಾಖೆಯ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

- Advertisement -

ವೈದ್ಯಕೀಯ ಕ್ಷೇತ್ರವು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಾಕಷ್ಟು ಬದಲಾವಣೆ ಕಂಡಿದ್ದು.ಎಲ್ಲ ರೋಗಗಳಿಗೂ ವೈದ್ಯಕೀಯ ರಂಗದಲ್ಲಿ ಪರಿಹಾರ ಇದೆ.ಎಲುವು ಕೀಲುಗಳ ಸಂಬಂಧಿಸಿದ ಕಾಯಿಲೆಗಳಿಂದ ಸಾಕಷ್ಟು ಮಕ್ಕಳು ಬಳಲುತ್ತಿದ್ದು ಸೂಕ್ತ ಚಿಕಿತ್ಸೆ ಪಡೆಯಲು ಪಾಲಕರು ಸಹಕರಿಸಬೇಕು.ಯು.ಡಿ.ಐ.ಡಿ ಮತ್ತು ವೈದ್ಯಕೀಯ ಪ್ರಮಾಣಪತ್ರ ಪಡೆಯುವ ಮೂಲಕ ಸೌಲಭ್ಯಗಳನ್ನು ಹೊಂದಿರಿ ಎಂದು ಡಾ.ಆರ್.ಎಮ್.ರಾಠೋಡ ತಿಳಿಸಿದರು.

ಇದೇ ಸಂದರ್ಭದಲ್ಲಿ ನೇತ್ರ ತಜ್ಞರಾದ ಡಾ.ಸಲೀಂ.ಕಿತ್ತೂರ ಉಪಸ್ಥಿತರಿದ್ದರು. ಈ ಶಿಬಿರಕ್ಕೆ ತಾಲೂಕಿನ ವಿವಿಧ ಸ್ಥಳಗಳಿಂದ ಪಾಲಕರು ಮತ್ತು ಮಕ್ಕಳು ಆಗಮಿಸಿದ್ದರು. ನಂತರ ಮಕ್ಕಳ ತಪಾಸಣೆ ಮತ್ತು ಯು.ಡಿ.ಐ.ಡಿ.ಕಾರ್ಡ ಸಂಬಂಧಿಸಿದ ಕಾರ್ಯ ವೈದ್ಯರಿಂದ ಜರುಗಿತು. ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಬಿ.ಐ.ಇ.ಆರ್.ಟಿ ವೈ.ಬಿ.ಕಡಕೋಳ ಇಲಾಖೆಯ ಉದ್ದೇಶಗಳನ್ನು ಪ್ರಾಸ್ತಾವಿಕವಾಗಿ ತಿಳಿಸಿದರು. ಗುರುಮಾತೆ ಎಂ.ಎಂ.ಸಂಗಮ ಸ್ವಾಗತಿಸಿದರು. ಸಿ.ವ್ಹಿ.ಬಾರ್ಕಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಬಿ.ಬೆಟ್ಟದ ಕೊನೆಗೆ ವಂದಿಸಿದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group