spot_img
spot_img

ಶಾಲಾ ಮಕ್ಕಳ ಶೂ ಸಾಕ್ಸ್ ಕಳಪೆ ; ಉಡಾಫೆ ಉತ್ತರ ನೀಡುತ್ತಿರುವ ಬಿಇಓ

Must Read

ವರದಿ: ಪಂಡಿತ ಯಂಪೂರೆ

ಸಿಂದಗಿ: ರಾಜ್ಯದ ಬಡ ಕೂಲಿ ಕಾರ್ಮಿಕರ ಹಾಗೂ ರೈತಾಪಿ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಖಾಸಗಿ ಶಾಲೆಗಳಲ್ಲಿ ನೀಡುವ ಸೌಲಭ್ಯಗಳನ್ನು ಸರಕಾರಿ ಶಾಲೆಗಳಲ್ಲಿ ನೀಡಬೇಕು ಹಾಗೂ ಸರಕಾರಿ ಶಾಲೆಗಳನ್ನು  ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ಅನ್ನ ಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ ಸೇರಿದಂತೆ ನೂರೆಂಟು ಸೌಲಭ್ಯಗಳನ್ನು ನೀಡುತ್ತಿದೆ ಆದರೆ ಬಿಇಓ ಸರಕಾರಿ ಆದೇಶವನ್ನು ಗಾಳಿಗೆ ತೂರಿ ಕಳಪೆ ಮಟ್ಟದ ಶೂಗಳನ್ನು ನೀಡಿದ್ದಲ್ಲದೆ ಉಡಾಫೆ ಉತ್ತರ ನೀಡಿ ದಿಟ್ಟತನದ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದಾರೆ.

ಹೌದು, ತಾಲೂಕಿನಲ್ಲಿ 125 ಎಲ್‍ಪಿಎಸ್, 210 ಎಚ್.ಪಿಎಸ್, 32 ಪ್ರೌಢಶಾಲೆ ಹೀಗೆ 367  ಶಾಲೆಗಳ ಮಕ್ಕಳ ಉತ್ತೇಜನಕ್ಕೆ ನಿತ್ಯ ಹಲವು ಯೋಜನೆಗಳು ಪೂರೈಕೆಯಾಗುತ್ತಿವೆ ಅಲ್ಲದೆ ಬಡ ಮಕ್ಕಳು ಶುಭ್ರತೆಯಿಂದ ಇರಲಿ ಇನ್ನುವ ದೃಷ್ಟಿಕೋನದಲ್ಲಿ ವರ್ಷಕ್ಕೊಮ್ಮೆ ಸಮವಸ್ತ್ರ, ಶೂ, ಸಾಕ್ಸ ಭಾಗ್ಯ ಸರಕಾರ ನೀಡುತ್ತದೆ. ಗುಣಮಟ್ಟದ ಶೂ, ಸಾಕ್ಸ ಖರೀದಿಗೆ 1ರಿಂದ 5ನೇ ತರಗತಿಯವರೆಗಿನ ಮಕ್ಕಳಿಗೆ ತಲಾ ರೂ 265, 6ರಿಂದ 8ರ ವರೆಗಿನ ಮಕ್ಕಳಿಗೆ ರೂ 295, 9 ಮತ್ತು 10ನೇ ತರಗತಿಯ ಮಕ್ಕಳಿಗೆ 325 ರಂತೆ ಮಕ್ಕಳ ಅಂಕಿ ಸಂಖ್ಯೆ ಮೇರೆಗೆ ಆಯಾ ಶಾಲಾ ಮೇಲುಸ್ತುವಾರಿ ಸಮಿತಿಯ ಖಾತೆಗೆ ಹಣ ಸಂದಾಯ ಮಾಡುತ್ತಿದೆ ಅದನ್ನು ಮುಖ್ಯಗುರುಗಳು ಹಾಗೂ ಎಸ್.ಡಿ.ಎಂ.ಸಿ ರವರ ಖರೀದಿಯ ನೇತೃತ್ವ ವಹಿಸಿ ಒಂದು ಜೊತೆ ಕಪ್ಪು ಬಣ್ಣದ ಶೂ ಎರಡು ಸಾಕ್ಸ್ ನೀಡುವುದು. ಖರೀದಿ ರಸಿದಿಯ ಟಿನ್ ನಂಬರ್ ಹಾಗೂ ಜಿ.ಎಸ್.ಟಿ ಸಂಖ್ಯೆ ಹೊಂದಿರಬೇಕು. ಈ ಸಂಸ್ಥೆಯು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೋಂದಣಿಯಾಗಿರಬೇಕು ಮತ್ತು ಆ ಕಂಪನಿಯ ಅಧಿಕೃತ ಮಾರಾಟಗಾರರಾಗಿರಬೇಕು.

ಖರೀದಿ ಮಾಡುವ ಶೂ ಗಳು ಉತ್ತಮ ಗುಣಮಟ್ಟದ ಹಾಗೂ ಬ್ರಾಂಡೆಡ್ ಕಂಪನಿಯ ಶೂಗಳನ್ನು ನೀಡಬೇಕು. ಪ್ರಸ್ತುತ ಸಾಲಿನಲ್ಲಿ ಜಾಗರೂಕತೆಯಿಂದ ಪರಿಶೀಲಿಸಿ ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರಾಂಡಗಳ (ಬಾಟಾ, ಲಿಬರ್ಟಿ, ಲಾನ್ಸರ್, ಪ್ಯಾರಾಗಾನ್, ಕರೋನ್, ಆಕ್ಷನ್, ಲಕಾನಿ, ಲೋನಾರ್, ವಿ.ಕೆ.ಸಿ, ಲಾನ್ಸರ್-ಡೇಸ್ ಇವುಗಳಲ್ಲಿ ಯಾವುದಾದರೂ ಒಂದು ಕಂಪನಿ) ಅಧಿಕೃತ ಮಾರಾಟಗಾರರಿಂದ ಶೂ ಸಾಕ್ಸ್ ಖರೀದಿಸತಕ್ಕದ್ದು ಶೂ ಹಾಗೂ ಸಾಕ್ಸ್  ಸಮಿತಿ ರಚಿಸಬೇಕು, ಎಸ್.ಡಿ.ಎಂ.ಸಿ ಅಧ್ಯಕ್ಷರು ಸಮಿತಿಯ ಅಧ್ಯಕ್ಷರು, ಮುಖ್ಯಗುರುಗಳು ಸದಸ್ಯ ಕಾರ್ಯದರ್ಶಿಗಳು, ಎಸ್.ಡಿ.ಎಂ.ಸಿ ನಾಮ ನಿರ್ದೇಶಿತ ಸದಸ್ಯರು, ಇದರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳಾ ಸದಸ್ಯರೊಳಗೊಂಡು ಸಮಿತಿಯು 5 ಜನರನ್ನು ಒಳಗೊಂಡಿರಬೇಕು.

ಈ ಸಮಿತಿಯ ಠರಾವಿನ ಮೂಲಕ ಮೂರು ಕಂಪನಿಗಳ ಕೊಟೆಶನ್ ಪಡೆದು ಒಂದು ಕಂಪನಿಗೆ ಖರೀದಿಗೆ ನಮೂದಿಸಿ ಖರೀಸತಕ್ಕದ್ದು ಹೀಗೆ ಸರಕಾರದ ಆದೇಶವಿದ್ದರೂ ಕೂಡಾ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.,ಹರನಾಳ ಅವರು ಮೇಲಧಿಕಾರಿ ಆದೇಶದಂತೆ ಒಂದು ಕಂಪನಿಯಿಂದ ತುರ್ತಾಗಿ ಸ್ಟ್ಯಾಂಡರ್ಡ ಕಂಪನಿಯ ಹೆಸರಿನ ಮೇಲೆ ಕಲಬುರ್ಗಿ ಪಂಜಾಬ ಬೂಟ್ ಹೌಸ ಮೂಲಕ ಶೂ, ಸಾಕ್ಸ ಖರೀದಿಸಿ ನೇರವಾಗಿ ಆಯಾ ಶಾಲೆಗಳಿಗೆ ರವಾನೆ ಮಾಡಿ ಮೆಲಧಿಕಾರಿಗಳ ಆದೇಶ ಪಾಲಿಸಿದ್ದೇನೆ ಎನ್ನುವ ಉಡಾಫೆ ಉತ್ತರ ನೀಡಿ ಸಮರ್ಥನೆಗೆ ಮುಂದಾಗಿದ್ದಾರೆ.


ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳು ಶುಭ್ರತೆ ಹಾಗೂ ಶಿಸ್ತಿಗೆ ಹೆಸರಾಗಬೇಕು ಎಂದು ಶೂ, ಸಾಕ್ಸ ಖರೀದಿಗೆ ಆಯಾ ಎಸ್‍ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯಗುರುಗಳ ಖಾತೆಗೆ ಸರಕಾರಿ ನಿಯಮದಂತೆ ಹಣ ಸಂದಾಯ ಮಾಡುತ್ತಿದೆ ಅದರ ಸಂಪೂರ್ಣ ನಿರ್ವಹಣೆ ಶಾಲಾ ಮೇಲುಸ್ತುವಾರಿ ಸಮಿತಿಗೆ ಸೇರಿದ್ದು ಅದರಲ್ಲಿ ಯಾರದೇ ಹಸ್ತಕ್ಷೇಪವಿಲ್ಲ ಗುಣಮಟ್ಟದ ಶೂ ಮತ್ತು ಸಾಕ್ಸ ಖರೀದಿಸಬಹುದು.

ರಮೇಶ ಭೂಸನೂರ
ಶಾಸಕರು ಸಿಂದಗಿ


ಮೇಲಧಿಕಾರಿಗಳ ಆದೇಶದಲ್ಲಿರುವಂತೆ ನಿಯಮ ಪಾಲನೆ ಮಾಡಿ ಬ್ರಾಂಡೆಡ್ ಶೂ, ಸಾಕ್ಸ್ ಖರೀದಿಗೆ ಆಯಾ ಶಾಲೆಗಳ ಮೇಲುಸ್ತುವಾರಿ ಖಾತೆಗಳಿಗೆ ಹಣ ಸಂದಾಯ ಮಾಡಲಾಗುತ್ತಿದೆ ಆ ಹಣ ಸಂಪೂರ್ಣ ಜವಾಬ್ದಾರಿ ಎಸ್‍ಡಿಎಂಸಿಯವರಿಗೆ ಇರುತ್ತದೆ ಅವರೇ ಅದಕ್ಕೆ ಸುಪ್ರೀಂ ಅವರು ಸಮಿತಿಯ ಒಪ್ಪಿಗೆ ಪಡೆದು ಖರೀದಿಸಬಹುದು

ಎಚ್.ಎಂ.ಹರನಾಳ
ಕ್ಷೇತ್ರ ಶಿಕ್ಷಣಾಧಿಕಾರಿ ಸಿಂದಗಿ


ಕಮಿಷನರ್ ತುರ್ತು ಆದೇಶದಂತೆ ಸರಕಾರ ನಿಗದಿ ಪಡಿಸಿದ ಬ್ರಾಂಡೆಡ್ ಕಂಪನಿಯಿಂದ ಶೂ ಮತ್ತು ಸಾಕ್ಸ್ ಗಳನ್ನು ಬಿಇಓ ಅವರು ಖರೀದಿಸಿದ್ದಾರೆ. ಆಯಾ ಶಾಲಾ ಮುಖ್ಯಗುರುಗಳಿಗೆ ಸಾಹೇಬರ ಆದೇಶದನ್ವಯ ಅವರು ಕಳುಹಿಸಿ ಶೂ ಮತ್ತು ಸಾಕ್ಸಗಳನ್ನು ಸ್ವೀಕರಿಸಬೇಕು ಎಂದು ಪೋಸ್ಟಮನ್ ರೀತಿಯಲ್ಲಿ ಆಯಾ ಮುಖ್ಯಗುರುಗಳಿಗೆ ರವಾನಿಸಿ ಮೇಲಾಧಿಕಾರಿಗಳ ಆದೇಶವನ್ನು ಪಾಲಿಸಿದ್ದೇನೆ. 

ಹೆಸರು ಹೇಳಲು ಇಚ್ಚಿಸದ ಅಧಿಕಾರಿ


ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಸರಕಾರಿ ಶಾಲೆಗಳನ್ನು ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಸರಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ ಬಿಇಓ ಅವರ ನಿರ್ಲಕ್ಷತನದಿಂದ ಕೆಲವೊಂದು ಸೌಲಭ್ಯಗಳು ಇದ್ದು ಇಲ್ಲದಂತಾಗಿವೆ ಎನ್ನುವುದಕ್ಕೆ ಇದೀಗ ಬ್ರಾಂಡೆಡ್ ಶೂ, ಸಾಕ್ಸ್ ಖರೀದಿಗೆ ಹಣ ಬಂದಿದೆ ಅದನ್ನು ಬಿಇಓ ಅವರು ಕಳಪೆ ಶೂ ನೀಡಿ ಹಣ ಲೂಟಿಗೆ ಮುಂದಾಗಿದ್ದಾರೆ.

ಶಬೀರಪಟೇಲ ಬಿರಾದಾರ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!