Homeಸುದ್ದಿಗಳುಮುನವಳ್ಳಿ ಶಾಲಾ ಪ್ರಾರಂಭೋತ್ಸವ

ಮುನವಳ್ಳಿ ಶಾಲಾ ಪ್ರಾರಂಭೋತ್ಸವ

ಮುನವಳ್ಳಿ : ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 2025 26 ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕನ್ನಡ ಗಂಡು ಮಕ್ಕಳ ಶಾಲೆಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶಾನೂರ್ ಜಮಾದಾರ್ ಅವರು ವಹಿಸಿದ್ದರು

ಮುಖ್ಯ ಅತಿಥಿಗಳಾಗಿ ಡಯಟ್ ಉಪನ್ಯಾಸಕ ರಾದ ಎಂ ಆರ್ ಬೇವಿನ ಗಿಡದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಂ ಎಸ್ ಹೊಂಗಲ ಗುರುಮಾತೆಯರಾದ ಬಿ ಆರ್ ಹೋಟಿ, ಎನ್,ಎನ್, ಕುರಿ ಎನ್, ಆರ್, ಕಮರಿ, ಪ್ರಭಾರಿ ಮುಖ್ಯೋಪಾಧ್ಯಾಯಿನಿಯವರಾದ ಪಿ ಎಸ್ ಕಮತಗಿ, ಕೆ, ವಿ, ತಟವಾಟಿ, ಸುಜಾತಾ, ಹೊನ್ನಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಡಯಟ್ ಉಪನ್ಯಾಸಕ ಎಂ ಆರ್ ಬೇವಿನಗಿಡದ ಮಾತನಾಡಿ “ಸರ್ಕಾರಿ ಶಾಲೆಯಲ್ಲಿ ಎಲ್ಲ ಸಹಾಯ ಸವಲತ್ತುಗಳು ಸಿಗುತ್ತಾ ಇದ್ದು ಮಕ್ಕಳ ಉತ್ತಮ ಶಿಕ್ಷಣ ಕೊಡಲು ನಾವು ನಿಮ್ಮೆಲ್ಲರ ಶ್ರಮಿಸೋಣ” ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಸಮೂಹ ಸಂಪನ್ಮೂಲ ವ್ಯಕ್ತಿ ಮೀರಾದೇವಿ, ಮುರನಾಳ ಮಾತನಾಡಿದರು ಕಾರ್ಯಕ್ರಮವನ್ನು ವೈ.ಟಿ ತಂಗೂಜಿ ನಿರೂಪಿಸಿದರು ಗುಪುಮಾತೆಯರಾದ ಎಂ ಆರ್ ಹೋಟಿ ಸ್ವಾಗತಿಸಿದರು ಎನ್ಎನ್ ಕುರಿ ವಂದಿಸಿದರು

RELATED ARTICLES

Most Popular

error: Content is protected !!
Join WhatsApp Group