spot_img
spot_img

ಲೊಯೋಲ ಶಾಲೆಯಲ್ಲಿ ಶಾಲಾ ಸಂಸತ್ತಿನ ಅಣುಕು ಅಧಿವೇಶನ

Must Read

spot_img

ಸಿಂದಗಿ: ಇಂದಿನ ಮಕ್ಕಳೇ ನಾಳಿನ ನಾಗರಿಕರು ಎಂಬಂತೆ ಇಂದು ನಡೆದ ಅಣಕು ಅಧಿವೇಶನದಲ್ಲಿ ಹಲವಾರು ವಿದ್ಯಾರ್ಥಿಗಳು ಉತ್ತಮ ನಾಯಕತ್ವದ ಗುಣಗಳನ್ನು ವ್ಯಕ್ತಪಡಿಸಿದ್ದಾರೆ.

ಇಂಥ ವಿದ್ಯಾರ್ಥಿಗಳೇ ಭವ್ಯ ಭಾರತದ ನಾಯಕರಾಗಿ  ಹೊರಹೊಮ್ಮಲಿದ್ದಾರೆ ಎಂದು ಪ್ರಾಂಶುಪಾಲ ಫಾದರ ಲ್ಯಾನ್ಸಿ ಫರ್ನಾಂಡಿಸ್ ಹೇಳಿದರು.

ಪಟ್ಟಣದ ಲೊಯೋಲ ಶಾಲೆಯಲ್ಲಿ ಶಾಲಾ ಸಂಸತ್ತಿನ ಅಣುಕು ಅಧಿವೇಶನ ದಲ್ಲಿ ಅವರು ಮಾತನಾಡಿದರು.

ನಂತರ ಆಡಳಿತ ಪಕ್ಷದ ನಾಯಕನಾದ  ಶಿವಾನಂದ ಯಂಕಂಚಿ ಈತನು ಸಭೆಯನ್ನು ಉದ್ದೇಶಿಸಿ  ಮಾತನಾಡಿ, ಎರಡೂವರೆ ತಿಂಗಳ ತಮ್ಮ ಆಡಳಿತಾವಧಿಯಲ್ಲಿ ಆಡಳಿತ ಪಕ್ಷ ಸಾಧಿಸಿದ ಸಾಧನೆಗಳ ಬಗ್ಗೆ ವಿವರಣೆ ನೀಡಿದನು. ಶಾಲೆಯ ಸ್ವಚ್ಛತೆ ಶಿಸ್ತು, ಮುಂತಾದ ವಿಷಯಗಳಲ್ಲಿ ಸಾಧಿಸಿದ ಸಾಧನೆಗಳ ಬಗ್ಗೆ ವಿವರಣೆ ನೀಡಿದನು.

ವಿರೋಧ ಪಕ್ಷದ ನಾಯಕಿಯಾದ ಕೀರ್ತಿ ಪತ್ತಾರ ಹಾಗೂ ಸಂಗಡಿಗರು  ಆಡಳಿತ ಪಕ್ಷದವರ ಸಾಧನೆಗಳ  ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.  ಯಾವ ಸಾಧನೆಯನ್ನು ಮಾಡದೆ ಆಡಳಿತ ಪಕ್ಷದವರು ಕೇವಲ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಆಡಳಿತ ಮತ್ತು ವಿರೋಧ ಪಕ್ಷದವರ ವರ್ತನೆಗಳು ದೇಶದ ಸಂಸತ್ತಿನಲ್ಲಿ ನಡೆಯುವಂತಹ ಅಧಿವೇಶನದ ನೆನಪು ಮಾಡಿಕೊಟ್ಟವು. ನಂತರ ಮೂರು ಮಸೂದೆಗಳನ್ನು ಸಭೆಯ ಮುಂದೆ ಮಂಡಿಸಲಾಯಿತು.

ಶಾಲಾ ಸ್ವಚ್ಛತೆ, ಶಾಲೆಯ ಶಿಸ್ತು ಹಾಗೂ ಗ್ರಂಥಾಲಯದ ಕುರಿತು ಮೂರು ಮಸೂದೆಗಳ ಬಗ್ಗೆ ಚರ್ಚಿಸಿ  ಮೂರನೆಯ ನಾಲ್ಕು  ಬಹುಮತದಿಂದ ಅಂಗೀಕರಿಸಲಾಯಿತು.

ಶಾಲಾ ಸಂಸತ್ತಿನ ಅಧಿವೇಶನವನ್ನು ಸಭಾಪತಿಯಾದ ಕುಮಾರಿ ಸುಕನ್ಯಾ ಪಾಟೀಲ ಆರಂಭಿಸಿ ಸಭೆಯ ನಿಯಮಗಳನ್ನು ತಿಳಿಸಿದರು. ಸಭಾಪತಿ ಸುಚಿತ್ರ ಸಿಂದಗಿಕರ ವಂದಿಸಿದರು.

ಶಾಲಾ ಸಂಸತ್ತಿನ ಅಧಿವೇಶನ ನಡೆಸುವ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಶಾಲೆಯ ಅವರು ಮಾತನಾಡಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲಾ ಸಂಸತ್ತಿನ ಅಣುಕು ಅಧಿವೇಶನವನ್ನು ವೀಕ್ಷಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!