Homeಸುದ್ದಿಗಳುಶಾಲಾ ವಾಹನ ಚಾಲಕರು ಮಕ್ಕಳನ್ನು ಜೋಪಾನವಾಗಿ ಕರೆದೊಯ್ಯಬೇಕು -

ಶಾಲಾ ವಾಹನ ಚಾಲಕರು ಮಕ್ಕಳನ್ನು ಜೋಪಾನವಾಗಿ ಕರೆದೊಯ್ಯಬೇಕು –

ಮೂಡಲಗಿ – ಶಾಲಾ ವಾಹನ ಚಾಲಕರು ನೀವು ಸಮವಸ್ತ್ರ ಧರಿಸಬೇಕು, ಚಾಲನಾ ಲೈಸೆನ್ಸ್ ಹೊಂದಿರಬೇಕು, ವಾಹನದ ವಿಮೆ ಮುಗಿದಿದ್ದರೆ ಮಾಡಿಸಬೇಕು, ಹಲವಾರು ಮಕ್ಕಳ ಜೀವ ನಿಮ್ಮ ಕೈಯಲ್ಲಿರುತ್ತದೆ. ವಾಹನದ ಬಗ್ಗೆ ಏನಾದರೂ ಕುಂದು ಕೊರತೆ ಇದ್ದರೆ ಸಂಸ್ಥೆಯ ಅಧ್ಯಕ್ಷರಿಗೆ ಹೇಳಿ ಮಾಡಿಸಬೇಕು. ಮಕ್ಕಳನ್ನು ಮನೆಗೆ ಬಿಡುವಾಗ ರಸ್ತೆ ದಾಟಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು

ಬಿಇಓ ಕಚೇರಿ ಹಾಗೂ ಆರ್ ಡಿಎಸ್ ಶಿಕ್ಷಣ ಸಂಸ್ಥೆ ಇವುಗಳ ಆಶ್ರಯದಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಮುಖ್ಯೋಪಾಧ್ಯಾಯರ, ವಾಹನ ಚಾಲಕರ ಹಾಗು ಸಹಾಯಕ ಶಾಲಾ ವಾಹನಗಳ ರಸ್ತೆ ಸುರಕ್ಷತಾ ನಿಯಮ ಪಾಲಿಸುವ ಬಗ್ಗೆ ಕರೆಯಲಾದ ಸಭೆಯಲ್ಲಿ ಅವರು ಮಾತನಾಡಿದರು.

ಶಾಲಾ ವಾಹನಗಳ ನಿಯಮಗಳ ಕುರಿತಂತೆ ಸುಪ್ರೀಮ್ ಕೋರ್ಟು ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಓದಿ ಹೇಳಿದ ಅವರು, ಈ ಮಾರ್ಗಸೂಚಿಗಳನ್ನು ಪಾಲಿಸುತ್ತ ಮುನ್ನಡೆದರೆ ಶಾಲಾ ಮಕ್ಕಳಿಗೆ, ಪಾಲಕರಿಗೆ ಹಾಗೂ ಶಿಕ್ಷಕ ಸಂಸ್ಥೆಯವರಿಗೂ ಒಳ್ಳೆಯದಾಗುತ್ತದೆ ಎಂದರು

ಪ್ರಾದೇಶಿಕ ಸಾರಿಗೆ ಅಧಿಕಾರಿ ಶಂಕರ ಕುಲಕರ್ಣಿ ಮಾತನಾಡಿ ಶಾಲಾ ವಾಹನ ಹಾಗೂ ಅದರ ಚಾಲಕರಿಗಾಗಿ ಇರುವ ನಿಯಮಗಳ ಕುರಿತು ಹೇಳಿದರು.
ಸಿಪಿಐ ಶ್ರೀಶೈಲ ಬ್ಯಾಕೂಡ ಮಾತನಾಡಿ, ವಾಹನ ಸರಿಯಿಲ್ಲದಿದ್ದರೆ ದಂಡ ಹಾಕುತ್ತೇವೆ ಆದರೆ ದಂಡ ಹಾಕುವುದೇ ಪರಿಹಾರವಲ್ಲ. ಸಮಯಕ್ಕೆ ಸರಿಯಾಗಿ ವಾಹನ ಓಡಿಸುವುದು, ವಾಹನವನ್ನು ಸರಿಯಾದ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದರು.

ತಹಶೀಲ್ದಾರ ಶಿವಾನಂದ ಬಬಲಿ ಮಾತನಾಡಿ, ಶಾಲಾ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವುದು ಎಲ್ಲ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದರು
ವೇದಿಕೆಯ ಮೇಲೆ ಎಸ್ ಎಚ್ ಕರಿಗಾರ ಸುಪರಿಂಟೆಂಡೆಂಟ್ ಆರ್ ಟಿಓ,ಪಿಎಸ್ ಐ ರಾಜು ಪೂಜಾರಿ, ಲಕ್ಷ್ಮಣ ಅಡಿಹುಡಿ ಉಪಸ್ಥಿತರಿದ್ದರು.

ಸಾಮಾಜಿಕ ಹೋರಾಟಗಾರ ಗುರು ಗಂಗಣ್ಣವರ, ಈರಪ್ಪ ಢವಳೇಶ್ವರ ಹಾಗೂ ಪತ್ರಕರ್ತ ಉಮೇಶ ಬೆಳಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಿರೂಪಣೆಯನ್ನು ಶಿಕ್ಷಣ ಸಂಯೋಜಕ ನಾಗರಾಜ ಗಡಾದ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group