ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಶಾಲಾ ಭೇಟಿ ಕಾರ್ಯಕ್ರಮ

0
101

ಮುನವಳ್ಳಿ:ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಗೆ ಹಾಗೂ ಸರಕಾರಿ ಪ್ರೌಢ ಶಾಲೆ ಗೆ ಸೌದತ್ತಿ ತಾಲೂಕಿನ ತಹಸಿಲ್ದಾರರಾದ ಮಲ್ಲಿಕಾರ್ಜುನ ಹೆಗ್ಗನ್ನವರ ಆಕಸ್ಮಿಕವಾಗಿ ಭೇಟಿ ನೀಡಿ ಎಲ್ಲ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.

ತಹಶೀಲ್ದಾರರಾದ ಮಲ್ಲಿಕಾರ್ಜುನ ಹೆಗ್ಗನ್ನವರ ಅವರು ಮಾತನಾಡಿ “ಈ ಶಾಲೆ ಶತಮಾನ ಕಂಡ ಶಾಲೆಯಾಗಿದೆ ಇಲ್ಲಿ ಮಕ್ಕಳ ಸಂಖ್ಯೆ ಮತ್ತು ಶಿಕ್ಷಕರ ಕಾರ್ಯ. ಶಾಲಾ ವಾತಾವರಣ ಕುರಿತು ಬಹಳಷ್ಟು ಸಂತಸದಿಂದ ಇಲ್ಲಿ ಬರುವ ವಿದ್ಯಾರ್ಥಿಗಳಿಗೆ ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ನೀಡಿರಿ. ಈ ಶಾಲೆಯಲ್ಲಿ ಈ ಹಿಂದೆ ಕಲಿತು ಹೋದ ಅನೇಕರು ಉನ್ನತ ಹುದ್ದೆಯಲ್ಲಿ ಇರುವರು. ಇದು ಸ್ಪರ್ಧಾತ್ಮಕ ಯುಗ. ಈ ಯುಗದಲ್ಲಿ ಮಕ್ಕಳ ಶಿಕ್ಷಣ ವಿಶಿಷ್ಟವಾದ ರೀತಿಯಲ್ಲಿ ದೊರಕುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಈ ದಿಸೆಯಲ್ಲಿ ಎಲ್ಲರೂ ಕರ್ತವ್ಯ ನಿರ್ವಹಿಸಲು ಕರೆ ನೀಡಿದರು

ಹಾಗೆಯೇ ಪ್ರೌಢಶಾಲೆ ಗೆ ಭೇಟಿ ನೀಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವಲ್ಲಿ ಆತ್ಮಸ್ಥೈರ್ಯ ಕುರಿತು ಮಾತನಾಡಿ ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆಯಲು ಕರೆ ನೀಡಿದರು.

ಶಾಲೆಯ ಶಿಕ್ಷಕರ ಬಳಗದಿಂದ ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಕಾರ್ಯಕ್ರಮವನ್ನು  ವೈಟಿ ತಂಗೋಜಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು ಪ್ರಾಸ್ತಾವಿಕವಾಗಿ ಮನವಳ್ಳಿ ಕ್ಲಸ್ಟರ್ನ ಸಿಆರ್ಪಿಗಳಾದ ಮೀರಾದೇವಿ ಮುರನಾಳ ಮಾತನಾಡಿದರು. ಎನ್ ಎನ್ ಕುರಿ ವಂದಿಸಿದರು