ರಾಜ್ಯಾದಂತ್ಯ ದಿ 29 ರಿಂದ ಶಾಲಾ ಕಾರ್ಯಾರಂಭ : ಶಿಕ್ಷಕರ ಜವಾಬ್ದಾರಿ ಗಳು

Must Read

2025-26ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಮುಖ್ಯ ಶಿಕ್ಷಕರು ಮಾಡಬೇಕಾದ ಕಾರ್ಯಗಳು. “ನಮ್ಮ ಶಾಲೆ ನಮ್ಮ ಜವಾಬ್ದಾರಿ ” ಸರರ್ಕಾದ ಸುತ್ತೋಲೆಯಂತೆ ಮತ್ತು           2025-26 ನೇ ಸಾಲಿನ “ಶೈಕ್ಷಣಿಕ ಮಾರ್ಗದರ್ಶಿ”ಯ ನಿಯಮಾವಳಿಯ ಅಂಶಗಳಂತೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ 2026 ರಲ್ಲಿ ಹತ್ತನೆ ತರಗತಿ ಫಲಿತಾಂಶ ಉನ್ನತ ಮಟ್ಟಕ್ಕೆರಿಸುವ ಧ್ಯೇಯದೊಂದಿಗೆ ಕಾರ್ಯಪ್ರವರ್ತರಾಗೋಣ. ಆ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಮಾಡಬೇಕಾಗಿರುವ ಜವಾಬ್ದಾರಿ ಕುರಿತು ಕಿರು ಪರಿಚಯ ಲೇಖನ ಇದು. ಹೊಸ ಶೈಕ್ಷಣಿಕ ವರ್ಷ ಎಲ್ಲರಿಗೂ ಹರ್ಷ ತರಲಿ, ಶೈಕ್ಷಣಿಕ ಅಭಿವೃದ್ಧಿ ಯಾಗಲೆಂದು ಆಶಿಸಿ, ನಾಡಿನ ಮುದ್ದು ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ಸ್ವಾಗತ ಕೋರುತ್ತಿದ್ದೇನೆ

1.ದಿನಾಂಕ 28-05-2025 ರಂದು ಶಾಲಾ ಆವರಣ, ತರಗತಿ ಕೋಣೆ, ಅಡುಗೆ ಕೋಣೆ, ಶೌಚಾಲಯ ಹಾಗೂ ನೀರಿನ ಸಿಂಟೆಕ್ಸ್,, ಅಡುಗೆ ಪರಿಕರ ಸ್ವಚ್ಚ ಮಾಡಿಕೊಳ್ಳುವುದು ಹಾಗೂ ಶಾಲೆಗಳ ಮೇಲ್ಛಾವಣಿ ಮೇಲಿರುವ ಕಸ ತೆಗೆಯುವುದು.
2.ದಿನಾಂಕ 29-05-2025 ರಂದು ಶಾಲಾ ಪ್ರಾರಂಭೋತ್ಸವ ತಳಿರು ತೋರಣ ಗಳಿಂದ ಶೃಂಗರಿಸಿ ಪ್ರಾರಂಭಿಸುವುದು. ಹಾಗೂ ಅಂದಿನ ದಿವಸ ಸಿಹಿ ಊಟ ಮಾಡಿಸುವುದು.

3.ಶಾಲಾ, ತರಗತಿ, ಶಿಕ್ಷಕರ ವೇಳಾ ಪಟ್ಟಿ, ಶಾಲಾ ಶೈಕ್ಷಣಿಕ ಯೋಜನೆ, ಶಾಲಾ ಅಭಿವೃದ್ಧಿ ಯೋಜನೆ, ಶಾಲಾ ಪಂಚಾಂಗ, ಸೇತು ಬಂದ ಸಾಮರ್ಥ್ಯಗಳ ಪಟ್ಟಿ ಹಾಗೂ ಪೂರ್ವ ಸಿದ್ದತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿಕೊಳ್ಳುವುದು.
4.ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುವುದು,. 2024-25 ಸಾಲಿನ ವಿದ್ಯಾರ್ಥಿಗಳ ಹಾಜರಾತಿ ಎಸ್ ಎ ಟಿ ಎಸ್ ನಲ್ಲಿ ಇಂದೀಕರಿಸಿ, ಮುಂದಿನ ತರಗತಿ ಪ್ರಮೋಟ್ ಮಾಡುವುದು.

5.ಸನ್ 2024 25 ನೇ ಸಾಲಿನ ವಿದ್ಯಾರ್ಥಿಗಳ ವಾರ್ಷಿಕ ಫಲಿತಾಂಶವನ್ನು ಎಸ್ ಎ ಟಿ ಎಸ್ ನಲ್ಲಿ ಕಡ್ಡಾಯವಾಗಿ ನಮೂದಿಸುವುದು.
6.ದಿನಾಂಕ 29. 5. 2025 ರಿಂದಲೇ. ಶಾಲೆಯಲ್ಲಿ ಬಿಸಿ ಊಟ ಪ್ರಾರಂಭಿಸುವುದು ಹಾಗೂ ದಿನಾಂಕ ಒಂದು ಜೂನ್ 2025 ರಿಂದ ಮೊಟ್ಟೆ ಬಾಳೆಹಣ್ಣು ರಾಗಿ ಮಾಲ್ಟ್ ವಿತರಿಸುವುದು.

7. ಸನ್ 2025 26 ನೇ ಸಾಲಿನಿಂದ ರಾಗಿ ಮಾಲ್ಟನ್ನು ವಾರದ ಐದು ದಿವಸಗಳ ಕಾಲ ವಿದ್ಯಾರ್ಥಿಗಳಿಗೆ ನೀಡುವುದು
8.ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ಕಾರ್ಯ ಮಾಡುತ್ತಿರುವ ಬಿಸಿ ಊಟ ಅಡುಗೆ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡಿಸಿದ ದಾಖಲೆ ಗಳನ್ನು ಪಡೆದುಕೊಂಡು ಕೆಲಸಕ್ಕೆ ಸೇರಿಸಿಕೊಳ್ಳುವುದು

9.ದಿನಾಂಕ 26.05.2025 ರಿಂದ ಮಧ್ಯಾಹ್ನ ಬಿಸಿಯೂಟ ಕ್ಕಾಗಿ ಆಹಾರ ಧಾನ್ಯ ಗಳು ಸರಬರಾಜಾಗುತ್ತಿದ್ದು ಅವುಗಳನ್ನು ಸರಿಯಾಗಿ ತೂಕ ಮಾಡಿಸಿ ಕೊಂಡು ಶಾಲೆಯಲ್ಲಿ ಇಳಿಸಿಕೊಳ್ಳುವುದು.
10.ಮುಂದಿನ ಮೂರು ತಿಂಗಳ ನಂತರ ತಮ್ಮ ಶಾಲೆಗೆ ಬೇಕಾದ ರೇಷನ್ ಪ್ರಮಾಣವನ್ನು ಸದರಿ ಶಾಲೆಯ ಮುಖ್ಯಗುರುಗಳು ಆನ್ಲೈನ್ (sats mdm) ಮೂಲಕ ಬೇಡಿಕೆ ಸಲ್ಲಿಸುವುದು.

11.ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲಾ ಸಮಯ ಪಾಲನೆ ಮಾಡುವುದು., ಹಾಗೂ ಶಿಕ್ಷಕರ ಬಯೋಮೆಟ್ರಿಕ್ ಹಾಜರಾತಿಯನ್ನು ಪ್ರತಿ ತಿಂಗಳು 24ನೇ ತಾರೀಕಿನಂದು ಜೆರಾಕ್ಸ್ ಪ್ರತಿಗಳನ್ನು ಸಿಆರ್‌ಪಿ ಅವರಿಗೆ ಸಲ್ಲಿಸುವುದು
12.ಶಾಲಾ ಆವರಣದಲ್ಲಿ ಶಾಲಾ ತರಗತಿ ಕೋಣೆ ಹಾಗೂ ಅಂಗನವಾಡಿ ಕೇಂದ್ರಗಳನ್ನು ಹೊರತುಪಡಿಸಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿ ಕೊಡಬಾರದು. ಅಂತಹ ಕಾರ್ಯ ನಡೆದರೆ ಈ ಬಗ್ಗೆ ಮೇಲಧಿಕಾರಿಗಳ ಗಮನ ಸೆಳೆಯುವುದು

13.ಸನ್ 2025-26 ನೇ ಸಾಲಿನಲ್ಲಿ ಸರಬರಾಜು ಮಾಡಿರುವ ಪಠ್ಯಪುಸ್ತಕಗಳನ್ನು ಪಡೆದುಕೊಂಡು ಮಕ್ಕಳಿಗೆ ಎಸ್ಎಟಿಎಸ್ ನಲ್ಲಿ ಸ್ವೀಕಾರ ಹಾಗೂ ವಿತರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು.
14.ಸದ್ಯದ ಮಳೆಗಾಲದಲ್ಲಿ ಮಳೆಯಿಂದ ಸೋರುತ್ತಿರುವ ಕೋಣೆಗಳಲ್ಲಿ ಹಾಗೂ ಶಿಥಿಲಗೊಂಡಿರುವ ಶಾಲಾ ಕೋಣೆಗಳಲ್ಲಿ ಮಕ್ಕಳನ್ನು ಕೂಡ್ರಿಸುವಂತಿಲ್ಲ, ವಿದ್ಯಾರ್ಥಿಗಳ ಸುರಕ್ಷತೆ ಕಡೆಗೆ ಹೆಚ್ಚಿನ ಗಮನ ನೀಡುವುದು.

15.ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಅಪಾಯಕಾರಿ ವಿದ್ಯುತ್ ಕಂಬಗಳು ಇದ್ದಲ್ಲಿ ತಕ್ಷಣ ಇಲಾಖೆಯ ಮುಖ್ಯಸ್ಥರ ಮೂಲಕ ಸಂಬಂದಿಸಿದ ಇಲಾಖೆಯ ಗಮನಕ್ಕೆ ಮಾಹಿತಿ ನೀಡುವುದು
16.ದಿನಾಂಕ 01-04-2024 ಕ್ಕಿಂತ ಮುಂಚೆ ಇರುವ ಶಾಲೆ ವಿದ್ಯುತ್ ಬಿಲ್ಲನ್ನು ಕಡ್ಡಾಯವಾಗಿ ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ಕಟ್ಟುವುದು ಇದಕ್ಕೆ  ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಕಡ್ಡಾಯವಾಗಿ ಪಡೆಯಬೇಕು.

17.ಶಾಲಾ ಅನುದಾನವು ಯಾವ ಯೋಜನೆಗೆ ಬಂದಿರುತ್ತದೆಯೋ ಆ ಯೋಜನೆಗೆ ಮಾತ್ರಆ ಅನುಧಾನ ವನ್ನು ಬಳಸಿಕೊಳ್ಳುವುದು.
18.ಶಾಲಾ ದಾಖಲಾತಿ ಗಳಲ್ಲಿ ಹಂಚಿಕೆಯಲ್ಲಿ ಮುಖ್ಯ ಗುರುಗಳು ಯಾವುದೇ ತಿದ್ದುಪಡಿಯನ್ನು ಮಾಡಬಾರದು, ಒಂದು ವೇಳೆ ಅವಶ್ಯಕತೆ ಇದ್ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಪಡೆದು ಮಾಡುವುದು ಕಡ್ಡಾಯವಾಗಿರುತ್ತದೆ.

19.ಮುಖ್ಯ ಗುರುಗಳು ಶಾಲೆಯಲ್ಲಿ ಮಧ್ಯಾಹ್ನ ಬಿಸಿ ಊಟದ ಶುಚಿ-ರುಚಿ ಹoಚಿಕೆಯನ್ನು ಕಡ್ಡಾಯವಾಗಿ ನಿರ್ವಹಿಸುವುದು. ಹಾಗೂ ಚಲನವಲನ ವಹಿಯನ್ನು ಸಹ ನಿರ್ವಹಿಸುವುದು.
20.2025-26 ನೇ ಸಾಲಿನಲ್ಲಿ ಎಮ್ ಎಚ್ ಆರ್ ಡಿ ಯೂ ಡೈಸ್ ಪ್ಲಸ್ ನಲ್ಲಿ ಜಿ ಪಿ, ಇ ಪಿ. ಎಫ್ ಪಿ ನಲ್ಲಿ ಸರಿಯಾದ ಮಾಹಿತಿಯನ್ನು ತುಂಬುವುದು. (ಓಪನ್ ಆದ ಮೇಲೆ.)
21.ಶಾಲಾ ಆಸ್ತಿಯನ್ನು ಮುಖ್ಯ ಗುರುಗಳ ಪದ ನಾಮಕ್ಕೆ ಇಲಾಖೆಯ ಆದೇಶದಂತೆ ನೊಂದಾಯಿಸಿಕೊಳ್ಳುವುದು.
22.ಶಾಲೆಯಲ್ಲಿ ದಾಖಲಾತಿ ಹೊಂದಿರುವ ವಿಕಲಚೇತನ ಮಕ್ಕಳ ಮಾಹಿತಿಯನ್ನು ಸ್ಯಾಟ್ಸ್ ನಲ್ಲಿ ನಿಖರವಾಗಿ ಸಂಪೂರ್ಣ ಮಾಹಿತಿ ನಮೂದಿಸುವುದು.

23.ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘವನ್ನು ರಚಿಸಿ, ವಾಟ್ಸಾಪ್ ಗುಂಪನ್ನು ರಚಿಸುವುದು.ಅದರ ಮೂಲಕ ಶಾಲೆಯ ಪ್ರಗತಿಗಾಗಿ ಅವರಿಂದ ಸಹಾಯ ಸಹಕಾರ ಪಡೆಯುವುದು
24.ಸರಕಾರಿ ಶಾಲೆಗಳಲ್ಲಿ ಶಾಲಾ ಸುಧಾರಣಾ ಹಾಗೂ ಮೇಲುಸ್ತುವಾರಿ ಸಮಿತಿಗಳ ರಚನೆಯ ಮೂರು ವರ್ಷದ ಅವಧಿ ಮುಗಿದ ತಕ್ಷಣ ಹೊಸದಾದ ಎಸ್ ಡಿ ಎಮ್ ಸಿ ರಚನೆ ಕಡ್ಡಾಯವಾಗಿ ಮಾಡುವುದು.
25.ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಪುರುಷ ಹಾಗೂ ಮಹಿಳಾ ಎಲ್ಲಾ ರೀತಿಯ ಸಿಬ್ಬಂದಿಯನ್ನು ಒಳಗೊಂಡಂತೆ ಹತ್ತು ಹಾಗೂ ಹತ್ತಕ್ಕಿಂತ ಹೆಚ್ಚು ಸಂಖ್ಯೆಯಲ್ಲಿದ್ದಲ್ಲಿ ಮಹಿಳಾ ಸುರಕ್ಷಾ ಸಮಿತಿಯನ್ನು ರಚಿಸಿ ಆ ಮಾಹಿತಿಯನ್ನು ಬಿ ಆರ್ ಸಿ ಕೇಂದ್ರಕ್ಕೆ ಸಲ್ಲಿಸುವುದು.

26.2025-26ನೇ ಸಾಲಿನಲ್ಲಿ ಹೊಸದಾಗಿ ಆಯ್ಕೆಯಾದ ಇಸಿಸಿಇ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ಆಂಗ್ಲ ಮಾಧ್ಯಮದ ಎಲ್ ಕೆ ಜಿ ಮತ್ತು ಯುಕೆಜಿಗೆ ದಾಖಲಾತಿ ಮಾಡಿಕೊಳ್ಳುವುದು, ಹಾಗೂ ಈಗಾಗಲೇ ಇರುವ ಇಸಿಸಿಇ ಕೇಂದ್ರಗಳಲ್ಲಿ ಒಂದನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವುದು.ಇದಕ್ಕೆ ಸಂಬಂಧಿಸಿದಂತೆ ಅತಿಥಿ ಶಿಕ್ಷಕರ ನೇಮಕಾತಿಯ ಬಗ್ಗೆ ಮುಂದಿನ ಆದೇಶದವರೆಗೆ ಕಾಯುವುದು.

27.ತಮ್ಮ ಶಾಲೆಯಲ್ಲಿ ನಡೆಯುತ್ತಿರುವ ಸಿವಿಲ್ ಕಾಮಗಾರಿಗಳ ಪ್ರಗತಿ ಮಾಹಿತಿಯನ್ನು ಕಾಲ ಕಾಲಕ್ಕೆ ತಪ್ಪದೇ ದಾಖಲೆ ಸಮೇತ ನೀಡುವುದು.
28.ಶಾಲೆಯಲ್ಲಿ ನಲಿ ಕಲಿ ತರಗತಿ ಕೋಣೆಗಳನ್ನು ಉತ್ತಮವಾಗಿ ಸಿದ್ಧಪಡಿಸಿಕೊಂಡು ನಲಿ ಕಲಿ ಮಾದರಿಯಲ್ಲಿ ಮಕ್ಕಳಿಗೆ ಬೋಧಿಸುವುದು
29.ತಮ್ಮ ಶಾಲೆಯಲ್ಲಿ ದಾಖಲಾದ ಪ್ರತಿಯೊಂದು ವಿದ್ಯಾರ್ಥಿಯು ಕಡ್ಡಾಯವಾಗಿ ಶಾಲೆಗೆ ಹಾಜರಿರುವುದು, ಸರಕಾರಿ ಶಾಲೆಯಲ್ಲಿ ಹೆಸರು ಇಟ್ಟುಕೊಂಡು ಯಾವುದೇ ಖಾಸಗಿ ಕೋಚಿಂಗ್ ಸೆಂಟರ್ ಗಳಿಗೆ ಹೋಗಲು ಅವಕಾಶ ನೀಡಕೂಡದು.

30.ವರ್ಷದ ಪ್ರತಿಯೊಂದು ತಿಂಗಳು 24 ನೇ ತಾರೀಖಿನೊಳಗೆ ತಮ್ಮ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಯಾವುದೇ ರಜೆಯ (ಹೆರಿಗೆ ರಜೆ, ಗಳಿಕೆ ರಜೆ, ಪಿತೃತ್ವ ರಜೆ, ವ್ಯಾಸಂಗ ರಜೆ, ವೇತನ ರಹಿತ ರಜೆ, ದೀರ್ಘಕಾಲಿನ ರಜೆ ಇತರ)ಮೇಲೆ ಹೋಗಿದ್ದಲ್ಲಿ ನಿಗದಿತ ನಮೂನೆಯಲ್ಲಿ ತಪ್ಪದೇ ಮಾಹಿತಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಲ್ಲಿಸುವುದು.
31.ಶಿಕ್ಷಣ ಇಲಾಖೆಯು ಕಾಲ ಕಾಲಕ್ಕೆ ಹೊರಡಿಸುವ ಪ್ರತಿಯೊಂದು ಆದೇಶಗಳನ್ನು ಓದಿಕೊಂಡು ನಿಯಮನುಸಾರ ಕಟ್ಟು ನಿಟ್ಟಾಗಿ ಪಾಲಿಸಬೇಕು.
ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸರ್ವರೂ ಶ್ರಮಿಸೋಣ

ನಾಡಿನ ಸಮಸ್ತ ಶಾಲಾ ವಿದ್ಯಾರ್ಥಿಗಳಿಗೆ ಸನ್ 2025-2026 ನೆಯ ಸಾಲಿನ ಶಾಲಾ ಆರಂಭೋತ್ಸವದ ಶುಭ ಸಮಯದಲ್ಲಿ ಹಾರ್ದಿಕ ಸುಸ್ವಾಗತ, ಈ ಶೈಕ್ಷಣಿಕ ವರ್ಷವೂ ನಿಮ್ಮ ಬದುಕಿನಲ್ಲಿ ನವ ಉತ್ಸಾಹ, ಹುಮ್ಮಸ್ಸು, ಯಶಸ್ಸು ನೀಡಲೆಂದು ಆಶಿಸುತ್ತೇನೆ.

(ಸಂಗ್ರಹ)
ಬಸವರಾಜ ಫಕೀರಪ್ಪ ಸುಣಗಾರ ಮುಖ್ಯ್ಯೊಪಾಧ್ಯಾಯರು, ಸದಾಶಿವನಗರ ಬೆಳಗಾವಿ, ಮೋ, ನ0,9481738018

Latest News

ತಾಲೂಕಿನ ಜನರಿಗೆ ನ್ಯಾಯ ದೊರಕಿಸಲು ಅನುಕೂಲ – ನ್ಯಾ. ಮೂ. ಮುದಗಲ್ಲ

ಮೂಡಲಗಿ: -ಪಟ್ಟಣದಲ್ಲಿ ಹೊಸದಾಗಿ ನ್ಯಾಯಾಲಯ ಪ್ರಾರಂಭ ಆಗುವುದರಿಂದ ತಾಲೂಕಿನಲ್ಲಿರುವ ಜನರಿಗೆ ನ್ಯಾಯ ದೊರಕಿಸಿಕೊಳ್ಳಲು ಸಹಕಾರಿಯಾಗುವುದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಬೆಳಗಾವಿ ಜಿಲ್ಲಾ ನ್ಯಾಯಾಲಯದ...

More Articles Like This

error: Content is protected !!
Join WhatsApp Group