spot_img
spot_img

ಗಣಿತ ಲೋಕದಿಂದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ

Must Read

spot_img

“ಗಣಿತವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಇಡೀ ಪ್ರಕೃತಿಯಲ್ಲಿಯೇ ಗಣಿತದ ಸಾರ ಅಡಗಿದ್ದು ಇವತ್ತು ತಂತ್ರಜ್ಞಾನ ಮುಂದುವರೆಯಲು ನಮ್ಮ ಭಾರತೀಯ ಅನೇಕ ಗಣಿತಶಾಸ್ತ್ರಜ್ಞರ ಕೊಡುಗೆ ಬಹಳಷ್ಟಿದೆ. ಶೂನ್ಯವನ್ನು ಕಂಡು ಹಿಡಿದು ಜಗತ್ತಿನ ಗಣಿತಜ್ಞರ ವಿಚಾರಗಳನ್ನು ಬದಲಿಸಿದ ಕೀರ್ತಿ ನಮ್ಮ ದೇಶಕ್ಕಿದೆ. ಇಂತಹ ಗಣಿತಲೋಕದಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ”  ಎಂದು ಪ್ರಾಂಶುಪಾಲರಾದ ಎಸ್.ಡಿ.ಗಾಣಿಗೇರ ಅವರು ತಿಳಿಸಿದರು.

ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ ಗಣಿತ ವಿಭಾಗದ ವತಿಯಿಂದ ದಿನಾಂಕ:-17-08-2022 ರಂದು  ಹಮ್ಮಿಕೊಂಡ  ಗಣಿತ ಲೋಕ ವಿಜ್ಞಾನ ವಸ್ತು  ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ,  “ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿರುವ ನಾವುಗಳು ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ವಸ್ತು ಪ್ರದರ್ಶನಗಳ ಅವಶ್ಯಕತೆ ತುಂಬಾ ಅಗತ್ಯವಾಗಿದೆ. ನಮ್ಮ ಮಹಾವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡ ಈ ವಸ್ತು ಪ್ರದರ್ಶನ ಕಾರ್ಯಕ್ರಮ ತುಂಬಾ ಸ್ತುತ್ಯಾರ್ಹವಾಗಿದೆ ಇದರ ಸದುಪಯೋಗವನ್ನು ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ” ಎಂದು ಕರೆ ನೀಡಿದರು.

ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಜೊತೆಗೆ ಉಳಿದ ವಿಭಾಗಗಳಾದ ಬಿ.ಎ. ಬಿ.ಕಾಂ, ಬಿ.ಬಿ.ಎ ಹಾಗೂ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ಎಟಿಎಮ್ ಮಷಿನ್, ಕ್ಯಾಲೆಂಡರ್, ಆರ್ಯಭಟ ಕಾಲೋನಿ , ಮೊಬೈಲ್ ಟವರ್, ಕಸದಿಂದ ರಸ, ಚಾರ್ಟ , ಪ್ರಸಿದ್ಧ ಗಣಿತಶಾಸ್ತ್ರಜ್ಞರ ಭಾವಚಿತ್ರಗಳು, 3ಡಿ ಹಾಲೋಗ್ರಾಮ್, ದಿನಾಂಕದ ಮೂಲಕ ವಾರವನ್ನು ಕಂಡುಹಿಡಿಯುವುದು ಇತ್ಯಾದಿಗಳ ಪ್ರದರ್ಶನವನ್ನು  ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗಣಿತ ವಿಭಾಗದ ಮುಖ್ಯಸ್ಥರು ಹಾಗೂ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್. ಸಹಾಯಕ ಪ್ರಾಧ್ಯಾಪಕರುಗಳಾದ ಬಿ.ಎಸ್.ಕೆಸರಗೊಪ್ಪ , ವೀಣಾ ಮೂಗನೂರ,  ಶ್ರೀಮತಿ ಶಿವಲೀಲಾ ಎಚ್.ಬಿ, ಬಿ.ಎಸ್ ನಾಯಕ, ಹಾಲಪ್ಪ ಮಡಿವಾಳರ, ಅಮಿತ ಗುರುವ , ಬಿ.ಸಿ.ಹೆಬ್ಬಾಳ, ಶಿವಾನಂದ ಚಂಡಕೆ, ಸಂಜೀವ ಮದರಖಂಡಿ, ಸಂಜೀವಕುಮಾರ ಗಾಣಿಗೇರ,  ಶ್ರೀಮತಿ ಶೀತಲ ತಳವಾರ, ಶಿವಕುಮಾರ, ಶ್ರೀಮತಿ ಗಾಯತ್ರಿ ಸಾಳೋಖೆ, ಅರುಣ ಕಡಾಡಿ, ಶ್ರೀಮತಿ ಶೀಲಾ ಗಡಾದ, ಶ್ರೀಮತಿ ರಶ್ಮಿ ಹಳ್ಳೂರ  ಮುಂತಾದವರು ಭಾಗವಹಿಸಿದ್ದರು.

ಈ ಒಂದು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಗಣಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅಶ್ವಿನಿ ಎಸ್ ಹಾಗೂ ಉಪನ್ಯಾಸಕರಾದ ಸುನಿತಾ ಗೊರಬಾಳ,  ಮಲ್ಲಿಕಾರ್ಜುನ ಹೊಟ್ಟೆನ್ನವರ ಆಯೋಜಿಸಿದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!