spot_img
spot_img

ಸ್ಕೌಟ್ಸ್ ಮತ್ತು ರೋವರ್ಸ್ ಬೇಸಿಗೆ ಶಿಬಿರ ಸಮಾರೋಪ

Must Read

- Advertisement -

ಮೂಡಲಗಿ: ಸ್ಕೌಟ್ಸ್ ಮತ್ತು ರೋವರ್ಸ ಘಟಕದಲ್ಲಿ ವಿದ್ಯಾರ್ಥಿ ಪಾಲ್ಗೊಳುವುದರಿಂದ ಶಿಸ್ತು, ಸಮಯ ಪ್ರಜ್ಞೆ, ವ್ಯಕ್ತಿತ್ವ ವಿಕಾಸನ ಬೆಳೆಸಿಕೊಳ್ಳಲು ಸಹಕಾರಿ ಯಾಗುವುದರ ಜೊತೆ ಗೌರವ ಹೆಚ್ಚುತ್ತದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಸ್ಕೌಟ್ಸ್ ಮತ್ತು ರೋವರ್ಸ ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಎಸ್.ಎಸ್.ಆರ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಆಶ್ರಯದಲ್ಲಿ ಸ್ಕೌಟ್ಸ್ ಮತ್ತು ರೋವರ್ಸ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಅವರು ಮಾತನಾಡಿ, ಸ್ಕೌಟ್ಸ್ ಮತ್ತು ರೋವರ್ಸ ಶಿಬಿರಾರ್ಥಿಗಳು ಶಿಬಿರದ ಸದುಪಯೋಗ ಪಡಿಸಿಕೊಂಡು ಸಮಾಜಕ್ಕೆ ಮತ್ತು ದೇಶಕ್ಕೆ ಸೇವೆ ಸಲ್ಲಿಸಬೇಕೆಂದರು. 

ಬೆಳಗಾವಿ ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ಸಹಾಯಕ ರಾಜ್ಯ ಸಂಘಟನಾ ಆಯುಕ್ತ ಡಿ.ಬಿ.ಅತ್ತಾರ ಅವರು ಸ್ಕೌಟ್ಸ್ ಮತ್ತು ರೋವರ್ಸ ಶಿಬಿರಾರ್ಥಿಗಳಿಗೆ ಪ್ರಾರ್ಥನೆ ಮತ್ತು ಸ್ಕೌಟ್ಸ್ ಝಂಡಾ ಗೀತೆಯ ಅರ್ಥವನ್ನು ತಿಳಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ದಿಂದ ವಿಶ್ವಾಸಾರ್ಹರರು, ನಿಷ್ಠಾವಂತರು, ಎಲ್ಲರಿಗೂ ಸ್ನೇಹಜೀವಿಗಳು, ಪ್ರಾಣಿ ಮಿತ್ರನು, ಪ್ರಕೃತಿ ಪ್ರೇಮಿ, ಶಿಸ್ತನ್ನು  ಮೈಗೂಡಿಸಿ ಕೊಳ್ಳಲು ಸಹಾಯಮಾಡುತ್ತದೆ ಎಂದರು. 

- Advertisement -

ಮೂಡಲಗಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ, ಶಿಬಿರಾರ್ಥಿಗಳು ತಮ್ಮ ಸುತ್ತಮುತ ಪರಿಸರದಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡುವದರೊಂದಿಗೆ ಸಮಾಜದಲ್ಲಿಯೂ ಪ್ಲಾಸ್ಟಿಕ್ ಮುಕ್ತ ಭಾರತ ಮಾಡಲು ಜನರಲ್ಲಿ ಅರಿವು ಮೂಡಿಸಬೇಕೆಂದರು. 

ಅಧ್ಯಕ್ಷತೆ ವಹಿಸಿದ ಎಂಇಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ ಮಾತನಾಡಿದರು.

ಸಮಾರಂಭದ ವೇದಿಕೆಯಲ್ಲಿ  ಮೂಡಲಗಿ ರೋವರ್ಸ್ ಘಟಕದ ಕಾರ್ಯದರ್ಶಿ ಬಸವರಾಜ ನಿಡೋಣಿ, ಎಸ್.ಎಸ್.ಆರ್ ಪ.ಪೂ ಕಾಲೇಜಿನ ಪ್ರಾಚಾರ್ಯ ಎಸ್.ಡಿ.ತಳವಾರ, ಮಹಾವಿದ್ಯಾಲಯದ ರೋವರ್ಸ್ ಮುಖ್ಯಸ್ಥ ಪ್ರೊ.ಜಿ.ವಿ.ನಾಗರಾಜ, ಎಸ್.ಎಸ್.ಆರ್ ಪ.ಪೂ ಕಾಲೇಜಿನ ರೋವರ್ಸ್ ಮುಖ್ಯಸ್ಥ ಬಿ.ಜಿ.ಗಡಾದ, ಎಸ್.ಎಸ್.ಆರ್ ಪ್ರೌಢ ಶಾಲೆಯ ಸ್ಕೌಟ್ಸ್ ಶಿಕ್ಷಕ ಬಿ.ಕೆ.ಕಾಡಪ್ಪಗೋಳ ಉಪಸ್ಥಿತರಿದ್ದರು.

- Advertisement -

ಶಿಬಿರಾರ್ಥಿಗಳಾದ ಗಂಗಾಧರ ಚಿನ್ನಾಕಟ್ಟಿ ಮತ್ತು ಜಗದೀಶ ಬನವಿ ಪ್ರಾರ್ಥಿಸಿದರು, ಗುರುನಾಥ ಗಡಾದ ಸ್ವಾಗತಿಸಿದರು, ಭೂಮಿಕಾ ಮುಧೋಳ ಪರಿಚಯಿಸಿದರು, ಮಲ್ಲಿಕಾರ್ಜುನ ಗಡಾದ ಮತ್ತು ವಿದ್ಯಾ ದಾಸರ ನಿರೂಪಿಸಿದರು, ವಿಠ್ಠಲ ವಡೆಯರ ವಂದಿಸಿದರು.

- Advertisement -
- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group