ಸ್ಕೌಟ್ಸ್ ಮತ್ತು ಸೇವಾದಳ ಕಾರ್ಯಕ್ರಮ ದ ಮಿಲಾಪ್

0
112

ಸವದತ್ತಿ : ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ಸ್ಕೌಟ್ ಮತ್ತು ಸೇವಾದಳ ದ ಮಿಲಾಪ್ ಚಟುವಟಿಕೆ ಇತ್ತೀಚೆಗೆ ಆಯೋಜಿಸಲಾಗಿತ್ತು

ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಅರ್ಜುನ ಕಾಮನ್ನವರ. ಸೇವಾದಳ ಅಧ್ಯಕ್ಷರಾದ ಬಿ. ಬಿ. ನರಗುಂದ, ಜಿಲ್ಲಾ ಕೋಶಾಧ್ಯಕ್ಷರಾದ ಡಾ. ಅಭಿನಂದನ ಕಬ್ಬಿನ. ಜಿಲ್ಲಾ ಸಂಘಟನೆಯ ಅನಿಲ್ ಪತ್ತಾರ ತಾಲೂಕಿನ ಅಧಿನಾಯಕರಾದ ಎಂ. ಬಿ. ಚುಂಚನೂರ. ಭಾರತ ಸೇವಾದಳದ ಜಿಲ್ಲಾ ಸಂಚಾಲಕರಾದ ಜಗದೀಶ ತಳವಾರ ಮೊದಲಾದವರು ಉಪಸ್ಥಿತರಿದ್ದರು.

ಬಿ. ಬಿ. ನರಗುಂದ ಕಾರ್ಯ ಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಘಟಕರಾದ ಅನಿಲ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿ “ತಾಲೂಕಿನಲ್ಲಿ ಹೆಚ್ಚು ಶಾಖೆ ಗಳು ನೋಂದಣಿ ಮಾಡಿಕೂಂಡಿದ್ದು ಎಲ್ಲ ಶಿಕ್ಷಕರು ಸೇವಾದಳ ಚಟುವಟಿಕೆಗಳನ್ನು ಮಕ್ಕಳಿಗೆ ಮಾಡಿಸಿ ದೇಶಾಭಿಮಾನ . ರಾಷ್ಟ್ರಾಭಿಮಾನ.ಮೂಡಿಸಲು ಕರೆ ನೀಡಿದರು.

ಭಾರತ ಸೇವಾದಳ ಜಿಲ್ಲಾ ಕೋಶ್ಯಾದ್ಯಕ್ಷರಾದ ಡಾ. ಅಭಿನಂದನ ಕಬ್ಬಿನ.”ಮಕ್ಕಳನ್ನು ಉತ್ತಮ ಪ್ರಜೆ ಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಸೇವಾದಳದ ಚಟುವಟಿಕೆಗಳನ್ನು ಮಾಡಿಸಬೇಕು ಮುಂದಿನ ದಿನಗಳಲ್ಲಿ ಸವದತ್ತಿ ಯಲ್ಲಿ ಮಕ್ಕಳ ಮೇಳವನ್ನು ಮಾಡೋಣ.ಎಂದು ಹೇಳಿದರು.

ಶಿಕ್ಷಣ ಸಂಯೋಜಕರಾದ ಎ.ಬಿ.ಕಾಮಣ್ಣವರ ಮಾತನಾಡಿ ಶಿಕ್ಷಕರು ಬೋಧನೆ ಹಾಗೂ ಇತರೆ ಚಟುವಟಿಕೆಗಳೂಂದಿಗೆ ಸೇವಾದಳ ಚಟುವಟಿಕೆಗಳನ್ನು ಮಾಡಿಸಬೇಕು ಮತ್ತು ಧ್ವಜದ ಮಹತ್ವ ತಿಳಿಸಿ ರಾಷ್ಟ್ರಾಭಿಮಾನ ದೇಶಾಭಿಮಾನ ಗಡಿಕಾಯುವ ಸೈನಿಕರಂತೆ ಮಕ್ಕಳಿಗೆ ಶಿಸ್ತನ್ನು ಕಲಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಶಾಲೆಗಳ ಸ್ಕೌಟ್ಸ್ ಮತ್ತು ಸೇವಾದಳ ಶಿಕ್ಷಕರು ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕರಾದ ಜಗದೀಶ ತಳವಾರ ಕಾರ್ಯ ಕ್ರಮ ನಿರೂಪಿಸಿದರು. ಎಂ ಬಿ ಮುದ್ದನಗೌಡರ ಸ್ವಾಗತಿಸಿದರು. ಎಂ. ಬಿ. ಕೊಡ್ಲಿ ವಂದಿಸಿದರು