ಸಿಂದಗಿ: ಪುರಸಭೆ ಆಸ್ತಿ ಪೌರ ಕಾರ್ಮಿಕರು ಎಂದರೆ ಜನರ ಸೇವಕರು ಅವರಿಗೆ ಭದ್ರತೆ ಕೊಡಬೇಕು.ಅವರ ಬದುಕಿಗೆ ಭದ್ರತೆ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ವಿಶ್ರಾಂತಿ ಭವನ, ಈ-ಆಫೀಸ್ ತಂತ್ರಾಂಶ ಅಳವಡಿಕೆಗೆ ಚಾಲನೆ ಹಾಗೂ ಪೌರ ಕಾರ್ಮಿಕರಿಗೆ ನಿವೇಶನ ಹಕ್ಕು ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ, ೨೯ ಜನ ಪೌರ ಕಾರ್ಮಿಕರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿ, ಡಾ. ಅಂಬೇಡ್ಕರ ಅವರು ಪ್ರತಿ ೫ ವರ್ಷಕ್ಕೊಮ್ಮೆ ಅಧಿಕಾರ ಕೊಟ್ಟಿದ್ದಾರೆ. ನಿರೀಕ್ಷೆಯಂತೆ ಸ್ವಚ್ಚತೆ, ನೀರು, ವಿದ್ಯುತ್, ರಸ್ತೆ, ಒಳಚರಂಡಿ ಯೋಜನೆಗಳನ್ನು ನೀಡಿದ್ದಾದರೆ ಜನರ ನೋವು ನಲಿವುಗಳಿಗೆ ಸ್ಪಂಧಿಸಿದಂತಾಗುತ್ತದೆ ಅದಕ್ಕೆ `ಪಟ್ಟಣದಲ್ಲಿ ಮನೆ, ಮನೆಗೆ ೨೪ ಗಂಟೆಗಳ ಕಾಲ ಕುಡಿಯುವ ನೀರು ಯೋಜನೆಗಾಗಿ ಈಗಾಗಲೇ ಸರ್ಕಾರದಿಂದ ೭೪೬ ಕೋಟಿ ಅನುದಾನ ಬಿಡುಗಡೆಗೊಂಡಿದೆ. ಇನ್ನೂ ೭೫೦ ಕೋಟಿ ಅನುದಾನ ಮಂಜೂರು ಹಂತದಲ್ಲಿದೆ ಎಂದು ಹೇಳಿದ ಅವರು, ಇನ್ನುಳಿದ ೧೭ ಜನ ಪೌರ ಕಾರ್ಮಿಕರಿಗೆ ನಿವೇಶನ ವಿತರಣೆ ಮಾಡುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ನಿವೇಶನ ಹಂಚಿಕೆ ಮಾಡುವುದಲ್ಲದೆ ಮನೆ ಕಟ್ಟಿಕೊಳ್ಳಲು ಅನುದಾನ ಮಂಜೂರು ಮಾಡಿಸುವದಾಗಿ ಭರವಸೆ ನೀಡಿದರು.
ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, “ನಾನೊಬ್ಬ ಪೌರ ಕಾರ್ಮಿಕಳ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವೆ. ಕಳೆದ ಅವಧಿಯಲ್ಲಿ ಗಾಂವಠಾಣೆ ಜಾಗೆಯನ್ನು ಪುರಸಭೆಗೆ ತೆಗೆದುಕೊಂಡು ಪೌರಕಾರ್ಮಿಕರಿಗೆ ವಿತರಣೆ ಮಾಡಲು ಅಂದು ಅದ್ಯಕ್ಷರಾಗಿದ್ದ ಬಾಷಾಸಾಬ ತಾಂಬೋಳಿ ಅವರ ಪಾಲು ಇದೆ. ಇಂದು ಪುರಸಭೆ ಕಾರ್ಯಾಲಯದಿಂದ ಗೌರವ ಸನ್ಮಾನ ಸ್ವೀಕರಿಸಿದ ಜಯಶ್ರೀ ಕೂಚಬಾಳ ಪೌರ ಕಾರ್ಮಿಕಳಾಗಿದ್ದ ಭೀಮಬಾಯಿ ಕೂಚಬಾಳ ಮೊಮ್ಮಗಳು. ಇವಳು ಚಿ-೨೩ ಮಹಿಳಾ ಟಿ-೨೦ ಕ್ರಿಕೆಟ್ ಟ್ರೋಫಿ ರಾಜ್ಯ ತಂಡಕ್ಕೆ ಆಯ್ಕೆಗೊಂಡಿದ್ದಾರೆ. ಪುರಸಭೆ ಕಾರ್ಯಾಲಯದಿಂದ ಇವಳಿಗೆ ೧.೫೦ ಲಕ್ಷ ರೂಪಾಯಿ ಮೊತ್ತದ ಕ್ರಿಕೆಟ್ ಕಿಟ್ ನೀಡುತ್ತಿರುವುದು ನನಗೆ ಅಪಾರ ಅಭಿಮಾನ ತರಿಸಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಬಸವರಾಜ ಯರನಾಳ, ಪುರಸಭೆ ಸಾಯಬಣ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯಮಟ್ಟದ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಗೊಂಡ ಪಟ್ಟಣದ ಪದ್ಮರಾಜ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಜಯಶ್ರೀ ರಾಜಶೇಖರ ಕೂಚಬಾಳ ಅವರನ್ನು ಪುರಸಭೆ ವತಿಯಿಂದ ಗೌರವಿಸಲಾಯಿತು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ‘ಅಧಿಕಾರ ಶಾಶ್ವತವಲ್ಲ. ಅಭಿವೃದ್ಧಿ ಕಾರ್ಯಗಳು ಶಾಶ್ವತ ಎಂಬುದು ಜನಪ್ರತಿನಿಧಿಗಳ ಅರಿವಿನಲ್ಲಿರಬೇಕು ಎನ್ನುವುದು ಮನಗೂಳಿ ಮನೆತನಕ್ಕಿದೆ ಆ ರೀತಿಯಲ್ಲಿ ಯಾವ ಇಲಾಖೆಯಲ್ಲಿ ಯಾವ ಅನುಧಾನವಿದೆ ಎನ್ನುವದು ಶಾಸಕರಿಗೆ ಹೊಸದೇನು ಅಲ್ಲ. ಅಭಿವೃದ್ಧಿಗೆ ಸಾಕ್ಷಿಯಾಗುತ್ತಿದ್ದಾರೆ ಎಂದು ಅಭಿಮತ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ವಹಿಸಿದ್ದರು.
ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಸದಸ್ಯರು, ಆಶ್ರಯ ಸಮಿತಿ ಸದಸ್ಯರು ವೇದಿಕೆಯಲ್ಲಿದ್ದರು.