ರೈತರಿಗೆ ಬೀಜ ವಿತರಣೆಗೆ ಚಾಲನೆ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಸಿಂದಗಿ: ಕಳೆದ ಒಂದೂವರೆ ವರ್ಷದಿಂದ ಕರೋನಾ ಆರ್ಭಟದ ಮಧ್ಯದಲ್ಲಿ ಮಳೆರಾಯನ ಆಗಮನವಾಗಿ 100 ಎಂಎಂ ಮಳೆಯಾಗಿದ್ದು ಇಲ್ಲಿಯವರೆಗೆ 1125 ಹೆಕ್ಟೆರ ಪ್ರದೇಶ ಬಿತ್ತನೆ ಕಾರ್ಯಕ್ಕೆ ಸಜ್ಜಾಗಿದೆ. ರೈತರಿಗೆ ಅನುಕೂಲವಾಗಲೆಂದು ಕರೋನಾ ಭೀತಿಯಲ್ಲೂ ಯಾವದೇ ಸರಕಾರ ಮಾಡದ ಕಾರ್ಯ ಬಿಜೆಪಿ ಸರಕಾರ ಬೀಜ ವಿತರಣೆ ಮಾಡುತ್ತಿದೆ ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.

ಪಟ್ಟಣದ ಕೃಷಿ ಇಲಾಖಾ ಆವರಣದಲ್ಲಿ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತೊಗರಿ 271 ಕ್ವಿಂ, ಮೆಕ್ಕೆಜೋಳ 100 ಕ್ವಿಂ, ಸಜ್ಜೆ 2.7 ಕ್ವಿಂ, ಸೂರ್ಯಕಾಂತಿ 1.2 ಕ್ವಿಂ, ಹೆಸರು 60 ಕೆಜಿ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು ರೈತರು ಕಡ್ಡಾಯವಾಗಿ ಮಾಸ್ಕಗಳನ್ನು ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ನೂಕು ನುಗ್ಗಲು ಮಾಡದೇ ಬೀಜಗಳನ್ನು ಪಡೆದುಕೊಳ್ಳಬೇಕು ಮತ್ತು ಬೇಡಿಕೆಗಳನುಗುಣವಾಗಿ ಮತ್ತೆ ಬೀಜಗಳನ್ನು ತರಿಸುವ ಭರವಸೆ ಅಧಿಕಾರಿಗಳು ನೀಡಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಅಲ್ಲದೆ ಲಿಂಬೆ ಅಭಿವೃದ್ಧಿಗೆ ರೈತರು ಮುಂದಾದರೆ ಅವರಿಗೆ ಸರಕಾರದಿಂದ ಸೌಲಭ್ಯ ಒದಗಿಸಿಕೊಡುವದಾಗಿ ಭರವಸೆ ನೀಡಿದರು.

ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಮಾತನಾಡಿ, ಪಟ್ಟಣದ ಕೃಷಿ ಬೀಜ ಸಂಸ್ಕರಣ ಘಟಕ ಹಾಗೂ ಯಂಕಂಚಿ ಪಿಕೆಪಿಎಸ್‍ನಲ್ಲಿ ಒಂದು ಘಟಕವನ್ನು ತೆರೆಯಲಾಗಿದ್ದು ಆಯಾ ಭಾಗದ ರೈತರು ಬೀಜಗಳನ್ನು ಸರಕಾರದ ಸಬ್ಸಿಡಿ ರೂಪದಲ್ಲಿ ಪಡೆದುಕೊಳ್ಳಬೇಕು ಕೊರತೆಯಾಗುತ್ತಿವೆ ಎನ್ನುವದರ ಬಗ್ಗೆ ಗಮನ ಹರಿಸಿದರೆ ಅಧಿಕಾರಿಗಳಿಗೆ ಒತ್ತಡ ಹೇರಿ ದಾಸ್ತಾನ ಮಾಡಲು ತಾವು ಕೂಡಾ ಸಹಕಾರ ನೀಡುವುದಾಗಿ ಹೇಳಿದರು.

- Advertisement -

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಶಿವಾನಂದ ಹೂನಳ್ಳಿ, ಎಂ.ಡಿ ಶಿತನೂರ, ಶಿವಶರಣು ತಾವರಖೇಡ, ಶ್ರೀಶೈಲ ಯಳಮೇಲಿ ಸೇರಿದಂತೆ ಹಲವರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!