ಸಿಂದಗಿ: ಆಲಮೇಲ ತಾಲೂಕಿನ ವಿಭೂತಿಹಳ್ಳಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಬಾಲಕಿಯರ ವಾಲಿಬಾಲ್ ತಂಡ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಸಿಂದಗಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಅಲ್ಮೆಲ್ ತಾಲೂಕಿನ ವಿಭೂತಿಹಳ್ಳಿಯ ಕಿತ್ತೂರ್ ರಾಣಿ ಚೆನ್ನಮ್ಮ ವಸತಿ ಶಾಲೆಯ ಬಾಲಕಿಯರ ತಂಡ ಫೈನಲ್ ಪಂದ್ಯದಲ್ಲಿ ತಮ್ಮ ಕ್ರೀಡಾ ಕೌಶಲ್ಯ, ಹೊಂದಾಣಿಕೆಯುತ, ರೋಚಕ ರೀತಿಯಲ್ಲಿ ಆಟವನ್ನಾಡಿ ಗೆಲುವು ಸಾಧಿಸಿದೆ.
ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಪ್ರವೇಶ ಪಡೆದಿದೆ.
ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಈ ತಂಡಕ್ಕೆ ಶಾಲೆಯ ಪ್ರಾಂಶುಪಾಲ ಪ್ರಭಾಕರ್ ಪಾಟೀಲ, ದೈಹಿಕ ಶಿಕ್ಷಕ ಈಶ್ವರ ಬಿರಾದಾರ, ಟೀಮ್ ಮ್ಯಾನೇಜರ್ ಬಸವರಾಜ ಭೂತಿ, ಧರೆಪ್ಪ ಬಿರಾದಾರ್, ಎಂ. ಎ. ಪಿರಜಾದೆ, ಎಸ್. ಎ. ಶೇಖ್, ರೋಪಾದೇವಿ, ಅನಿತಾ ಆಸಂಗಿಹಾಳ, ಆರ್ ಎ ಹಿರೇಮಠ, ಶ್ರೀಮತಿ ಎಸ್ ಎಸ್ ಗೆರಡ, ಕು. ಜ್ಯೋತಿ ದುರ್ಗ,ಶ್ರೀಮತಿ ಗಂಗಾಬಾಯಿ ನಿಲಯಪಾಲಕಿ ಮಾಲತಿ ತಡಲಗಿ ಹಾಗೂ ಶಾಲೆಯ ಸರ್ವ ಸಿಬ್ಬಂದಿಗಳು, ವಿದ್ಯಾರ್ಥಿನಿಯರು ಸಂತಸ ವ್ಯಕ್ತಪಡಿಸಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.