ಸಿಂದಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ತಾಲೂಕ ಶಾಖೆ ಸಿಂದಗಿ ಇದರ ೨೦೨೪ -೨೯ರ ಅವಧಿಗಾಗಿ ನಡೆದ ಚುನಾವಣೆಯಲ್ಲಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾಗಿ ಅಶೋಕ ತೆಲ್ಲೂರ ಇವರು ಹಾಗೂ ರಾಜ್ಯ ಪರಿಷತ್ ಸದಸ್ಯರಾಗಿ ಭೀಮನಗೌಡ ಬಿರಾದಾರ ಖಜಾಂಚಿಯಾಗಿ ಇಮ್ರಾನ್ ಮಕಾಂದರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ಅಪ್ಪಾರಾವ್ .ಶರಣಪ್ಪ. ರುಕುಂಪುರ ಮತ್ತು ಉಪ ಚುನಾವಣಾಧಿಕಾರಿ ರುದ್ರಸ್ವಾಮಿ, ಶಿವಯ್ಯ. ಮಠ ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಸಿಂದಗಿಯ ಕಾರ್ಯಾಲಯದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಮತ್ತು ರಾಜ್ಯ ಪರಿಷತ್ ಸದಸ್ಯರ ಆಯ್ಕೆಯ ಕಾರ್ಯಕ್ರಮದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಅಶೋಕ ತೆಲ್ಲೂರ ಮಾತನಾಡಿ, ಈ ಚುನಾವಣೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯಾವದಗಳನ್ನು ತಿಳಿಸಿದರು ಮತ್ತು ಈ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲ ಸದಸ್ಯರಿಗೂ ಅಭಿನಂದನೆ ತಿಳಿಸುತ್ತಾ ಸಂಘದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಿಂದಗಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ಗತಾಟೆ ಇವರನ್ನು ನೇಮಕ ಮಾಡಲಾಯಿತು. ಇದೇ ಸಂದರ್ಭದಲ್ಲಿ ಆಲಮೇಲ ನೌಕರರ ಸಂಘದ ಅಧ್ಯಕ್ಷರಾದ ರವಿ ಬಿರಾದಾರ, ನಿರ್ದೇಶಕರಾದ ಸೋಮನಾಯಕ, ಪರಶುರಾಮ ಬಿಸನಾಳ, ಸಿದ್ದು ಕಡಬಗಾಂವ, ಚಂದ್ರಾಮ ಗಡಗಿ, ಶ್ರೀಕಾಂತ ಹೂವಿನಳ್ಳಿ, ಸರ್ವೆ ಅಧಿಕಾರಿಗಳಾದ ಅಗಸಬಾಳ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.