spot_img
spot_img

ಗುರುಕುಲ ಕಲಾ ಪ್ರತಿಷ್ಠಾನದ “ಗುರುಕುಲ ಸಾಹಿತ್ಯ ಶರಭ” ಪ್ರಶಸ್ತಿಗೆ ಆಯ್ಕೆ

Must Read

spot_img
- Advertisement -

ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನ ಕೇಂದ್ರ ಸಮಿತಿ ವತಿಯಿಂದ ಕೊಡ ಮಾಡುವ ಪ್ರಸಕ್ತ ಸಾಲಿನ ಪ್ರತಿಷ್ಠಿತ “ಗುರುಕುಲ ಸಾಹಿತ್ಯ ಶರಭ” ಪ್ರಶಸ್ತಿಗೆ ದೀಪಕ್ ಬಿಳ್ಳೂರ್ ಅವರು ಬರೆದಂತಹ “ಶಕ್ತಿಶಾಲಿ ವ್ಯಕ್ತಿತ್ವದ ನಿರ್ಮಾಣ” ಎಂಬ ಪ್ರಬಂಧಗಳ ಸಂಕಲನ  ಕೃತಿಯು  ಆಯ್ಕೆಯಾಗಿದೆ.

ಪ್ರಸ್ತುತ ಇವರು ಹೊಸಪೇಟೆಯಲ್ಲಿ S. L.R.ಮೆಟಾಲಿಕ ಲಿಮಿಟೆಡ್ ಎಂಬ ಒಂದು ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ವೃತ್ತಿಯಿಂದ ಇವರು ಇಂಜಿನಿಯರ್ ಆಗಿದ್ದರೂ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕರ್ನಾಟಕದ ಖ್ಯಾತ ಪತ್ರಿಕೆಗಳಲ್ಲಿ ಇವರ ಹಲವಾರು ಕವನ, ಲೇಖನ ಬರಹಗಳು ಪ್ರಕಟವಾಗಿವೆ. 

“ಪೂಜ್ಯ ಮಾತಾಜಿ ಪ್ರಕಾಶನ” ಎಂಬ ತಮ್ಮದೇ ಆದಂತಹ ಪ್ರಕಾಶನವನ್ನು ಗಡಿಭಾಗವಾದ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸ್ಥಾಪಿಸಿ, ಗಡಿಭಾಗದ ಸಾಹಿತಿಗಳನ್ನು ಬೆಳಕಿಗೆ ತರುವ ಉದ್ದೇಶವನ್ನು ಇಟ್ಟು,ಕನ್ನಡಾಂಬೆಯ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜನ್ಮಭೂಮಿ ಬೆಳಗಾವಿ ಜಿಲ್ಲೆಯ ಅಥಣಿ.  ಇವರ ತಂದೆಯ ಹೆಸರು ಪ್ರಭಾಕರ್ ಬೀಳೂರು.  ತಾಯಿಯ ಹೆಸರು ಸುವರ್ಣ ಬೀಳೂರು. ಇವರ ಕರ್ಮಭೂಮಿ ವಿಜಯನಗರ ಜಿಲ್ಲೆಯ ಹೊಸಪೇಟೆ. 

- Advertisement -

ಸುವರ್ಣ ಕರ್ನಾಟಕ ಸಂಭ್ರಮದ ನೆನಪಿನಲ್ಲಿ ನಡೆಯಲಿರುವ ಗುರುಕುಲ ಕಲಾ ಪ್ರತಿಷ್ಠಾನ ಕೇಂದ್ರ ಸಮಿತಿ ತುಮಕೂರು ಇವರ ಅಖಿಲ ಭಾರತ ಗುರುಕುಲ ಮೂರನೇ ಸಾಹಿತ್ಯ ಸಮ್ಮೇಳನವು ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನವಂಬರ್ 18 ಮತ್ತು 19 (2023)  ರಂದು ನಡೆಯುವುದು. 

ಈ ಸಾಹಿತ್ಯ ಸಮ್ಮೇಳನದಲ್ಲಿ ಇವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group