ಬೆಳಗಾವಿ -ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ನಡೆದಿದ್ದು ಕನ್ನಡ ಸಾಹಿತ್ಯ ಭವನದಲ್ಲಿ , ದಿ 26-9-2022 ರಂದು ಜರುಗಿದ ಜಿಲ್ಲಾ ಸಂಘದ ಕಾರ್ಯಕಾರಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಮಂಗಳವಾರ ದಿ 10-1-2023 ರಂದು ಸಂಜೆ ಜರುಗಿದ ಜಿಲ್ಲಾ ಸಂಘದ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.
ಜಿಲ್ಲಾ ಅಧ್ಯಕ್ಷರಾಗಿ ಬೆಳಗಾವಿ ತಾಲೂಕಿನ ಮಾಸ್ತಮರಡಿ ಶಾಲೆಯ ಮುಖ್ಯೋಪಾಧ್ಯಾಯ ರಾಗಿ ಬಸವರಾಜ ಸುಣಗಾರ ಆಯ್ಕೆ ಯಾದರು ಉಳಿದಂತೆ ಜಿಲ್ಲಾ ಸಂಘದ ಗೌರವ ಅಧ್ಯಕ್ಷರಾಗಿ ಕಣಬರ್ಗಿ ಶಾಲೆಯ ಮುಖ್ಯೋಪಾಧ್ಯಾಯ ರಾದ ಡಿ ಎಸ್ ಪೂಜಾರ, ಉಪಾಧ್ಯಕ್ಷರಾಗಿ ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಶಾಲೆಯ ಮುಖ್ಯೋಪಾಧ್ಯಾಯ ರಾದ ಸಿ ಎಚ್ ಹುದಲಿ, ಮಹಿಳಾ ಉಪಾಧ್ಯಕ್ಷೆಯಾಗಿ ರಕ್ಕಸಕೊಪ್ಪ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಾ ಆರ್ ನಾಯಿಕ, ಪ್ರಧಾನ ಕಾರ್ಯದರ್ಶಿಯಾಗಿ ಬೆಳಗಾವಿ ನಗರ ಅಶೋಕ ನಗರ ಮುಖ್ಯೋಪಾಧ್ಯಾಯ ರಾದ ಶಿವಾನಂದ ಹಿತ್ತಲಮನಿ, ಕೋಶಾಧ್ಯಕ್ಷರಾಗಿ ಹನುಮಾನ ನಗರ ಶಾಲೆಯ ಮುಖ್ಯೋಪಾಧ್ಯಾಯ ರಾದ ಬಸವರಾಜ ಬಿ ಹಟ್ಟಿಹೊಳಿ, ಸಹಕಾರ್ಯದರ್ಶಿಯಾಗಿ ಸಂಗಮೇಶ ನಗರ ಶಾಲೆಯ ಮುಖ್ಯೋಪಾಧ್ಯಾಯ ರಾದ ಸೈದುಸಾಬ ನದಾಫ ಹಾಗೂ ಯರಗಟ್ಟಿ ತಾಲೂಕಿನ ಮುಖ್ಯೋಪಾಧ್ಯಾಯ ರಾದ ಎಸ್ ಬಿ ತೋರಗಲ್ಲ, ಸಂಘಟನಾ ಕಾರ್ಯದರ್ಶಿಗಳಾಗಿ ಎಚ್ ಬಿ ಬೋಗೂರ ಆಯ್ಕೆ ಯಾಗಿದ್ದು ಅವರ ಅಭಿನಂದನಾ ಸಮಾರಂಭವು ಮಂಗಳವಾರ ಸಂಜೆ ಬೆಳಗಾವಿಯ ಶಿವಾಜಿನಗರ ಕಲ್ಯಾಣ ಮಂಟಪದಲ್ಲಿ ಜರುಗಿತು.
ಸಭೆಯಲ್ಲಿ ಯರಗಟ್ಟಿ ತಾಲೂಕಿನ ಅಧ್ಯಕ್ಷರಾದ ವಾಯ್ ಬಿ ಅಜ್ಜನಕಟ್ಟಿ, ಪ್ರಧಾನ ಕಾರ್ಯದರ್ಶಿಯಾದ ಮಾರುತಿ ಹಡಪದ, ಎ ಎ ಮುಕ್ತಮನವರ,ಡಿ ಡಿ ಭೋವಿ,ಬೆಳಗಾವಿ ನಗರ ಅಧ್ಯಕ್ಷರಾದ ಎ ಡಿ ಸಾಗರ, ಕಿತ್ತೂರು ತಾಲೂಕಾ ಅಧ್ಯಕ್ಷರಾದಎಸ್ ಎ ನದಾಫ, ಬೆಳಗಾವಿ ಗ್ರಾಮೀಣದ ಅಶೋಕ್ ಕೋಲಕಾರ, ಎಸ್ ಜಿ ಚವಲಗಿ, ಪಿ ಎಸ್ ನದಾಫ್,ನಗರ ಘಟಕದ ಪಿ ಜೆ ಕಾಂಬಳೆ, ಎಸ್ ಬಿ ಪಾಟೀಲ, ಎಸ್ ಬಿ ಅಷ್ಟಗಿ, ಜೆ ಎಸ್ ಜಗಜಂಪಿ,ಆಯ್ ಜಿ ಕಂಚಿಮಠ, ಎಮ್ ವಾಯ್ ಕೋರಡೆ ಮುಂತಾದವರು ಉಪಸ್ಥಿತರಿದ್ದು ಮಾತನಾಡಿದರು.
ಸಭೆಯಲ್ಲಿ ಈ ತಿಂಗಳಲ್ಲಿ ಜರುಗುವ ರಾಜ್ಯಮಟ್ಟದ ಮುಖ್ಯೋಪಾಧ್ಯಾಯ ರ ಸಂಘದ ಸಮ್ಮೇಳನ ಯಶಸ್ಸು ಮಾಡುವ ಕುರಿತು ಚರ್ಚೆ ಮಾಡಲಾಯಿತು, ಫೆಬ್ರುವರಿ ತಿಂಗಳ ಕೊನೆಯ ವಾರದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಮುಖ್ಯೋಪಾಧ್ಯಾಯರ ಸಮ್ಮೇಳನ ನಡೆಸುವ ತೀರ್ಮಾನ ಮಾಡಲಾಯಿತು, ಮುಖ್ಯೋಪಾಧ್ಯಾಯರ ಹಲವು ಸಮಸ್ಯೆ ಗಳಿದ್ದು ಅವುಗಳನ್ನು ಪರಿಹರಿಸಲು ಮನವಿ ಮಾಡಲಾಗಿದೆ, ಆದರೆ ಕೆಲವರು ಅವು ಈಡೇರಿವೆ ಎಂದು ಪ್ರಚಾರ ಮಾಡುವುದು ಸರಿಯಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತ ವಾಯಿತು, ಸಭೆಯ ಅಧ್ಯಕ್ಷತೆಯನ್ನು ಹಿರಿಯ ಮುಖ್ಯೋಪಾಧ್ಯಾಯ ರಾದ ಡಿ ಎಸ್ ಪೂಜಾರ ವಹಿಸಿದ್ದರು, ಬಿ ಬಿ ಹಟ್ಟಿಹೊಳಿ ಕಾರ್ಯಕ್ರಮ ನಿರೂಪಿಸಿದರು,ಎಮ್ ಸಿ ಹಡಪದ ವಂದಿಸಿದರು, ಜಿಲ್ಲೆಯ ವಿವಿಧ ತಾಲೂಕಿನ ಮುಖ್ಯೋಪಾಧ್ಯಾಯ ರು, ನೌಕರರು ಹಾಗೂ ಶಿಕ್ಷಕರ ಸಂಘದ ಜಿಲ್ಲಾ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು.
ನೂತನ ಅಧ್ಯಕ್ಷರಾದ ಬಸವರಾಜ ಸುಣಗಾರ ಮಾತನಾಡಿ ಜಿಲ್ಲೆಯಲ್ಲಿ ಒಮ್ಮತದಿಂದ ತಮ್ಮನ್ನು ಆಯ್ಕೆ ಮಾಡಿದ್ದು ಸಂತೋಷ ತಂದಿದ್ದು, ಸರ್ವರಿಗೂ ಋಣಿ ಯಾಗಿರುವದಾಗಿ ಹೇಳಿ ಜಿಲ್ಲೆಯಲ್ಲಿ ಮುಖ್ಯೋಪಾಧ್ಯಾಯ ರ ಸಮಸ್ಯೆ ನಿವಾರಣೆಗೆ ಶ್ರಮಿಸುವದಾಗಿ ಹೇಳಿ, ಸಂಘದ ಚಟುವಟಿಕೆ ನಿರಂತರ ನಡೆಯಲಿವೆ ಎಂದರು.