ನಿಸ್ವಾರ್ಥ ಸೇವೆ ಬದುಕಿನಲ್ಲಿ ಸದಾ ಒಳ್ಳೆಯದನ್ನೇ ನೀಡುತ್ತದೆ – ಸುರೇಶ ಬೆಳವಡಿ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಸವದತ್ತಿ – “ನಮ್ಮ ಬದುಕಿನಲ್ಲಿ ನಾವು ಯಾವುದೇ ವೃತ್ತಿ ಕೈಗೊಳ್ಳಲಿ ಅದರಲ್ಲಿ ಕಾಯಾ ವಾಚಾ ಮನಸಾ ನಿಸ್ವಾರ್ಥ ಸೇವೆಯನ್ನು ಮಾಡಿದ್ದಾದರೆ ಅದರಿಂದ ನಾವು ಒಳ್ಳೆಯ ಫಲಗಳನ್ನು ಪಡೆಯುತ್ತೇವೆ ಎಂಬುದಕ್ಕೆ ಶ್ರೀ ಎಮ್.ವಿ.ಗುಂಡಪ್ಪಗೋಳ ನಿದರ್ಶನ. ಸವದತ್ತಿ ತಾಲೂಕಿನಲ್ಲಿ ಅವರ ಸೇವೆ ಚುನಾವಣಾ ವಿಭಾಗದಲ್ಲಿ ಶಿರಸ್ತೆದಾರರಾಗಿ ಇದೇ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತ ಈಗ ಗ್ರೇಡ್ 2 ತಹಶೀಲ್ದಾರ ಹುದ್ದೆಗೆ ಪದೋನ್ನತಿ ಹೊಂದುವ ಜೊತೆಗೆ ಇನ್ನೂ ಹೆಚ್ಚಿನ ಸೇವೆಯನ್ನು ನೀಡಲು ಒಂದು ಅವಕಾಶ ಸಿಗಲು ಕಾರಣ.”ಎಂದು ಸವದತ್ತಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಬೆಳವಡಿ ಹೇಳಿದರು.

ಅವರು ಚುನಾವಣಾ ಶಿರಸ್ತೇದಾರ ಹುದ್ದೆಯಿಂದ ಪದೋನ್ನತಿ ಪಡೆದು ಗ್ರೇಡ್ 2 ತಹಶೀಲ್ದಾರ್ ಹುದ್ದೆಗೆ ಹಾಜರಾದ ಶ್ರೀ ಎಂ.ವ್ಹಿ.ಗುಂಡಪ್ಪಗೋಳ ತಹಶೀಲ್ದಾರ ಕಾರ್ಯಾಲಯದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಫ್.ಜಿ.ನವಲಗುಂದ “ನಮಗೆ ವಹಿಸಿದ ಕೆಲಸವನ್ನು ಸಮರ್ಪಕವಾಗಿ ಪೂರೈಸಿದಾಗ ದೇವರು ನಮಗೆ ಉತ್ತಮ ಅವಕಾಶ ನೀಡುತ್ತಾನೆ ಅದಕ್ಕೆ ಗುಂಡಪ್ಪಗೋಳ ಸಾಹೇಬರು ಉತ್ತಮ ನಿದರ್ಶನ. ಎಲ್ಲರೊಂದಿಗೂ ನಗುನಗುತ್ತ ಕರ್ತವ್ಯ ನಿರ್ವಹಿಸುವ ಅವರ ಸೇವೆ ಇನ್ನೂ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಲಿ”ಎಂದು ಆಶಿಸಿದರು.

ಕರ್ನಾಟಕ ರಾಜ್ಯ ನೌಕರರ ಸಂಘದ ಸವದತ್ತಿ ತಾಲೂಕ ಘಟಕದ ಅಧ್ಯಕ್ಷರಾದ ಆನಂದ ಮೂಗಬಸವ ಮಾತನಾಡಿ “ ಇಲಾಖೆಯ ಮೇಲಾಧಿಕಾರಿಗಳ ಆದೇಶದಂತೆ ಸಿಬ್ಬಂದಿಯ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಿದಾಗ ಎಂತಹ ಕಠಿಣ ಕಾರ್ಯವೂ ಸಹಜವಾಗಿ ಕೊನೆಗೊಳ್ಳುತ್ತದೆ ಎಂಬುದಕ್ಕೆ ಗುಂಡಪ್ಪಗೋಳ ನಿದರ್ಶನ. ಅವರ ತಾಳ್ಮೆ,ಪರಿಶ್ರಮಕ್ಕೆ ಈಗ ಪದೋನ್ನತಿಯನ್ನು ಇಲಾಖೆಯಲ್ಲಿ ಹೊಂದುವ ಮೂಲಕ ಇನ್ನಷ್ಟು ಹೆಚ್ಚಿನ ಜವಾಬ್ದಾರಿಯನ್ನು ದೇವರು ಅವರಿಗೆ ಕರುಣಿಸಿದ್ದಾನೆ. ಅವರಿಗೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಬಡ್ತಿ ದೊರೆಯುವಂತಾಗಲಿ”ಎಂದು ಶುಭ ಹಾರೈಸಿದರು.

- Advertisement -

ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಚ್.ಆರ್.ಪೆಟ್ಲೂರ ಮಾತನಾಡುತ್ತ, “ ನೀಡಿದ ಕೆಲಸವನ್ನು ಒಪ್ಪಿಕೊಂಡು ನಿಷ್ಠೆಯಿಂದ ಕಾರ್ಯನಿರ್ವಹಿಸುವ ಮೂಲಕ ಅದರಲ್ಲೂ ನಮ್ಮ ಶಿಕ್ಷಣ ಇಲಾಖೆಯ ಶಿಕ್ಷಕರೊಂದಿಗೆ ಚುನಾವಣಾ ಕಾರ್ಯ ಸಂದರ್ಭದಲ್ಲಿ ಅವರು ತೋರುವ ಕರ್ತವ್ಯ ನಿಜಕ್ಕೂ ಮರೆಯಲಾಗದ್ದು.ಇಂತಹ ವ್ಯಕ್ತಿಗೆ ಪದೋನ್ನತಿ ಆಗಿದ್ದು ನಮಗೆಲ್ಲ ಸಂತಸ ತಂದಿದೆ” ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ವ್ಹಿ.ಗುಂಡಪ್ಪಗೋಳ. “ ನಮ್ಮ ಬದುಕಿನಲ್ಲಿ ಸೇವೆ ಎಂಬುದು ಬಹಳ ಮಹತ್ವದ್ದು ಇಲ್ಲಿ ಹಿರಿಯರು ಕಿರಿಯರು ಎಂಬ ಭೇದಭಾವವಿಲ್ಲದೇ ಎಲ್ಲರಲ್ಲೂ ಒಂದೊಂದು ಕೌಶಲ್ಯವನ್ನು ಕಲಿಯಲು ಅವಕಾಶವಿರುತ್ತದೆ.ಅದನ್ನು ಸದ್ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸಲು ನನಗೆ ಎಲ್ಲ ಇಲಾಖೆಗಳ ಸನ್ಮಿತ್ರರೂ ಕಾರಣ. ತಮ್ಮ ಈ ಗೌರವ ಸನ್ಮಾನ ಶುಭ ಹಾರೈಕೆಗಳು ನನ್ನ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿದೆ.ತಮ್ಮ ವಿಶ್ವಾಸಕ್ಕೆ ಚಿರಋಣಿ.ನ್ಯಾಯಸಮ್ಮತವಾದ ಕಾರ್ಯ ತಮ್ಮೆಲ್ಲರ ಸಹಕಾರದಿಂದ ನಿರ್ವಹಿಸುವೆ.ತಮಗೆ ಅನಂತ ಧನ್ಯವಾದಗಳು”ಎಂದು ಹೇಳಿದರು.

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ಸದಸ್ಯರಾದ ರಾಘವೇಂದ್ರ ಘೋರ್ಪಡೆ ಸ್ವಾಗತಿಸಿದರು. ಮಲಿಕ್.ಹಲಿಮನವರ ನಿರೂಪಿಸಿದರು. ಎಚ್.ಆರ್.ಪೆಟ್ಲೂರ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!