spot_img
spot_img

ಸಾಮಾಜಿಕ, ಸಾಂಸ್ಕೃತಿಕ ಸಾಹಿತ್ಯಿಕ ಪೋಷಕ ಜಿ.ಓ.ಮಹಾಂತಪ್ಪ ವಿಚಾರ ಸಂಕಿರಣ.

Must Read

- Advertisement -

ಬದುಕಿ ಸತ್ತವರ ನಡುವೆ, ಸತ್ತು ಬದುಕಿದವರು ತುಂಬಾ ವಿರಳ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮುಂತಾದವರು ಅವರುಗಳ ನಿಸ್ವಾರ್ಥ ಸೇವಾ ಕೈಂಕರ್ಯದಿಂದ ಇನ್ನೂ ನಮ್ಮ ನಡುವೆ ಬದುಕಿದ್ದಾರೆ. ಈ ನಿಟ್ಟಿನಲ್ಲಿ ಜಿ.ಓ. ಮಹಾಂತಪ್ಪನವರು ಮಾಡಿದ ಸಾಮಾಜಿಕ ಕೈಂಕರ್ಯದಿಂದ ನಿತ್ಯ ನಮ್ಮೊಳಗೆ ಬದುಕಿದ್ದಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ. ವೈ. ಎಸ್. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು, ಹಾಸನ ತಾಲ್ಲೂಕು ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪೋಷಕ ಜಿ.ಓ.ಮಹಾಂತಪ್ಪ ಕುರಿತ ವಿಚಾರ ಸಂಕಿರಣದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾಂತಪ್ಪನವರು ಕೇವಲ ವ್ಯಕ್ತಿಯಾಗಿರದೇ ಸಮಾಜದ ಶಕ್ತಿಯಾಗಿದ್ದರು. ಜೀರೋದಿಂದ ಹೀರೋ ಆಗಿ ನಮಗೆಲ್ಲಾ ಆದರ್ಶವಾದವರು ಎಂದರು.

- Advertisement -

ಸಾಹಿತ್ಯ ವೇದಿಕೆಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ನಾಗರಾಜ ದೊಡ್ಡಮನಿ “ಸಾಮಾಜಿಕ ಚಿಂತನೆ, ಬದ್ಧತೆ ” ವಿಷಯವಾಗಿ ಮಾತನಾಡಿ, ಚಿತ್ರದುರ್ಗ ಮೂಲದಿಂದ ಹಾಸನಕ್ಕೆ ಬಂದು ತಿನ್ನಲು ಊಟವಿಲ್ಲದೆ, ಮಲಗಲು ಸೂರಿಲ್ಲದೆ ಪರದಾಡಿ ಮಾಣಿಯಾಗಿ ಅಶೋಕ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿ ಕಾರ್ಮಿಕ ಸಂಘಟನೆ ಮಾಡಿ ನಿರ್ದೇಶಕರಾಗಿ ಬೆಳೆದು ಎಲ್ಲಾ ಸಮಾಜದೊಟ್ಟಿಗೆ ಬೆರೆತು ಇಡೀ ಹಾಸನದ ಜನಮಾನಸದಲ್ಲಿ ಅಚ್ಚಳಿಯದಂತಹ ಸ್ಥಾನ ಪಡೆದವರು ಎಂದರು.

ಕಲಾವಿದೆ ಜಯರಮೇಶ “ ಕಲೆ-ಸಾಂಸ್ಕೃತಿಕ ಚಿಂತನೆ” ವಿಷಯದಡಿ ಮಾತನಾಡಿ, ಹಾಸನದಲ್ಲಿ ಎಲ್ಲಿಯೇ ಕಲೆ ಸಾಂಸ್ಕೃತಿಕ ಕಾರ್ಯಕ್ರಮ ಉತ್ಸವಗಳು ಜರುಗಲಿ ಅಲ್ಲಿ ಮಹಾಂತಪ್ಪನವರು ಹಾಜರಿರುತ್ತಿದ್ದರು. ಸ್ವತಃ ಕಲಾವಿದರಾಗಿದ್ದ ಮಹಾಂತಪ್ಪನವರು ಕಾಲೇಜು ದೆಸೆಯಿಂದಲೇ ರಂಗಭೂಮಿಯಲ್ಲಿ ಬಣ್ಣ ಹಚ್ಚಿದವರು. ರಾಮಾಯಣ ನಾಟಕದಲ್ಲಿ ವಾಲ್ಮೀಕಿ ಮಹಾಭಾರತ ದ್ರೋಣಾಚಾರ್ಯ ಪಾತ್ರದಲ್ಲಿ ಅಭಿನಯಿಸಿದರು ಎಂದರು.

ಹಿರಿಯ ಸಾಹಿತಿ ಗೊರೂರು ಅನಂತರಾಜು “ಸಾಹಿತ್ಯ ಪೋಷಕರಾಗಿ ಜಿ.ಓ.ಮಹಾಂತಪ್ಪ” ಎಂಬ ವಿಷಯದ ಬಗ್ಗೆ ಮಾತನಾಡಿ ಹಾಸನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮೂರು ಸಮ್ಮೇಳನಗಳನ್ನು ಮಾಡಿದ ಕೀರ್ತಿ ಮಹಾಂತಪ್ಪನವರದು. ಅವರೂ ಒಬ್ಬ ಕವಿ ಸಾಹಿತ್ಯ ಪೋಷಕರು. ಸ್ಥಳೀಯ ಪತ್ರಿಕೆಗಳಲ್ಲಿ ಬರುವ ಲೇಖಕರ ಕಥೆ, ಕವಿತೆ, ಲೇಖನಗಳನ್ನು ಓದಿ ಲೇಖಕರಿಗೆ ದೂರವಾಣಿ ಕರೆ ಮಾಡಿ ಪ್ರಸಂಶಿಸುತ್ತಿದ್ದರು. ನಾನೂ ಸಹ ಹಾಸನ ತಾಲ್ಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಆಗಿದ್ದು ಮಹಾಂತಪ್ಪನವರ ಕಾಲದಲ್ಲಿಯೇ. ತಮ್ಮ ಮಾನವ ಬಂಧುತ್ವ ವೇದಿಕೆಯ ಸಭಾಭವನಕ್ಕೆ ಸ್ವತಃ ತಿಂಗಳಿಗೆ ೨೦ ಸಾವಿರ ಬಾಡಿಗೆ ಕಟ್ಟುತ್ತಾ ವಿವಿಧ ಸಾಹಿತ್ಯ ಸಂಘಟನೆಗಳಿಗೆ, ಕವಿ-ಬರಹಗಾರರಿಗೆ ಕಾರ್ಯಕ್ರಮ ಮಾಡಲು ಉಚಿತವಾಗಿ ನೀಡುತ್ತಿದ್ದರು. ಆದ್ದರಿಂದಲೇ ಮಹಾಂತಪ್ಪನವರು ಜಾತ್ಯಾತೀತ ಧರ್ಮಾತೀತವಾಗಿ ಜನಮನ್ನಣೆ ಗಳಿಸಿದವರೆಂದರು.

- Advertisement -

ವೇದಿಕೆಯಲ್ಲಿ ಕಲಾವಿದರು ಶೇಖರಪ್ಪ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾ, ಹಿರಿಯ ಸಾಹಿತಿ ಶ್ರೀವಿಜಯ ಹಾಸನ, ಬಿ.ಎಂ.ಭಾರತಿ ಹಾದಿಗೆ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ, ಕವಯಿತ್ರಿ ಎಚ್.ಎಸ್.ಪ್ರತಿಮಾ, ಎಚ್.ಎಸ್.ಭಾನುಮತಿ, ಸಾವಿತ್ರಿ ಬಿ.ಗೌಡ, ಎಚ್.ಎಸ್.ಬಸವರಾಜ, ಜಯಶಂಕರ ಬೆಳಗುಂಬ, ಆರ್.ಜಿ.ಗಿರೀಶ್, ರುಮಾನಾ ಜಬೀರ್, ಎಚ್.ಎಂ. ಪ್ರಿಯಾಂಕ, ಯಮುನಾವತಿ ಧನಲಕ್ಷಿ, ಶೋಭಾ, ಎಚ್.ಜಿ.ಕಾಂಚನಮಾಲ, ತ್ರಿವೇಣಿ, ಸಾವಿತ್ರಿ, ಭಾರತಿ ಎಚ್.ಎನ್. ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group