PSWAK ವತಿಯಿಂದ ಹಿರಿಯ ನಾಗರಿಕರ ದಿನ ಆಚರಣೆ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಬೆಳಗಾವಿ – ದಿ. ೧ ರಂದು ಪ್ರೊಫೆಷನಲ್ ಸೋಶಿಯಲ್ ವರ್ಕ ಅಸೊಶಿಯೇಶನ್ (ರಿ) ಕರ್ನಾಟಕ, ಇವರ ಒಂದು ಘಟಕ ಹಿರಿಯ ನಾಗರಿಕರ ಮನರಂಜನಾ ಮತ್ತು ಯೋಗಕ್ಷೇಮ ಕೇಂದ್ರ ಬೆಳಗಾವಿ ವತಿಯಿಂದ PSWAK ಕೇಂದ್ರ ಕಛೇರಿಯಲ್ಲಿ ವಿಶ್ವ ಹಿರಿಯನಾಗರಿಕರ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಮ್ ಎಮ್ ಗಡಗಲಿ, ಸರ್ ಇವರು ಮಾತನಾಡಿ , ನಮ್ಮ ದಿನವನ್ನು ಯುವ ಸಮುದಾಯ ನೆನಪಿಸಿ ಆಚರಿಸುತ್ತಿರುವ ಈ ಅಸೊಶಿಯೇಶನ್ ಗೆ ಧನ್ಯವಾದಗಳು ಏಕೆಂದರೆ ಇವತ್ತಿನ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುವ ಕಾಲಘಟ್ಟದಲ್ಲಿ ನಮ್ಮವರಿಗಾಗಿ ಮೀಸಲಿಟ್ಟು ಈ ಅಸೊಶಿಯೇಶನ್ ನಮಗಾಗಿ ಮನರಂಜನಾ ಮತ್ತು ಯೋಗಕ್ಷೇಮ ಕೇಂದ್ರ ಪ್ರಾರಂಭಿಸಿದ್ದು ನಿಜಕ್ಕೂ ಶ್ಲಾಘನೀಯ ಎಂದರು.

- Advertisement -

ಆರ್. ಬಿ. ಬನಶಂಕರಿ, ಉಪನಿರ್ದೇಶಕರು(ನಿ) ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಬೆಳಗಾವಿ ಇವರು ಮಾತನಾಡಿ, ಹಿರಿಯನಾಗರಿಕರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಅವರಿಗೆ ಇರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಅಸೋಸಿಯೇಷನ್ ಗೆ ನನ್ನ ಕಡೆಯಿಂದ ಈ ಮನರಂಜನಾ ಮತ್ತು ಯೋಗಕ್ಷೇಮ ಕೇಂದ್ರಕ್ಕೆ ಸುಮಾರು 100 ಪುಸ್ತಕ ದೇಣಿಗೆ ನೀಡುತ್ತೇನೆ ಎಂದು ತಿಳಿಸಿದರು.

ಶ್ರೀಮತಿ ಶಾಂತಾ ಪಾಟೀಲ ಮಾತನಾಡಿ, ನಮ್ಮ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಗಿಂತ ಇಂತಹ ಮನರಂಜನಾ ಮತ್ತು ಯೋಗಕ್ಷೇಮ ಕೇಂದ್ರಗಳು ಹೆಚ್ಚಾಗಲಿ ಈ ಅಸೊಶಿಯೇಶನ್ ಗೆ ನನ್ನ ತನು ಮನ ಧನ ಎಲ್ಲಾ ರೀತಿಯಲ್ಲಿ ಸಹಾಯ ಸಹಕಾರ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಅಸೊಶಿಯೇಶನ್ ಅಧ್ಯಕ್ಷರಾದ ದೀಪಕ್ ಕೆ, ಭರತ ಅನಗೋಳ, ಶ್ರೀಮತಿ ವ್ಹಿ.ಬಿ.ಗುರವ, ತಾರಾಮತಿ ಗಡಗಲಿ ಎಲ್, ಕೆ ತಿಪ್ಪನ್ನವರ, ಎಮ್, ಸಿ ಅಂಗಡಿ, ವ್ಹಿ, ಜೀ, ಹಿಟ್ಟಣಗಿ, ಸಿ, ವಾಯ್, ಅಪ್ಪನ್ನವರ, ಎಮ್ ಎಮ್ ಊರೊಳಗಿನ, ಅಡಿವೆಪ್ಪಾ ಇಟಗಿ, ಲಕ್ಷ್ಮಣ ಥರಕಾರ, ರವಿ ಚೌಗಲಾ, ಮಾಯಾ, ಲಕ್ಷ್ಮೀ, ಪ್ರವೀಣ, ಶಿವಾನಂದ, ಕುತುಬುಸಾಬ, ಶಿವರಾಜ ಹೊಳೆಪ್ಪಗೋಳ ನಿರೂಪಿಸಿ ಆಕಾಶ ಬೇವಿನಕಟ್ಟಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!