ಗೋಕಾಕ : ಹಿರಿಯ ನಾಗರಿಕರ ಸಭೆ

Must Read

ಗೋಕಾಕ – ಕರ್ನಾಟಕ ರಾಜ್ಯ ಸರ್ಕಾರ ನಿವೃತ್ತ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಗೋಕಾಕದ ಸಾರ್ವಜನಿಕ ಆಸ್ಪತ್ರೆಯ ಆವರಣದ ಗಣಪತಿ ದೇವಾಲಯದಲ್ಲಿ ದಿ.೨೨ ರಂದು ಮುಂಜಾನೆ ೧೧ ಕ್ಕೆ ಸಭೆ ಸೇರಿತು

ಅಧ್ಯಕ್ಷತೆಯನ್ನು ಡಾಕ್ಟರ್ ಮುರಗೋಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್ ಜಿ ಸಿದ್ನಾಳ ಅಧ್ಯಕ್ಷರು ಕೈ,ರಾ,ಸ, ನಿವೃತ್ತ ನೌಕರರ ಸಂಘ ಮಾತನಾಡುತ್ತ, ನಿವೃತ್ತ ನೌಕರರಿಗೆ ಗಳಿಕೆಯ ಹಣವೇ ಆಸರೆಯಾಗಿದೆ ಕೊನೆಯವರೆಗೂ ಅಸ್ತಿ ಯಾರಿಗೂ ಮಾಡಬೇಡಿರಿ ಅಂತಾ ವಿನಂತಿಸಿದರು ‌ಈಗಾಗಲೆ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ನಲ್ಲಿ ಪ್ರಮುಖ ಬೇಡಿಕೆಯಾಗಿದೆ ಸಂಧ್ಯಾ ಕಿರಣ್ ಆರೋಗ್ಯ ಸಂಜೀವಿನಿ ಕ್ಯಾಸಲೆಸ ಯೋಜನೆ ಇದೆ ಆಗುವ ಸಂಭವವಿದೆ ಎರಡನೇಯದಾಗಿ 70 ರಿಂದ 80 ವರ್ಷ ದವರಿಗೆ 10% ಹೆಚ್ಚುವರಿಯಾಗಿ ಪಿಂಚಣಿ ನೀಡಲು 7ನೇಯ ವೇತನ ಆಯೋಗದ ವರದಿಯಲ್ಲಿ ಹೇಳಲಾಗಿದೆ ಅದನ್ನು ನೀಡಿದರೆ ಸಂತೋಷವಿದೆ, ನಿವೃತ್ತ ನೌಕರರಾದ ನಾವು ನಗು ನಗುತ್ತಾ ಬಾಳೋಣವೆಂದು ತಿಳಿಸಿದರು

ಮಹಾಂತೇಶ ಹೀರೆಮಠ ಉಪಾಧ್ಯಕ್ಷರು ಹಿರಿಯ ನಾಗರಿಕರ ಸಂಘ ಆಯಸ್ಕಾನ ಮುಂಬಯಿ ರಾಷ್ಟ್ರೀಯ ಉಪಾಧ್ಯಕ್ಷರು ಮಾತನಾಡಿ ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ 2007,2009 ಕಾನೂನಿನಲ್ಲಿ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಸಾಕಷ್ಟು ಅಂದರೆ ಆರೋಗ್ಯ, ಸಂರಕ್ಷಣೆಗಳಂತಹ ಹಲವಾರು ಕ್ರಮ ನೀಡಿದ್ದಾರೆ ಅವು ಜಾರಿಯಾಗಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಸಂಘದ ಸದಸ್ಯರಾಗಲು ವಿನಂತಿಸಿದರು ಬೆಳಗಾವಿಯಲ್ಲಿ ಹಿರಿಯ ನಾಗರಿಕರ ಕಚೇರಿಯಲ್ಲಿ ಅಧ್ಯಕ್ಷ ಪದಾಧಿಕಾರಿಗಳು ಸದಸ್ಯರು ಇರುತ್ತಾರೆ ನಿಮ್ಮ ತೊಂದರೆಗಳಿಗೆ ಅಂದರೆ ಮಕ್ಕಳು ಕುಟುಂಬದವರು ಚೆನ್ನಾಗಿ ನೋಡಿಕೊಳ್ಳದಿದ್ದರೆ ತೊಂದರೆ ಕೊಟ್ಟರೆ ನಾವು ನಿಮಗೆ ಕಾನೂನು ಸೇವೆಗಳನ್ನು‌ಒದಗಿಸಿ ಯಶಸ್ವಿಗೊಳಿಸಲು ಸಿದ್ದರಿದ್ದೇವೆ ಎಂದು ತಿಳಿಸಿ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು

ಇದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚುನಾವಣೆಯಲ್ಲಿ ಡಾಕ್ಟರ್ ಡಾಂಗೆ ಅವರ ಪ್ಯಾನೆಲ್ ಜಯಗಳಿಸಿದ್ದಾರೆ. ಡಾಂಗೆ, ಸಿದ್ದಣ್ಣವರ, ಲೆಪ್ಟಿನೆಂಟ್ ಕರ್ನಲ್ ನಂದಿನಿ ಶರ್ಮಾ,ಸಿದ್ನಾಳವರನ್ನು ಸನ್ಮಾನಿಸಲಾಯಿತು ಡಾಕ್ಟರ್ ಡಾಂಗೆ ಮಾತನಾಡಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ನಮ್ಮನ್ನು.ಕರೆದು ಸನ್ಮಾನ ಸ್ವೀಕರಿಸಿ ನಿಮ್ಮ ಸಹಕಾರದಿಂದ ಜಯಗಳಿಸಿದ್ದೇವೆ‌. ನಿಮಗೆಲ್ಲರೀಗೂ ಪ್ಯಾನಲ್ಲದಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಿ ನೀವೆಲ್ಲರೂ ಸಂಘದ ಸದಸ್ಯರಾಗಿ ಸಮಾಜದ ಸೇವೆ‌ಮಾಡೋನವೆಂದು ತಿಳಿಸಿದರು

ಸಮಾರಂಭದಲ್ಲಿ ಡಾ ಸಿದ್ದನ್ನವರ, ಮುದಕವಿ, ಕೆಂಚರಾಹುತ, ಡಾ ಮುರಗೋಡ ಮಾತನಾಡಿದರು ಸಭೆಯಲ್ಲಿ ರಜಪೂತ, ವಾಲಿಕಾರ,ದೋಡಮನಿ, ಮುಲ್ಲಾ ಅತ್ತಾರ ಗಣಾಚಾರಿ ಮುಂತಾದವರಿದ್ದರು ಕಡಿ ಗುರುಗಳು ನಿರೂಪಿಣೆಮಾಡಿ ವಂದಿಸಿದರು

LEAVE A REPLY

Please enter your comment!
Please enter your name here

Latest News

ಡಿಸಿಸಿ ಬ್ಯಾಂಕಿನ ಸೇವೆ ಇಡೀ ವರ್ಷವೂ ರೈತರಿಗೆ ಸಿಗಲಿದೆ – ಅಣ್ಣಾಸಾಹೇಬ ಜೊಲ್ಲೆ

ಬೆಳಗಾವಿ - ಮುಂದಿನ ಐದು ವರ್ಷದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಅನೇಕ ಹೊಸ ಹೊಸ ಯೋಜನೆಗಳನ್ನು ರೂಪಿಸಿದ್ದು, ರೈತರ ಜೀವನಾಡಿಯಂತೆ ಬ್ಯಾಂಕಿನ...

More Articles Like This

error: Content is protected !!
Join WhatsApp Group