ಬೆಂಗಳೂರಿನ ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಭಾಗವತರು ನಾಟಕೋತ್ಸವ-21 ಅಂಗವಾಗಿ ಸುವರ್ಣ ರಂಗಪಥ ಕಲಾಗಂಗೋತ್ರಿ 50 ಸಮಾರಂಭದಲ್ಲಿ ಕಳೆದ ಐವತ್ತು ವರ್ಷಗಳಿಂದ ನಿರಂತರವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಕಲಾವಿದೆ ಡಾ.ಲೀಲಾ ಬಸವರಾಜುರವರಿಗೆ ಖ್ಯಾತ ವಿಮರ್ಶಕಿ ಡಾ.ವಿಜಯಾ ಗೌರವಿಸಿದರು.
ಭಾಗವತರು ಸಂಸ್ಥೆಯ ಅಧ್ಯಕ್ಷ ಕೆ.ರೇವಣ್ಣ , ನಿರ್ದೇಶಕ ಡಾ. ಬಿ.ವಿ.ರಾಜಾರಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎನ್.ಮಂಜುಳಾ ನಿರ್ದೇಶನದ ಮೂಲ ಶೇಕ್ಸ್ ಪಿಯರ್ ಮಹಾಕವಿಯ (ರಂಗರೂಪಾಂತರ: ಡಾ.ಹೆಚ್.ಎಸ್.ವಿ) ‘ಮುದಿದೊರೆ ಮತ್ತು ಮೂವರು ಮಕ್ಕಳು’ ನಾಟಕ ಪ್ರದರ್ಶನಗೊಂಡಿತು.