spot_img
spot_img

ರಾಜಯೋಗದ ಕುರಿತು ಏಳು ದಿನದ ಮುಕ್ತಾಯ ಕಾರ್ಯಕ್ರಮ

Must Read

spot_img
- Advertisement -

ಸಿಂದಗಿ: ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರು ಒತ್ತಡದ ಬದುಕಿನಲ್ಲಿ ಬಾಳುವಂತಾಗಿದೆ ಆದರೆ ಪ್ರಾಚೀನ ಕಾಲದ ರಾಜಯೋಗದಿಂದ ಒತ್ತಡದ ಜೀವನದಿಂದ ಮುಕ್ತರಾಗುವುದು ರಾಜಯೋಗದಿಂದ ಸಾಧ್ಯ ಎಂದು ರಾಜಯೋಗಿ ಡಾ.ಬಾಳನಗೌಡ ಪಾಟೀಲ ಹೇಳಿದರು.

ಪಟ್ಟಣದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಜಯೋಗದ ಕುರಿತು ಏಳು ದಿನದ ಮುಕ್ತಾಯ ಕಾರ್ಯಕ್ರಮದಲ್ಲಿ ಮಾತನಾಡಿ, ಆಧ್ಯಾತ್ಮದಿಂದ ಜೀವನ ಪಾವನವಾಗುತ್ತದೆ. ಎಂದರು.

ಈಶ್ವರೀಯ ಮುಖ್ಯ ಸಂಚಾಲಕಿ ಪವಿತ್ರಾಜೀ ಅಕ್ಕನವರು ಮಾತನಾಡಿ, ನಾವುಗಳು ನಿರಾಕಾರ ಶಿವತಂದೆಯ ಸಂತಾನವಾದ್ದರಿಂದ ನಾವುಗಳೆಲ್ಲರೂ ಒಂದೇ ತಂದೆ ಸಂತಾನವಾಗಿದ್ದೇವೆ. ನಮ್ಮಲ್ಲಿ ಯಾವದೆ ತರಹದ ಭೇದಭಾವಗಳು ಇರುವದಿಲ್ಲ. ಇಲ್ಲಿ ಸಿಗುವ ರಾಜಯೋಗದಿಂದ ಅಭ್ಯಾಸದಿಂದ ಮನಸಿನ ಮಲೀನತೆ, ನಕಾರತ್ಮಕ ಚಿಂತನೆಗಳು, ಭಯ, ಚಿಂತೆ, ಅತಿಯಾಗಿ ಯೋಚಿಸುವುದು, ಮಾನಸಿಕ ಖಿನ್ನತೆ, ಮನೋ ವಿಕಾರತೆ ಈ ಎಲ್ಲದರಿಂದ ರಾಜಯೋಗದ ಅಭ್ಯಾಸದಿಂದ ಮುಕ್ತಿ ಹೊಂದಲು ಸಾಧ್ಯ ಎಂದು ತಿಳಿಸಿದರು. 

- Advertisement -

ನಿವೃತ್ತ ಕೃಷಿ ಅಧಿಕಾರಿ ಕೆ.ಎಸ್.ಪತ್ತಾರ ಮಾತನಾಡಿ, ಮನುಷ್ಯನ ಎಲ್ಲ ಕಶ್ಮಲಗಳನ್ನು ತೆಗೆದು ಹಾಕುವಲ್ಲಿ ಆಧ್ಯಾತ್ಮ ಕೇಂದ್ರದಿಂದ ಮಾತ್ರ ಕಾರಣ ನಾನು ಇಲ್ಲಿಯ ಆಧ್ಯಾತ್ಮ ಕೇಂದ್ರಕ್ಕೆ ಬಂದು ಸುಮಾರು 30 ವರ್ಷವಾಯಿತು ಬಂದು  ಇದರ ಲಾಭವನ್ನು ಪಡದಿದ್ದೇನೆ ನಮ್ಮ ಸಂಸಾರದ ಒತ್ತಡದಲ್ಲಿ ಎಷ್ಟೇ ಕೆಲಸವಿದ್ದರೂ ನಾನು ಇಲ್ಲಿ ನಡೆಯುವ ಆಧ್ಯಾತ್ಮದ ಮುರಳಿಯನ್ನು ತಪ್ಪಿಸದೆ ನಾವು ದಂಪತಿಗಳು ಕ್ಲಾಸಿಗೆ ಬರುತ್ತೇವೆ ಎಂದು ಅಭಿಮತ ವ್ಯಕ್ತ ಪಡಿಸಿದರು.

- Advertisement -
- Advertisement -

Latest News

ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ

ಬೆಳಗಾವಿ - ತಾಲೂಕಿನ ಹೊಸ ಇದ್ದಲಹೊಂಡ ಶಿವಾಪೂರ ಸರಕಾರಿ ಪ್ರೌಢ ಶಾಲೆಯ ವರ್ಗಾವಣೆಗೊಂಡ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆ ಶ್ರೀಮತಿ ಜಿ ಬಿ ಸುಗತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group