ದಾಲ್ಮಿಯ ಸಿಮೆಂಟ್ ಕಾರ್ಖಾನೆ ವತಿಯಿಂದ 70 ಹೊಲಿಗೆ ಯಂತ್ರ ಹಾಗೂ ಗ್ರಾಮ ಪರಿವರ್ತನಾ ಸ್ವಸಹಾಯ ಸಂಘಗಳ ಒಕ್ಕೂಟಕ್ಕೆ ಧನಸಹಾ
ಪ್ರಭಾತ್ ಕುಮಾರ್ ಸಿಂಗ್, ದಾಲ್ಮಿಯ ಸಿಮೆಂಟ್ ಕಾರ್ಖಾನೆ ಬೆಳಗಾವಿ ವಿಭಾಗದ ಮುಖ್ಯಸ್ಥರು ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳಾದ ಯಾದವಾಡ, ಕಾಮನಕಟ್ಟಿ, ಕೊಪದಟ್ಟಿ, ಗುಲಗಂಜಿಕೊಪ್ಪ, ಬುದ್ನಿ, ತೊಂಡಿಕಟ್ಟಿ ಮತ್ತು ಕುನ್ನಾಳ ಗ್ರಾಮದ 70 ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ದಾಲ್ಮಿಯಾ ಕಾರ್ಖಾನೆಯ ಬೆಳಗಾವಿ ವಿಭಾಗದ ಮುಖ್ಯಸ್ಥ ಪ್ರಭಾತ ಕುಮಾರ ವಿತರಿಸಿದರು. ಇದರೊಟ್ಟಿಗೆ ಮಹಿಳೆಯರು ಸ್ವಂತ ಉದ್ಯೋಗ ಮಾಡಲು ಆರ್ಥಿಕ ನೆರವಿಗಾಗಿ ಗ್ರಾಮ ಪರಿವರ್ತನಾ ಸ್ವ ಸಹಾಯ ಸಂಘಗಳ ಒಕ್ಕೂಟ ಕಾಮನಕಟ್ಟೆಗೆ 4.00 ಲಕ್ಷ ರೂಪಾಯಿಗಳ ಧನಸಹಾಯವನ್ನು ಸಿ ಎಸ್ ಆರ್ ಅಡಿಯಲ್ಲಿ ನೀಡಿದರು.
ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮದ ಜನರ ಜೀವನೋಪಾಯವನ್ನು ಅಭಿವೃದ್ಧಿಪಡಿಸಲು ಸಿ. ಎಸ್. ಆರ್ ಅಡಿಯಲ್ಲಿ ರೈತರಿಗೆ, ಮಹಿಳೆಯರಿಗೆ ಹಾಗೂ ಯುವಕರಿಗೆ ಹಲವಾರು ಕಾರ್ಯಕ್ರಮಗಳನ್ನು ಕಾರ್ಖಾನೆಯು ನಡೆಸುತ್ತಿದೆ ಹಾಗೂ ಇನ್ನು ಮುಂದೆಯೂ ಕಾರ್ಯಕ್ರಮಗಳನ್ನು ನಡೆಸುತ್ತದೆಂದು ಅವರು ತಿಳಿಸಿದರು.
ಸ್ಪೂರ್ತಿ ಲೇಡಿಸ್ ಕ್ಲಬ್ ಬೆಳಗಾವಿಯ ಅಧ್ಯಕ್ಷರಾದ ಶ್ರೀಮತಿ ವಂದನಾಸಿಂಗ್ ರವರು ಮಹಿಳೆಯರ ಜೀವನೋಪಾಯವನ್ನು ಅಭಿವೃದ್ಧಿಪಡಿಸಲು ಸಿ. ಎಸ್. ಆರ್ ಅಡಿಯಲ್ಲಿ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಸ್ವಉದ್ಯೋಗಕ್ಕೆ ಸ್ವ ಸಹಾಯ ಸಂಘಗಳ ಮೂಲಕ ಸಹಾಯ ಹಾಗೂ ಸ್ವಂತ ಉದ್ಯೋಗ ಮಾಡಲು ಸಹಾಯ ಮಾಡಲಾಗುತ್ತಿದೆ. ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ವಿನಂತಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಕಾರ್ಖಾನೆಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಮನೀಶ್ ಕುಮಾರ್ ಮಹೇಶ್ವರಿ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರಾದ ಅವದೆಶ್ ಕುಮಾರ್, ಜಯಶಂಕರ್ ತಿವಾರಿ, ಅರವಿಂದ್ ಕುಮಾರ್ ಸಿಂಗ್, ಗೋಲಪನಾಥ್, ಸಮೀರ್ ಕುಮಾರ್ ಅಗರ್ವಾಲ್, ಹಾಗೂ ಕಾರ್ಖಾನೆಯ ಅಧಿಕಾರಿಗಳಾದ ಕಾಚಿ ರಾಮ್ ದಯಾಲ್, ಅಜಿತ್ ಸಿಂಗ್ ರಾಯ್, ವಿಜಯ್ ಕುಮಾರ್ ತಿವಾರಿ, ಈರಸಂಗಯ್ಯ ಬಾಗೋಜಿಮಠ, ಶಶಿಕಾಂತ್ ಹಿರೇಕೊಡಿ, ಲೋಕಣ್ಣ ನಂದಗಾವ್ ಹಾಗೂ ಸ್ಪೂರ್ತಿ ಲೇಡಿಸ್ ಕ್ಲಬ್ ನ ಸದಸ್ಯರು ಸಿ.ಎಸ್.ಆರ್ ವಿಭಾಗದ ಅಧಿಕಾರಿಗಳು ಸುತ್ತಮುತ್ತಲಿನ ಗ್ರಾಮದ ನಾಗರಿಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಡಾಕ್ಟರ್ ನೀಲಕಂಠಗೌಡ ಅವರು ನಡೆಸಿಕೊಟ್ಟರು.