- Advertisement -
ಬೀದರ – ಬೇಡ ಜಂಗಮರಿಗೆ ನಾನು ಒಂದು ಚೀಲ ಜೋಳ ಕೊಟ್ಟಿದ್ದೆ ಎಂದು ಅವಮಾನಕರ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರ ಆಪ್ತ ಸಹಾಯಕನ ಹೇಳಿಕೆಯನ್ನು ಖಂಡಿಸಿ ಭಾಲ್ಕಿ ತಾಲ್ಲೂಕಿನ ಈಶ್ವರ ಖಂಡ್ರೆ ಮನೆ ಮುಂದೆ ಬೇಡ ಜಂಗಮರು ಪ್ರತಿಭಟನೆ ನಡೆಸಿದರು.
ಈಶ್ವರ ಖಂಡ್ರೆ ಆಪ್ತ ಸಹಾಯಕ ರಾಜಕುಮಾರ ಘಾಳೆ ಬೇಡ ಜಂಗಮರನ್ನು ಅವಮಾನಿಸಿದ್ದಾನೆ ಎನ್ನಲಾಗಿದ್ದು, ಪ್ರತಿಭಟನಾಕಾರರು ಈಶ್ವರ ಖಂಡ್ರೆಯವರ ಮುಂದೆ, ನೀವು ಜೋಳ ಕೊಟ್ಟಿದ್ದು ವಾಪಸ್ ತೆಗೆದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
- Advertisement -
ಈ ಮಧ್ಯೆ ಪ್ರತಿಭಟನಾಕಾರರು ಮತ್ತು ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ನಾವೇನು ಭಿಕ್ಷೆ ಬೇಡುವುದಿಲ್ಲ ನಮ್ಮ ಹಕ್ಕು ನಮಗೆ ಬೇಕು ಎಂದು ವಾಗ್ವಾದ ಮಾಡಿದ ಬೇಡ ಜಂಗಮರು ತಮಗೆ ಜಾತಿ ಪ್ರಮಾಣ ಪತ್ರ ನೀಡಲೇಬೇಕು ಎಂದು ಪ್ರತಿಭಟನೆ ನಡೆಸಿದರು.
ವರದಿ: ನಂದಕುಮಾರ ಕರಂಜೆ, ಬೀದರ