spot_img
spot_img

ಅಮ್ಮಾ ನಾನು ಶಾಲೆಗೆ ಹೋಗುವೆ ‘ ಕಿರುಚಿತ್ರ  ಚಿತ್ರೀಕರಣಕ್ಕೆ ಶಂಕರ ಹಲಗತ್ತಿ ಚಾಲನೆ

Must Read

- Advertisement -

“ಶಾಲೆ ಬಿಟ್ಟ ಮಗುವನ್ನು ಶಾಲಾಭಿವೃದ್ಧಿ ಸಮಿತಿ, ಶಾಲಾ ಪ್ರಧಾನ ಗುರುಗಳು ಹಾಗೂ ಸಿಬ್ಬಂದಿ ಮುಖ್ಯವಾಹಿನಿಗೆ ತರುವ ಶೈಕ್ಷಣಿಕ ಕಳಕಳಿಯುಳ್ಳ ವಿಷಯ ವಸ್ತುವನ್ನು ಆಧರಿಸಿದ ಈ ಕಿರುಚಿತ್ರ ಬಿಡುಗಡೆ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ. ಈ ಕಿರುಚಿತ್ರ ಎಲ್ಲರಿಗೂ ಪ್ರೇರಣೆಯಾಗಲಿ,ಈ ಮೂಲಕ ನಮ್ಮ ದೇಶದ ಅಮೂಲ್ಯ ಸಂಪತ್ತಾದ ಹಲವಾರು ಮಕ್ಕಳಿಗೆ ದಾರಿದೀಪವಾಗಲಿ ಎಂದು ಹಾರೈಸುವೆ.” ಎಂದು ಮಕ್ಕಳ ಮಹರ್ಷಿ , ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಯವರು  ಕಿರುಚಿತ್ರದ ಪೋಸ್ಟರ್  ಬಿಡುಗಡೆ ಮಾಡಿ ಮಾತನಾಡಿದರು.

“ಮಕ್ಕಳಿಗಾಗಿ ಆಸ್ತಿ ಮಾಡದೆ,ಮಕ್ಕಳನ್ನೇ ಆಸ್ತಿ ಮಾಡಲು ಹೊರಟ ಪ್ರತಿಯೊಬ್ಬರೂ ನೋಡಲೇ ಬೇಕಾದ ಕಿರುಚಿತ್ರ ಇದಾಗಿದೆ.ಬಡತನದಲ್ಲಿ ಸಾಕಷ್ಟು ಸಂಕಷ್ಟಗಳ ಮಧ್ಯೆ ಶಾಲೆ ಕಲಿಯಬೇಕೆಂಬ ಎಂಬ ದೃಢ ಮನಸ್ಸು ಮಾಡಿ ಕಲಿಯುವ ಓರ್ವ ಬಾಲಕನ ಸುತ್ತಾ ಹೆಣೆದಿರುವ ಈ ಕಥೆ ನಿಜವಾಗಿಯೂ ಎಲ್ಲರ ಹೃದಯ ತಟ್ಟುವಂತಿದೆ.” ಎಂದು  ಧಾರವಾಡ ಡಯಟ್ ದ ಉಪನ್ಯಾಸ ಕರಾದ ರೇಣುಕಾ ಅಮಲಝರಿ ಯವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಇಂತಹ ಹಲವಾರು ಶೈಕ್ಷಣಿಕ ಕಳಕಳಿಯುಳ್ಳ ಕಿರುಚಿತ್ರಗಳ ನಿರ್ಮಾಣ ಮಾಡಿದ ನಿರ್ದೇಶಕರಾದ ಬಾಬಾಜಾನ ಮುಲ್ಲಾ ಹಾಗೂ ಬಿ.ಆರ್.ಜಕಾತಿ,ಈ ಕಿರುಚಿತ್ರದ ನಿರ್ಮಾಪಕರು, ಅಕ್ಷರ ತಾಯಿ ದತ್ತಿದಾನಿ ಶ್ರೀಮತಿ ಲೂಸಿ ಸಾಲ್ಡಾನಾ ಸೇನಾ ಸಂಸ್ಥೆ (ರಿ) ಧಾರವಾಡದ ಅಧ್ಯಕ್ಷರು ಆದ ಎಲ್.ಐ.ಲಕ್ಕಮ್ಮನವರ,ಈ ಕಿರುಚಿತ್ರದ ನಿರ್ದೇಶಕರಾದ ಮಂಜುನಾಥ ಮತ್ತು ಅಮೀತ, ಛಾಯಾಗ್ರಾಹಕ ಸುರೇಶ ಮಹಾದೇವ, ಕೆ.ವೈ.ನಾರಾಯಣಸ್ವಾಮಿ, ಈ ಚಿತ್ರದ ನಿರ್ಮಾಣಕ್ಕೆ ಕೈ ಜೋಡಿಸಿದ ಲೂಸಿ ಸಾಲ್ಡಾನಾ, ಮಲ್ಲಿಕಾರ್ಜುನ ಚರಂತಿಮಠ, ಆರ್.ನಾರಾಯಣಸ್ವಾಮಿ ಚಿಂತಾಮಣಿ, ಮೋದಿನಸಾಬ ಬುಕ್ಕಿಟಗಾರ, ಮಲ್ಲಿಕಾರ್ಜುನ ಉಪ್ಪಿನ,ರೇಖಾ ಮೊರಬ,ಪವಿತ್ರಾ ಕಮ್ಮಾರ, ನಂದಿನಿ ಸನಬಾಲ್, ಸುಜಾತಾ ಪರೋಲಿಕರ, ಶ್ರೀಮತಿ ಲತಾ ಮುಳ್ಳೂರ ರಾಜ್ಯಾದ್ಯಕ್ಷರು ಸಾವಿತ್ರಿ ಬಾ ಪುಲೆ ಶಿಕ್ಷಕಿಯರ ಸಂಘ ಧಾರವಾಡ,  ಭೀಮಪ್ಪ ಕಾಸಾಯಿ ಗ್ರಾಮ ಪಂಚಾಯತಿ ಸದಸ್ಯರು ತಡಕೋಡ, ಶಂಕರ ಘಟ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ, ಶ್ರೀಮತಿ ಸುಜಾತಾ ಪರೋಲಿಕರ ಉಪ ವಲಯ ಅರಣ್ಯಾಧಿಕಾರಿಗಳು ಧಾರವಾಡ ಅರಣ್ಯ ವಿಭಾಗ, ಶ್ರೀಮತಿ ವಿ ಎನ್ ಕೀರ್ತಿವತಿ ಮುಖ್ಯ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗರಕಿ, ಮಲ್ಲಿಕಾರ್ಜುನ ಉಪ್ಪಿನ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುಬ್ಬಳ್ಳಿ,  ಚಂದ್ರಶೇಖರ ತಿಗಡಿ  ನಿರ್ದೇಶಕರು ಧಾರವಾಡ ತಾಲೂಕು ಟೀಚರ್ಸ್ ಸೊಸೈಟಿ ಧಾರವಾಡ, ಶ್ರೀಮತಿ ಎಸ್ ಪಿ ಮದ್ನೂರ ಕನ್ನಡ ಶಿಕ್ಷಕಿ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಬ್ಯಾಹಟ್ಟಿ, ವೀರನಗೌಡ ಸಿದ್ದಾಪುರ ಕಲಾವಿದರು ಕೆಲಗೇರಿ, ಮಂಜುನಾಥ ವಾಸಂಬಿ ಗ್ರಾಮ ಪಂಚಾಯತಿ ಸದಸ್ಯರು ಹೆಬ್ಬಳ್ಳಿ, ಸಿದ್ದಲಿಂಗೇಶ ಎಂ ವಿ ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಗೂರ,  ಕೆ ಎಂ ಮುನವಳ್ಳಿ ಮುಖ್ಯ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಗಸನಹಳ್ಳಿ‌.ಕಲಾವಿದರಾದ ಸಿದ್ದಪ್ಪ ಕುಂಬಾರ, ಪರಿಮಳಾ ಜಕ್ಕಣ್ಣವರ, ನಂದಿನಿ ಸನಬಾಲ್, ಮಂಜುಳಾ ಜ್ಯೋತಿ, ಸರಸ್ವತಿ ಸುಣಗಾರ, ಕುಮಾರ ಋತ್ವಿಕ್  ಮಹಾದೇವ ಸತ್ತಿಗೇರಿ,ನಂದನ ದ್ಯಾಪೂರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

- Advertisement -

ವರದಿ: ಶ್ರೀಮತಿ ನಂದಿನಿ ಸನಬಾಳ್
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಳಾ ತಾಲೂಕು ಕಲ್ಬುರ್ಗಿ ದಕ್ಷಿಣ ಜಿಲ್ಲೆ
ಕಲಬುರಗಿ

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group