Homeಸುದ್ದಿಗಳುಶಾಂತಾ ಮಸೂತಿ ಅವರ 'ಜೀವನ ಜಾತ್ರೆ' ಲೋಕಾರ್ಪಣೆ

ಶಾಂತಾ ಮಸೂತಿ ಅವರ ‘ಜೀವನ ಜಾತ್ರೆ’ ಲೋಕಾರ್ಪಣೆ

ಬೆಳಗಾವಿ – ಬೆಳಗಾವಿಯ ನೆಹರು ನಗರದಲ್ಲಿಯ ಕನ್ನಡ ಭವನದಲ್ಲಿ ಇತ್ತೀಚೆಗೆ ಶಾಂತಾ ಮಸೂತಿ ಅವರ ‘ಜೀವನ ಜಾತ್ರೆ’ ಕಥಾ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.

ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಬೆಳಗಾವಿ ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ ಕಥಾ ಸಂಕಲನದಲ್ಲಿ ಮಾನವೀಯ ಬದುಕಿನ ಬೇರೆ ಬೇರೆ ಮುಖಗಳ ಚಿತ್ರಣವನ್ನು ಕಥೆಗಳ ಮೂಲಕ ಹೆಣೆಯಲಾಗಿದೆ ಮಸೂತಿಯವರ ಸಾಹಿತ್ಯ ಸೇವೆ ಶ್ಲಾಘನಿಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ಶಿವಾನಂದ ಮಸೂತಿ ಹಾಗೂ ಶಾಂತಾ ಮಸೂತಿ ದಂಪತಿಗಳ 50ನೇ ವರ್ಷದ ವಿವಾಹ ವಾರ್ಷಿಕೋತ್ಸವ ನಿಮಿತ್ತ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಆಶಿ೯ವದಿಸಿದರು.

ಹಿರಿಯ ಸಾಹಿತಿ ನೀಲಗಂಗಾ ಚರತಿಮಠ ಅಧ್ಯಕ್ಷತೆ ವಹಿಸಿದ್ದರು ಶ್ರೀಕಾಂತ ಶಾನವಾಡ ಪುಸ್ತಕ ಪರಿಚಯಿಸಿದರು. ಕಾದಂಬರಿಕಾರ ಯ ರು ಪಾಟೀಲ, ಡಾ. ಗುರುದೇವಿ ಹುಲೆಪ್ಪನವರಮಠ ,ಡಾ ಬಸವರಾಜ ಜಗಜಂಪಿ ,ಶೈಲಜಾ ಬಿಂಗೆ,ಎಂ ಎಸ್ ಇಂಚಲ ಜ್ಯೋತಿ ಬದಾಮಿ, ಲಲಿತಾ ಪರ್ವತರಾವ, ಎಂ ವೈ ಮೆಣಸಿನಕಾಯಿ , ಶಿವಾನಂದ ರಶ್ಮಿ ,ಶಿವಪುತ್ರ ಇಂಚಲ, ಸಾಗರ ಮಸೂತಿ ,ಹಾಗೂ ಲೇಖಕಿಯರ ಸಂಘ ,ಬಸವ ಕಾಲನಿ ನಿವಾಸಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಂಗೀತಾ ಅಕ್ಕಿ, ಸ್ವಾಗತಿಸಿದರು.ಆಶಾ ಯಮಕನಮರಡಿ ನಿರೂಪಿಸಿದರು. ಶಿವಾನಂದ ಮಸೂತಿ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group