spot_img
spot_img

ರಾಷ್ಟ್ರಧ್ವಜ ಕುರಿತು ಅರಿವು,ತರಬೇತಿ ಮಾಹಿತಿ ನೀಡಿದ ರಾಜ್ಯ ಸಂಪನ್ಮೂಲ ವ್ಯಕ್ತಿ ಶಾಂತಪ್ಪ ಕುಂಬಾರ

Must Read

spot_img

ಸಿಂದಗಿ: ಭಾರತ ದೇಶದ ಪ್ರತಿಯೊಬ್ಬ ನಾಗರಿಕರು ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸೇರಿದಂತೆ ರಾಷ್ಟ್ರ ಲಾಂಛನಗಳಿಗೆ ಗೌರವ ನೀಡುವ ಜೊತೆಗೆ ಅವುಗಳ ಬಳಕೆಯ ಬಗ್ಗೆಯೂ ತಿಳಿದಿರಬೇಕು ಎಂದು ಭಾರತ ಸೇವಾದಳದ ರಾಜ್ಯ ಸಂಪನ್ಮೂಲ ವ್ಯಕ್ತಿ ಶಾಂತಪ್ಪ ಕುಂಬಾರ ಹೇಳಿದರು.

ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಮಹಾವಿದ್ಯಾಲಯ ಮತ್ತು ವಿಜಯಪುರ ಭಾರತ ಸೇವಾದಳದ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರಧ್ವಜ ಕುರಿತು ಅರಿವು, ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರ್ರಧ್ವಜವನ್ನು ಖಾದಿ ಭಂಡಾರಗಳಲ್ಲಿ ಅದರಲ್ಲೂ ಐಎ ಚಿಹ್ನೆ ಇರುವ ಧ್ವಜವನ್ನೇ ಖರೀದಿಸಬೇಕು, ನಿರ್ದಿಷ್ಟ ಅಳತೆಯ ಧ್ವಜವನ್ನೇ ಬಳಸಬೇಕು ಹಾಗೇ ರಾಷ್ಟ್ರಧ್ವಜ ನೀತಿ ಸಂಹಿತೆ ಪ್ರಕಾರ ಧ್ವಜಾರೋಹಣ, ಧ್ವಜ ಅವರೋಹಣ, ಧ್ವಜದ ಕಂಬ, ದಾರ ಹಾಗೂ ಧ್ವಜ ರಕ್ಷಕನ ಕೆಲಸ ಕಾರ್ಯಗಳ ಕುರಿತು ಪ್ರಾತ್ಯಕ್ಷಿಕೆ ತರಬೇತಿ ನೀಡಿದ ಅವರು, ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವಾಗ ರಾಷ್ಟ್ರಧ್ವಜದ ನಿಯಮಗಳನ್ನು ಪಾಲನೆ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಎಂ.ಎಸ್.ಹೈಯಾಳಕರ ಮಾತನಾಡಿ, ರಾಷ್ಟ್ರಧ್ವಜ ಆರೋಹಣ, ಅವರೋಹಣ ತರಬೇತಿ ಇಂದಿನ ದಿನಗಳಲ್ಲಿ ಬಹಳ ಅವಶ್ಯಕವಾಗಿದೆ. ಏಕೆಂದರೆ ಇಂದಿನ ದಿನಮಾನಗಳಲ್ಲಿ ರಾಷ್ಟ್ರೀಯ ಆಚರಣೆಗಳು ಮುಗಿದ ಮಾರನೆ ದಿನ ಪತ್ರಿಕಾ ಮಾಧ್ಯಮಗಳಲ್ಲಿ ತಲೆಕೆಳಗಾಗಿ ಹಾರಿಸಿರುವ ಮಾಹಿತಿ, ಹರಿದ ಧ್ವಜ ಹಾರಿಸಿರುವುದು ಪತ್ರಿಕೆಗಳ ಮೂಲಕ ತಿಳಿದುಕೊಂಡಂತಹ ವಿಷಯಗಳಿವೆ ಅದಕ್ಕಾಗಿ ಭಾರತ ಸೇವಾದಳದ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಾಚಾರ್ಯ ಶಿವಮಾಂತ ಪೂಜಾರಿ. ಉಪನ್ಯಾಸಕರಾದ ಮಹಾಂತೇಶ ನೂಲಾನವರ, ರೇವಣಸಿದ್ಧ ಹಾಳಕೇರಿ, ಗಿರೀಶ ಕುಲಕರ್ಣಿ, ಸಾಯಬಣ್ಣ ಸಜ್ಜನ್, ಆಶೀಪ್ ಕೋಕಾನಿ, ಮಲ್ಲೇಶಪ್ಪ ಸಾಗರ, ಉಮೇಶ್ ಪೂಜೇರಿ, ಹೇಮಾ ಹಿರೇಮಠ, ಶೃತಿ ಹೂಗಾರ, ಪ್ರಭಾವತಿ ಮಾಲಿಪಾಟೀಲ್, ಲಕ್ಷ್ಮೀ ಕೆಸರಗೋಪ್ಪ, ವರ್ಷಾ ಪಾಟೀಲ್, ಪ್ರಿಯಾಂಕಾ ಬ್ಯಾಕೋಡ, ಮುರ್ತುಜಬಿ ಬೇಗಮ ಬಿರಾದಾರ, ಸರಸ್ವತಿ ಜಿ, ವಿಜಯಲಕ್ಷ್ಮಿ ಭಜಂತ್ರಿ, ಸೇರಿದಂತೆ ಭೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಸಿದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!