spot_img
spot_img

ವಿವಿಧ ಕಾಮಗಾರಿ ಪೂರ್ಣಗೊಳಿಸಲು ಶಾಂತವೀರ ಸೂಚನೆ

Must Read

spot_img
- Advertisement -

ಸಿಂದಗಿ; ಪಟ್ಟಣದಲ್ಲಿ ಚಾಲ್ತಿಯಲ್ಲಿರುವ ಯು.ಜಿ.ಡಿ ಕಾರ್ಯದ ಅವಧಿ ಮುಗಿದರು ಕೂಡಾ ಇನ್ನೂ ಮುಗಿದಿಲ್ಲ ತುರ್ತಾಗಿ ಪೂರ್ಣಗೊಳಿಸುವದು ಹಾಗೂ ಬಾಕಿ ಇರುವ ಯು.ಜಿ.ಡಿಯನ್ನು ಪೂರ್ಣಗೊಳಿಸಲು ಕ್ರಮವಹಿಸುವದು. ಯು.ಜಿ.ಡಿ ನಿರ್ಮಾಣ ಕಾರ್ಯದಲ್ಲಿ ಅಗೆಯಲಾದ ರಸ್ತೆಯನ್ನು ಸುವ್ಯವಸ್ಥಿತವಾಗಿ ಮರುಸ್ಥಾಪಿಸುವಂತೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇ ಆನಂದ ರಾಠೋಡ ಅವರಿಗೆ ಅಧ್ಯಕ್ಷ ಶಾಂತವೀರ ಬಿರಾದಾರ ಸೂಚಿಸಿದರು.

ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ಶಾಂತವೀರ ಬಿರಾದಾರ ಅಧ್ಯಕ್ಷತೆಯಲ್ಲಿ ವಿವಿಧ ವಿಷಯಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುಜಿಡಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಶೇಖರಣೆ ಟಾಕಿಗಳು ಒಡೆದುಹೋಗಿವೆ ಅವುಗಳ ಬಗ್ಗೆ ಗುತ್ತಿಗೆದಾರರಿಂದ ಮಾಹಿತಿ ಪಡೆದು ದುರಸ್ಥಿಗೊಳಿಸಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿ ಎಂದು ತಿಳಿಸಿದರು.

ಟ್ರಾಫಿಕ್ ಸಮಸ್ಯೆಯ ನಿರ್ವಹಣೆ ಒನ್‌ವೇ ರಸ್ತೆ ನಿಗದಿಪಡಿಸುವದು. ಬೀದಿ ಬದಿ ವ್ಯಾಪಾರಿಗಳಿಗೆ ಟ್ರಾಫಿಕ್ ಸಮಸ್ಯೆಯಾಗದಂತೆ ಸ್ಥಳಾಂತರಿಸಲು ಕ್ರಮವಹಿಸುವದು. ರಸ್ತೆ ಸುರಕ್ಷತಾ ಕ್ರಮ ವಹಿಸುವುದು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಿ.ಸಿ ಟಿವಿ ಅಳವಡಿಸುವಂತೆ ಕ್ರಮ ವಹಿಸಿ ಎಂದು ಪೋಲಿಸ್ ಇಲಾಖೆಗೆ ತಿಳಿಸಿದರು.

- Advertisement -

ಪಟ್ಟಣದಲ್ಲಿ ಅಗತ್ಯವಿರುವಲ್ಲಿ ಹೊಸ ರಸ್ತೆಗಳ ನಿರ್ಮಾಣದ ಕುರಿತು ಹಾಳಾಗಿರುವ ರಸ್ತೆಗಳ ದುರಸ್ಥಿ ಕಾರ್ಯ ನಿರ್ವಹಿಸುವದು. ಹೊಸದಾಗಿ ಡಿವೈಡರಗಳ ನಿರ್ಮಾಣ ಮಾಡಲು ಕ್ರಮ ವಹಿಸಿ ಎಂದು ಲೋಕೋಪಯೋಗಿ ಅಧಿಕಾರಿ ಅರುಣಕುಮಾರ ವಡಗೇರಿ ಅವರಿಗೆ ಸೂಚಿಸಿದರು.

ಸರ್ಕಾರಿ ಜಾಗೆಗಳ ಒತ್ತುವರಿ ತೆರವುಗೊಳಿಸುವದು. ವಕ್ಫ್ ಬೋರ್ಡ ಜಾಗದಲ್ಲಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಲು ಕ್ರಮವಹಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಹೊಸ ಬಡಾವಣೆಗಳ ಅನುಮೋದನೆ ಅಭಿವೃದ್ಧಿ ಪಡಿಸಲಾದ ಲೇಔಟಗಳಿಗೆ ಅಂತಿಮ ಅನುಮೋದನೆ. ಕಟ್ಟಡ ಪರವಾನಿಗೆ ಅರ್ಜಿ ಹಾಗೂ ಲೇಔಟ್ ಗಳಿಗೆ ಶೀಘ್ರವಾಗಿ ಅನುಮೋದನೆ ನೀಡುವ ಕುರಿತು. ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯ ಹೊರಗಿರುವ ಲೇಔಟ್‌ಗಳ ಕುರಿತ ಪ್ರಸ್ತಾವನೆ ಬಗ್ಗೆ ಕೈಗೊಂಡ ಕ್ರಮದ ಮಾಹಿತಿ ಒದಗಿಸುವಂತೆ ಎತ್ತರದ ಬಿಲ್ಡಿಂಗ ಗಳಿಗೆ ನೀಡಲಾದ ನಿರಾಕ್ಷೇಪಣಾ ಪತ್ರಗಳ ಕುರಿತು ಸಿಂದಗಿ ಪಟ್ಟಣದ ರಿ.ಸ.ನಂ ೪೭೩ ಮತ್ತು ೪೭೪ ರಲ್ಲಿ ಲೇಔಟ ಮೋಜಣಿ ಮಾಡಿ ಹದ್ದಿ ಗುರ್ತಿಸಿ ಆಶ್ರಯ ಪ್ಲಾಟಗಳ ಕಲ್ಲು ನೆಡಲು ಕ್ರಮವಹಿಸುವ ಕುರಿತು ನಗರ ಮತ್ತು ಗ್ರಾಮಾಂತರ ಯೋಜನಾಧಿಕಾರಿ ಗೋವಿಂದಸಿಂಗ ರಜಪೂತ ಅವರಿಗೆ ನಿರ್ದೇಶನ ನೀಡಿದರು.

- Advertisement -

ಸಿಂದಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯ ಬಗ್ಗೆ ಮೇಲ್ವಿಚಾರಣೆ ಹಾಗೂ ಕ್ರಮ ಜಾಕವೆಲ್‌ಗಳ ದುರಸ್ಥಿ ಮತ್ತು ನಿರ್ವಹಣೆ ಸಿಂದಗಿ ಪಟ್ಟಣದಲ್ಲಿ ೨೪*೭ ನೀರು ಸರಬರಾಜು ವ್ಯವಸ್ಥೆ ಅಳವಡಿಸುವದು ಮತ್ತು ಬೀಚಿಂಗ್ ಪೌಡರ ಖರೀದಿಸುವ ಕುರಿತು ಟೆಂಡರ ಕರೆಯುವದು. ಬಳಗಾನೂರ ಕೆರೆಯ ಸಿಬ್ಬಂದಿಗಳ ಟೆಂಡರ ಕರೆಯುವಂತೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ಹೇಳಿದರು.

ಪಟ್ಟಣದಲ್ಲಿ ಕೈಗಾರಿಕಾ ವಲಯ ಸೇರಿದಂತೆ ವಿವಿಧೆಡೆ ಗ್ಯಾರೆಜುಗಳಿಗೆ ವಿದ್ಯುತಿನ ಕೊರತೆ ಹಾಗೂ ಹೊಸ ತಂತಿ ಜೊಡಣೆ ಬಗ್ಗೆ ಹೆಸ್ಮಾಂ ಎಇ ಮಲಕಪ್ಪ ಜಾಲಿಬೆಂಚಿ ಅವರಿಗೆ ತಿಳಿಸಿದರು.

ಪ್ರಮುಖ ರಸ್ತೆಗಳ ಎರಡೂ ಬದಿ ಇರುವ ಹಾಗೂ ಡಿವೈಡರ ಮಧ್ಯದಲ್ಲಿರುವ ಗಿಡಗಳ ಸುರಕ್ಷತೆಗೆ ಕ್ರಮವಹಿಸುವದು. ಪ್ರಮುಖ ರಸ್ತೆಗಳ ಸೌಂದರೀಕರಣಕ್ಕೆ ಕುರಿತು ಕ್ರಮವಹಿಸುವದು. ಗಿಡಗಳಿಗೆ ಟೀ ಗಾರ್ಡ ಅಳವಡಿಸುವದು. ಟ್ರೀ ಫಾರ್ಕ ನಿರ್ಮಾಣ ಪಟ್ಟಣದಲ್ಲಿರುವ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಖಾಲಿ ಜಾಗೆಯಲ್ಲಿ ಗಿಡಗಳನ್ನು ನೆಡುವಂತೆ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಪ್ರಿಯಾಂಕಾ ನಗರ ಅವರಿಗೆ ಸೂಚಿಸಿದರು.
ಅಗ್ನಿಶಾಮಕ ಇಲಾಖೆ; ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಗಳ ಕುರಿತು ಪಟ್ಟಣದಲ್ಲಿನ ಕಾಂಪ್ಲೆಕ್ಸ್ ಮತ್ತು ಅಪಾರ್ಟಮೆಂಟಗಳಲ್ಲಿ ಅಗ್ನಿ ಅವಘಡ ಸಂಭವಿಸದಂತೆ ವಹಿಸಲಾದ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಎನ್.ಬಿ.ಪೂಜಾರಿ ಹೇಳಿದರು.

ಈ ಸಂದರ್ಭದಲ್ಲಿ ಅಗ್ನಿಶಾಮಕ ಎಸ್.ಎಚ್. ಮಠ, ಪುರಸಭೆ ಜೆಇ ಅಜುರುದ್ದಿನ ನಾಟೀಕಾರ, ಸಿನೇಟರಿ ಅದಿಕಾರಿ ನಬಿರಸೂಲ ಉಸ್ತಾದ, ವ್ಯವಸ್ಥಾಪಕ ದತ್ತಾತ್ರೇಯ ಹಳ್ಳಿ, ಸಿಬ್ಬಂದಿ ಸಿದ್ದು ಅಂಗಡಿ, ಜಗದೀಶ ದೊಡಮನಿ ಸೇರಿದಂತೆ ಹಲವರಿದ್ದರು.

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group