spot_img
spot_img

ಕಾಮನಕಟ್ಟಿ ಗ್ರಾ. ಪಂ ಅಧ್ಯಕ್ಷರಾಗಿ ಶಾಂತವ್ವ ಮೋಡಿ ಅವಿರೋಧ ಆಯ್ಕೆ         

Must Read

spot_img
             ಮೂಡಲಗಿ: ತಾಲೂಕಿನ ಕಾಮನಕಟ್ಟಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಸೋನವ್ವ ಹಣಮಂತ ಮಳ್ಳಿ ಅವರ ವಿರುದ್ದ ಅವಿಶ್ವಾಸ ನಿರ್ಣಯ ದಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಜರುಗಿದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬೆಮ್ಯೂಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿ ಶಾಂತವ್ವ ತಿಮ್ಮಣ್ಣ ಮೋಡಿ ಅವರು ಅವಿರೋಧವಾಗಿ ಆಯ್ಕೆಗೊಂಡರು.
        12 ಸದಸ್ಯರನ್ನು ಹೊಂದಿರುವ ಕಾಮನಕಟ್ಟಿ ಗ್ರಾಮ ಪಂಚಾಯತ  ಇಂದು ನಡೆದ ಚುನಾವಣೆಯಲ್ಲಿ 8ಗ್ರಾ. ಪಂ ಸದಸ್ಯರು ಭಾಗವಹಿದ್ದರು ಅದರಲ್ಲಿ ಶಾಂತವ್ವ ತಿಮ್ಮಣ್ಣ ಮೋಡಿ ಅವರು ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.
   ಚುನಾವಣಾಧಿಕಾರಿಯಾಗಿ ಜಿಆರ್ ಬಿಸಿ ಅಭಿಯಂತರ ಅಶ್ವಿನ್ ಎಚ್. ಜಿ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ಗ್ರಾ. ಪಂ ಪಿಡಿಒ ಎಚ್. ವೈ. ತಾಳಿಕೋಟಿ ಕಾರ್ಯನಿರ್ವಹಿದ್ದರು.
     ವಿಜಯೋತ್ಸವ: ಕಾಮನಕಟ್ಟಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶಾಂತವ್ವ ತಿಮ್ಮಣ್ಣ ಮೋಡಿ  ಅವಿರೋಧ ಆಯ್ಕೆಗೊಳ್ಳುತ್ತಿದಂತೆ  ಬಂಬಲಿಗರು ಗುಲಾಲ ಎರಚಿ, ಪಟಾಕಿ ಸಿಡಿಸಿ ಹಾಗೂ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು ಕಾಮನಕಟ್ಟಿ ಮತ್ತು ಯಾದವಾಡ ಗ್ರಾಮಗಳ ದೇವಸ್ಥಾನಕ್ಕೆ ತೆರಳಿ ದೇವರುಗಳ ದರ್ಶನ ಪಡೆದರು.
     ಈ ಸಮಯದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಸುವರ್ಣಾ ಮೂಲಿಮನಿ, ಬಸಪ್ಪ ಮಾಸರಡ್ಡಿ, ಲಕ್ಕವ್ವ ಗಾಣಗಿ, ಶಮೀನಾ ಅತ್ತಾರ, ಗೋವಿಂದಪ್ಪ ಉದಪುಡಿ, ಮಹಾದೇವಿ ಸಂಗಟಿ, ಹಣಮಂತ ಹಾವನ್ನವರ ಹಾಗೂ ಗಣ್ಯರಾದ ಬಿ.ಎಚ್. ಪಾಟೀಲ, ಎಲ್. ಟಿ. ಲಕ್ಷಾಣಿ, ಮಾದೇವ ರೂಗಿ, ನಿಂಗಪ್ಪ ಉದಪುಡ್ಡಿ, ಮುತ್ತಪ್ಪ ಪೂಜೇರ, ಬಸಪ್ಪ ಪೂಜೇರ, ಸಿದ್ದಪ್ಪ ಪೂಜೇರ, ಸಾಗಮೇಶ ಕೆರಿ, ರಾಜು ಚಟ್ಟಿಮಠ,  ಮಂಜು ನಾಯ್ಕ, ಪ್ರಕಾಶ ಪಾಟೀಲ, ಹಣಮಂತ ಪೆಟ್ಲುರ, ರಮೇಶ ಜುಲ್ಪಿ, ಮಲಿಕ್ ಲಾಡಜಿ, ಗೋವಿಂದಪ್ಪ ಉದಪುಡ್ಡಿ, ಮಲ್ಲು ಕ್ವಾನ್ಯಾಗೋಳ ಮಹಾನಿಂಗ ಅಮಲಝರಿ, ಮಾರುತಿ ಹನಗಂಡಿ, ಬೀರಪ್ಪ ಪೂಜೇರಿ, ಕರೆಪ್ಪ  ಇಟ್ಟನ್ನವರ, ಮಂಜು ಹುನಸಿಕಟ್ಟಿ, ಹನಮಂತ ಹುನಸಿಕಟ್ಟಿ, ಹನಮಂತ ಮೋಡಿ, ವೀರು ಮೋಡಿ ಮತ್ತಿತರರು ಉಪಸ್ಥಿತರಿದ್ದರು.
- Advertisement -
- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group