spot_img
spot_img

ಲಿಂಗಾಯತ ಸಂಘಟನೆ ವತಿಯಿಂದ ಶರಣ ಹಡಪದ ಅಪ್ಪಣ್ಣ ಜಯಂತಿ ಮತ್ತು ಸತ್ಸಂಗ

Must Read

ಕಾಯಕ, ಸತ್ಸಂಗ, ಸೇವಾಮನೋಭಾವದಿಂದ ಜೀವನ ಪಾವನ– ಗುರುಸಿದ್ಧ ಮಹಾಸ್ವಾಮೀಜಿ

ಶರಣರ ಜೀವನದಂತೆ ಕಾಯಕವೇ ಕೈಲಾಸ ಎಂದು ನಿಷ್ಠೆಯಿಂದ ದುಡಿದರೆ ಜೀವನದ ಜಂಜಾಟಗಳಿಂದ ಪಾರಾಗಿ ನೆಮ್ಮದಿಯ ಬದುಕನ್ನು ಸಾಗಿಸಬಹುದು. ಸೇವಾಮನೋಭಾವ, ಸತ್ಸಂಗಗಳು ಕೂಡ ಜೀವನವನ್ನು ಪಾವನಗೊಳಿಸುವವು ಎಂದು ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು.

ರವಿವಾರ ದಿ. 10 ರಂದು ನಗರದ ಫ. ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಹಡಪದ ಅಪ್ಪಣ್ಣನವರ ಜಯಂತಿ ಮತ್ತು ಸತ್ಸಂಗ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ ನುಡಿದರು.

ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಆಗಬೇಕು. ತಂದೆ-ತಾಯಿ ಸೇವೆ ಮಾಡುವುದರ ಜೊತೆಗೆ ಸಮಾಜಕ್ಕೆ ತಮ್ಮದೇ ಆಗಿರುವ ಕಾಣಿಕೆ ನೀಡುವ ನಿಟ್ಟಿನಲ್ಲಿ ಜೀವನ ಸಾಗಿಸಬೇಕು ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶರಣ ಹಡಪದ ಅಪ್ಪಣ್ಣನವರ ಜಯಂತಿ ಪ್ರಯುಕ್ತ ಉಪನ್ಯಾಸ ನೀಡಿದ ಜಿ.ಎ. ಕಾಲೇಜಿನ ಉಪನ್ಯಾಸಕ ಎಂ. ಹೆಚ್.ಮಾರದ ಮಾತನಾಡಿ, ನಾವು ಮಾಡುವ ಕಾಯಕವನ್ನು ನೋಡಿ ಮೇಲು-ಕೀಳು ಎಂದು ಭಾವಿಸಬಾರದು, ಕಾಯಕ ಯಾವುದೇ ಆಗಿರಲಿ ವ್ಯಕ್ತಿಯಲ್ಲಿ ನಿಷ್ಠೆ ಮಹತ್ವದ್ದು. ಆ ನಿಟ್ಟಿನಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನೇ ತಮ್ಮ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡು ಇಡೀ ತಮ್ಮ ಅನುಭವ ಮಂಟಪದ ಕಾರ್ಯಭಾರವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿದರು. ಇಂತಹ ಸಾಮಾಜಿಕ ನ್ಯಾಯ ಈಗಲೂ ನಾವು ನೆರವೇರಿಸುತ್ತ ನಡೆಯಬೇಕು. ಅಪ್ಪಣ್ಣನವರ ಸ್ವಾಮಿ ನಿಷ್ಠೆ ಮತ್ತು ಕಾಯಕನಿಷ್ಠೆ ಬಹಳ ಅದ್ಭುತವಾದದ್ದು ಎಂದು ಅಪ್ಪಣ್ಣನವರ ಜೀವನಗಾಥೆ ವಿವರಿಸಿದರು.

ಇದೇ ಸಂದರ್ಭದಲ್ಲಿ ಸಂಘಟನೆ ಬೆಳೆಸುವ ನಿಟ್ಟಿನಲ್ಲಿ ಸದಾ ಸಹಾಯ ಸಹಕಾರ ನೀಡಿದ ನ್ಯಾಯವಾದಿ ದಿನೇಶ ಪಾಟೀಲ, ಉದ್ಯಮಿಗಳಾದ ರುದ್ರಣ್ಣ ಚಂದರಗಿ ಮತ್ತು ಸತೀಶ ಪಾಟೀಲ ಅವರನ್ನು ಸತ್ಕರಿಸಲಾಯಿತು.

ಸತ್ಕಾರ ಸ್ವೀಕರಿಸಿ ಮಾತನಾಡಿದ ರುದ್ರಣ್ಣ ಚಂದರಗಿ, ಗುರುವಿನ ಆಶೀರ್ವಾದದ ಬಲದಿಂದ ನಾವು ಒಬ್ಬ ವ್ಯಕ್ತಿ ಆಗುವುದರ ಜೊತೆಗೆ ಸಮಾಜಕ್ಕೆ ಶಕ್ತಿ ಆಗಬಹುದು ಎಂದರು. ದಿನೇಶ ಪಾಟೀಲ ಮಾತನಾಡಿ ಇಂದಿನ ಶಿಕ್ಷಣದ ಈಗಿನ ಮಟ್ಟಕ್ಕೆ ಮಠಮಾನ್ಯಗಳ ಸೇವೆಯೇ ಕಾರಣ. ಶರಣ ಜೀವಿಗಳ ಶ್ರಮದಿಂದ ಈ ಭಾಗದಲ್ಲಿ ಕೆಎಲ್ಇ, ಧಾರವಾಡದಲ್ಲಿ ಎಲ್. ಈ. ಎ, ಸಂಕೇಶ್ವರದಲ್ಲಿ ದುರದುಂಡೇಶ್ವರ ಸಂಘ, ಬೆಳಗಾವಿಯ ಸಿದ್ದರಾಮೇಶ್ವರ ಸಂಸ್ಥೆಗಳು ಬೆಳೆದು ಇಂದು ಸಮಾಜವೊಂದು ಹಂತಕ್ಕೆ ಬಂದಿದೆ. ಸಮಾಜದ ಸಬಲೀಕರಣಕ್ಕೆ ಸಂಘಟನೆ ವತಿಯಿಂದ ಶರಣ ಸತ್ಸಂಗ ಜೊತೆಗೆ ಅಕ್ಷರಕ್ರಾಂತಿ ಸಹ ಆಗಬೇಕು. ಹಿಂದೆ 12ನೇ ಶತಮಾನದ ಮಾದರಿ ಸಂವಿಧಾನವೇ ಈಗಿನ ಸವಿಧಾನ ಎಂದರೆ ತಪ್ಪಾಗದು. ಬೇರೆ ಬೇರೆ ದೇಶಗಳ ಸಂವಿಧಾನವನ್ನು ಮಾದರಿಯಾಗಿ ತೆಗೆದುಕೊಳ್ಳುವುದನ್ನು ಬಿಟ್ಟು ಶರಣರ ವಚನಗಳೇ ಸಂವಿಧಾನ ದಲ್ಲಿ ಅಡಕವಾಗಿದ್ದರೆ ಇನ್ನೂ ಸಹ ನಮ್ಮ ಸಂವಿಧಾನ ಪರಿಣಾಮಕಾರಿಯಾಗಿರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಯೋಗ ಮತ್ತು ಈಜು ಸ್ಪರ್ಧೆಯಲ್ಲಿ ರಾಜ್ಯ ಸೇರಿದಂತೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಲಕ್ಷ್ಮಣ ಕುಂಬಾರ ದಂಪತಿಗಳನ್ನು ಅವರ ವಿವಾಹದ 50 ನೇ ವಾರ್ಷಿಕೋತ್ಸವದ ಪ್ರಯುಕ್ತ ಸಂಘಟನೆ ವತಿಯಿಂದ ಶ್ರೀಗಳು ಸತ್ಕರಿಸಿದರು. ಕಾರ್ಯಕ್ರಮದಲ್ಲಿ ಲಿಂಗಾಯತ ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯನ್ನವರ, ಸಂಗಮೇಶ ಅರಳಿ, ಶಶಿಭೂಷಣ ಪಾಟೀಲ, ಶಂಕರ ಗುಡಸ, ಸದಾಶಿವ ದೇವರಮನಿ, ಸಂಜಯ ಭಾವಿ,ಬಿ. ಎಂ. ತಿಗಡಿ,ಜ್ಯೋತಿ ಬದಾಮಿ, ಎಂ. ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ,ವಿ. ಕೆ. ಪಾಟೀಲ, ಎಂ. ಎಸ್. ಪಾಟೀಲ,ಬಿ. ಬಿ. ಪಾಟೀಲ, ಆನಂದ ಕರ್ಕಿ ಸೇರಿದಂತೆ ಸಂಘಟನೆಯ ಸದಸ್ಯರು ಶರಣ-ಶರಣೆಯರು ಹಾಜರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸರ್ವರಿಂದ ವಚನ ಪ್ರಾರ್ಥನೆ ನಡೆಯಿತು, ಬಸಮ್ಮ ವಸ್ತ್ರದ ಭಾವಗೀತೆ ಪ್ರಸ್ತುತಪಡಿಸಿದರು. ಸುರೇಶ ನರಗುಂದ ಸ್ವಾಗತಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!