ಫೆ. ಒಂದರಿಂದ ಗೋಕಾಕದಲ್ಲಿ ಶರಣ ಸಂಸ್ಕೃತಿ ಉತ್ಸವ

0
130

ಮೂಡಲಗಿ:- ಪ್ರತಿವರ್ಷದಂತೆ ಈ ವರ್ಷವೂ ಫೆಬ್ರುವರಿ 1ರಿಂದ 4 ವರೆಗೆ ಗೋಕಾಕದ ಶೂನ್ಯ ಸಂಪಾದನ ಮಠದಲ್ಲಿ ಶರಣ ಸಂಸ್ಕ್ರತಿ ಉತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮೂಡಲಗಿ ತಾಲೂಕಾ ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ತಿಳಿಸಿದರು.

ಸುಮಾರು 20 ವರ್ಷಗಳಿಂದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ “ಶರಣ ಸಂಸ್ಕ್ರತಿ”ಕಾರ್ಯಕ್ರಮ ಮುರುಘರಾಜೇಂದ್ರ ಅದ್ಧೂರಿಯಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದುಕೊಂಡು ಬರುತ್ತಿದೆ.

ಈ ಶರಣ ಸಂಸ್ಕ್ರತಿ ಉತ್ಸವದಲ್ಲಿ ಕೆಲ ಸಾಧಕರನ್ನು ಗುರ್ತಿಸಿ ಅವರಿಗೆ 2025 ರ ಸಾಲಿನ “ಕಾಯಕಶ್ರೀ” ಪ್ರಶಸ್ತಿ ನೀಡಲಾಗುವುದು. ಈ ವರ್ಷ ಕಾಯಕಶ್ರೀ ಪ್ರಶಸ್ತಿಗೆ ಭಾಜನರಾದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಜಿಮ್ನಾಸ್ಟಿಕ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಪ್ರಥಮ ಮಹಿಳಾ ತ್ರಿಪುರಾದ ಪದ್ಮಶ್ರೀ ದೀಪಾ ಕರ್ಣಾಕರರವರಿಗೆ ನೀಡಲಿದ್ದಾರೆ ಎಂದು ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಡಾ. ಶಿಂಧಿಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ ಉತ್ಸವದಲ್ಲಿ ಮಹಿಳಾ ಸಮಾವೇಶ, ಆರಕ್ಷಕ ಸಮಾವೇಶ, ಯುವ ಸಮಾವೇಶ, ಉದ್ಯೋಗ ಮೇಳ, ಪುಸ್ತಕ ಮೇಳ ಈ ವಿಶೇಷ ಮೇಳದೊಂದಿಗೆ, ಕಾರ್ಯಕ್ರಮ ಜರುಗಲಿವೆ ಮತ್ತು ಇನ್ನೂ ಅನೇಕ ಕಾರ್ಯಕ್ರಮಗಳು ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯಲಿದ್ದು ರಾಜಕೀಯ ಮುಖಂಡರು ಮತ್ತು ಅಪಾರ ಶರಣರು ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದರು.