spot_img
spot_img

ಶರಣರ ಜೀವಪರ ನಿಲುವುಗಳ ಕೃತಿ ಸಂಸ್ಕೃತಿಯ ಪ್ರತೀಕ- ಸಮುದ್ರವಳ್ಳಿ ವಾಸು

Must Read

spot_img
- Advertisement -

ಹಾಸನದ ಸಾಲಗಾಮೆ ಮುಖ್ಯ ರಸ್ತೆಯಲ್ಲಿರುವ ಸೆಂಟ್ರಲ್ ಕಾಮರ್ಸ್ ಪಿ.ಯು ಕಾಲೇಜಿನಲ್ಲಿ ಕವಯತ್ರಿ ನೀಲಾವತಿ ಸಿ.ಎನ್ ರವರ ಪ್ರಾಯೋಜಕತ್ವದಲ್ಲಿ 318ನೇ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.

ಕವಯತ್ರಿ, ವಚನಗಾರ್ತಿ ಶ್ರೀಮತಿ ಸುಶೀಲಾ ಸೋಮಶೇಖರ ರವರ ಶರಣರ ವಚನಗಳಲ್ಲಿ ಜೀವಪರ ನಿಲುವುಗಳ ಕೃತಿ ಕುರಿತು ಮಾತನಾಡಿದ ಸ್ನೇಹಜೀವಿ ಸಮುದ್ರವಳ್ಳಿ ವಾಸುರವರು ಶರಣರ ವಚನಗಳು ಮಾನವ ಸಂಸ್ಕೃತಿಯ ಪ್ರತೀಕವಾಗಿವೆ. ಶರಣರು ತಾವು ಕಂಡುಂಡ ಅನುಭವಗಳನ್ನು ವಚನವಾಗಿಸಿದ್ದರು. ಆವರ ಈ ಕೃತಿಯಲ್ಲಿ ವಚನಗಳಲ್ಲಿ ಕಾವ್ಯಾಂಶ, ದಾಂಪತ್ಯ, ಮನೋಪರಿವರ್ತನೆ ಜೊತೆಗೆ ಕೃಷಿ ಚಟುವಟಿಕೆ ಕುರಿತು ವಿವರಗಳು ಲಭ್ಯವಾಗಿ ವಿಶೇಷವಾಗಿದೆ ಎಂದರು.

ವಚನಗಳು ಕಿರಿದರಲ್ಲಿ ಹಿರಿದರ್ಥವನ್ನು ನೀಡುತ್ತವೆ. ೧೨ನೇ ಶತಮಾನ ವಚನ ಸಾಹಿತ್ಯಕ್ಕೆ ಅಭೂತಪೂರ್ವ ಕೊಡುಗೆ ನೀಡಿದೆ. ಸಾಮಾಜಿಕ ಅಸಮಾನತೆ, ಮೌಢ್ಯ, ಅಸ್ಪೃಶ್ಯತೆ, ಅಂಧಾನುಕರಣೆ, ಅನಿಷ್ಟ ಪದ್ದತಿಗಳ, ವಿರುದ್ದ ದ್ವನಿ ಎತ್ತಿದ್ದರು. ಅವರ ಬದುಕು ಬರಹ ಎರಡೂ ಒಂದೇ ಆಗಿತ್ತು ಎಂದ ವಾಸು, ಕೃತಿಕಾರರು ವಚನಗಳನ್ನು ಕೇವಲ ವಿಶ್ಲೇಷಣೆ ಮಾಡದೆ ಶರಣರ ಬದುಕು, ಶರಣರ ನಿಲುವುಗಳ ಜೊತೆಗೆ ವಾಸ್ತವ ನೆಲೆಗಟ್ಟಿನಲ್ಲಿ ಸಮಷ್ಟಿ ಪ್ರಜ್ಞೆಯನ್ನಿಟ್ಟುಕೊಂಡು ಅಚ್ಚುಕಟ್ಟಾಗಿ ತಮ್ಮ ಕೃತಿಯಲ್ಲಿ ಕೃತಿಕರ್ತರು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆಂದರು.

- Advertisement -

ಕೃತಿಕರ್ತರಾದ ಸುಶೀಲಾ ಸೋಮಶೇಖರ ರವರು ಮಾತನಾಡಿ, ಶರಣರ ನಿಲುವುಗಳು ಜನಸಾಮಾನ್ಯರಿಗೆ ಜೀವದ್ರವ್ಯವಾಗಿದೆ. ವಚನಕಾರರ ಆದರ್ಶ ಬದುಕೇ ಕೃತಿಗೆ ಪ್ರೇರಣೆ ಎಂದು ತಮ್ಮ ಕೃತಿ ಕುರಿತಂತೆ ವಿಸ್ತಾರವಾಗಿ ಮಾತನಾಡಿದರು.

ಸಾಹಿತಿ ಗೊರೂರು ಅನಂತರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಸುಶೀಲ ಸೋಮಶೇಖರ್ ಅವರ ಪ್ರಕಟಿತ 20 ಕೃತಿಗಳಲ್ಲಿ 6 ವಚನ ಸಾಹಿತ್ಯ ಕೃತಿಗಳಾಗಿ ವಚನ ಸಾಹಿತ್ಯ ದಲ್ಲಿ ವಿಶೇಷ ಪಾಂಡಿತ್ಯ ವುಳ್ಳ ಪ್ರತಿಭೆಯಾಗಿ ಬೆಳಕಿಗೆ ಬಂದವರಾಗಿ ರಾಜ್ಯ ಮಟ್ಟದಲ್ಲಿ ವಚನ ಸಾಹಿತ್ಯ ಭಾಷಣದಲ್ಲಿ ಹೆಸರುವಾಸಿಯಾಗಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಉಪನಾೃಸದಲ್ಲಿ ತಾವು ಇದನ್ನು ಗಮನಿಸಿರುವುದಾಗಿ ತಿಳಿಸಿದರು.

ನಂತರ ನಡೆದ ಕವಿ ಗೋಷ್ಠಿಯಲ್ಲಿ ಸರೋಜಾ ಟಿ.ಎಂ, ಪ್ರೇಮ ಪ್ರಶಾಂತ, ಬಿ.ಎಂ ಭಾರತಿ ಹಾದಿಗೆ, ವೆಂಕಟೇಶ ಆರ್, ಧರ್ಮ ಕೆರಲೂರು, ರುಮಾನ ಜಬೀರ್, ಗಿರಿಜಾ ನಿರ್ವಾಣಿ, ಜಯಂತಿ ಚಂದ್ರಶೇಖರ್, ಲಲಿತ ಎಸ್, ವಸುಮತಿ ಜೈನ್, ಬಸವರಾಜು ಹೆಚ್‌.ಎಸ್, ಪ್ರಜ್ವಲ್ ಕೆ.ಎಂ, ದಿಬ್ಬೂರು ರಮೇಶ್, ಹೆಚ್.ಬಿ ಚೂಡಾಮಣಿ, ಸಾವಿತ್ರಿ ಬಿ ಗೌಡ, ಪದ್ಮಾವತಿ ವೆಂಕಟೇಶ, ವನಜಾ ಸುರೇಶ್, ವಾಣಿ ಮಹೇಶ್ ಕವನ ವಾಚಿಸಿದರು.

- Advertisement -

ಲೇಖಕಿ ಸುಮಾ ರಮೇಶ್, ಕಾಮಾಕ್ಷಿ ಬಿ.ಜಿ, ಜಯಲಕ್ಷ್ಮಿ ರಾಮ್ ಠಾಕೂರ್, ರಾಣಿ ಚರಶ್ರೀ, ಗಾಯತ್ರಿ ಪ್ರಕಾಶ್, ಶ್ವೇತ ಮೋಹನ್, ಧನಲಕ್ಷ್ಮಿ, ಜಿ.ಆರ್ ಶ್ರೀಕಂತ್ , ಕೆ.ಪ್ರಶಾಂತ ಕುಮಾರ್, ಎ.ವಿ ರುದ್ರಾಪ್ಪಾಜಿರಾವ್, ಜಯದೇವಪ್ಪ, ಪ್ರಣತಿ ಪಿ ಹರಿತ್ಸಾ, ಪ್ರಜ್ಞಾ ಪಿ ಹರಿತ್ಸಾ, ನಿಮ೯ಲ ಚಂದ್ರಶೇಖರ್. ಪದ್ಮಾವತಿ ವೆಂಕಟೇಶ್. ಬಿ.ಎಸ್.ವನಜಾ ಸುರೇಶ್, ವಸಂತಮ ಬಿ. ಸಿ. ಇನ್ನೂ ಮುಂತಾದವರು ಹಾಜರಿದ್ದರು.

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group