ಶರಣಸ್ತೋತ್ರದ ವಚನಗಳು

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ವಚನ ಸಂಯೋಜನೆ ಸಾಹಿತ್ಯದಲ್ಲಿ ಸ್ತೋತ್ರದ ವಚನ ಸಂಕಲನಗಳಿಗೆ ಒಂದು ಪ್ರತ್ಯೇಕ ಸ್ಥಾನ ಮೀಸಲಾಗಿದೆ. ಸ್ತೋತ್ರದ ವಚನಗಳಲ್ಲಿ ಶಿವ-ಶಿವತತ್ವ ಹಾಗೂ ಶಿವಶರಣರನ್ನು ಕುರಿತ ರಚನೆಗಳು ಸಮಾವೇಶಗೊಳ್ಳುತ್ತವೆ. ಅವುಗಳನ್ನು ವಿಷಯಾನುಗುಣವಾಗಿ ಜೋಡಿಸುವ ಕಾರ್ಯವನ್ನು ಸಂಪಾದನ ಸಮಯದ ಅನುಭಾವಿಗಳು ಮಾಡುತ್ತ ಬಂದಿದ್ದಾರೆ. ಪ್ರಸ್ತುತ ಕೃತಿಯನ್ನು ಸಂಕಲಿಸಿದವನು ಸಂಪಾದನ ಸಮಯದ ಬಹುಮುಖ್ಯ ಸಂಕಲನಕಾರನಾದ ಎಳಮಲೆಯ ಗುರುಶಾಂತದೇವ. ಅದರ ಶಿರೋಣಾಮೆಯೇ ಶರಣಸ್ತೋತ್ರದ ವಚನಗಳು ಎಂಬ ಮಹತ್ವದ ಕೃತಿ. ಇದನ್ನು ಶಾಸ್ತ್ರಶುದ್ದ ಪರಂಪರೆಯಲ್ಲಿ ಪರಿಷ್ಕರಿಸಿ ಸಂಪಾದಿಸಿದವರು ಹಿರಿಯ ಸಾಹಿತಿಗಳಾದ ಡಾ. ವೀರಣ್ಣ ರಾಜೂರ ಅವರು. ಇದು 2018ರಲ್ಲಿ ಶ್ರೀಮುರುಘಾಮಠ ಧಾರವಾಡದಿಂದ ಬೆಳಕುಕಂಡಿದೆ. 61 ಪುಟದ ಹರವು ಪಡೆದಿದೆ. 110 ವಚನಗಳು ಇಲ್ಲಿ ಅಳವಟ್ಟಿವೆ.

ಎಳಮಲೆಯ ಗುರುಶಾಂತದೇವನಿಗೆ ಗುರುಶಾಂತೇಶ್ವರ, ಎಳಮಲೆಯ ಗುರುಶಾಂತೇಶ್ವರ, ಎಳಮಲೆಯ ಗುರುಶಾಂತದೇವ, ಎಳಮಲೆಯ ಗುರುಶಾಂತಾಚಾರ್ಯ, ಎಳೆಮಲೆಯ ಗುರುಶಾಂತಾದ್ಬಯಾಚಾರ್ಯ, ಸಂಪಾದನೆಯ ಗುರುಶಾಂತದೇವ ಎಂದು ಮುಂತಾಗಿ ಕರೆಯಲಾಗುತ್ತದೆ. ಈ ಹೆಸರುಗಳ ಪೂರ್ವಾದ್ಯದಲ್ಲಿ ಬರುವ ಎರಡು ವಿಶೇಷಣಗಳಲ್ಲಿ ಎಳಮಲೆಯ ಎಂಬುದು ಅವನ ಗ್ರಾಮವನ್ನು ಸೂಚಿಸಿದರೆ, ಸಂಪಾದನೆಯ ಎಂಬುದು ಅವನ ಕಾಯಕವನ್ನು ತಿಳಿಸುತ್ತದೆ. ಉತ್ತರಾರ್ಧದ ಗುರುಶಾಂತೇಶ್ವರ, ಗುರುಶಾಂತದೇವ, ಗುರುಶಾಂತಾಚಾರ್ಯ, ಗುರುಶಾಂತಹ್ವಯಾಚಾರ್ಯ ಎಂಬುವು ಅವನ ಹೆಸರನ್ನು ಹೇಳುತ್ತವೆ ಎಂದು ಸಂಕಲನಕಾರನ ಹೆಸರಿನ ಬಗ್ಗೆ ತಿಳಿಸಿದ್ದಾರೆ.

ಲಿಂಗಾಯತರಲ್ಲಿ ಶರಣನಿಗೆ ವಿಶಿಷ್ಟಸ್ಥಾನ. ಅವನು ಈ ಲೋಕದ ಸಾಮಾನ್ಯ ಜೀವಿಗಳಿಂದ ಭಿನ್ನ ಬಯಲರೂಪಿಯಾದ ಪರಶಿವನ ಸಾಕಾರರೂಪನೀತ. ಸೃಷ್ಟಿ ಸ್ಥಿತಿಯ ಕಾರಣವಾದ ಬ್ರಹ್ಮವಿಷ್ಟು, ರುದ್ರ- ಈ ತತ್ವಪ್ರಯಕ್ಕೆ ಈತನೇ ಜನ್ಮಸ್ಥಾನ. ಈತನ ವಿದ್ಯೆ-ಬುದ್ದಿಯಿಂದ ಹುಟ್ಟಿದಾತ ಬ್ರಹ್ಮ, ಈತನ ಶಾಂತ-ಸ್ಮರಣೆಯಿಂದ ಹುಟ್ಟಿದಾತ ವಿಷ್ಣು, ಈತನ ಕೋಪ-ಕ್ರೋಧದಿಂದ ಹುಟ್ಟಿದಾತ ರುದ್ರ ಕಾರಣ ಶರಣ ಸಚ್ಚಿದಾನಂದ ನಿತ್ಯಪರಿಪೂರ್ಣಸ್ವರೂಪ. ಅವನು ಕುಲವಿಲ್ಲದ ಅಕುಲ, ಶರೀರವಿಲ್ಲದ ಸಂಬಂಧಿ, ಮತ್ಸರವಿಲ್ಲದ ಮಹಿಮ, ಕರ್ಮವಿಲ್ಲದ ಕಾರಣಿಕ, ಅರ್ಪಿತವಿಲ್ಲದ ಆಪ್ಯಾಯನ, ಜಂಗಮವಿಲ್ಲದ ಸಮಶೀಲ, ಲಿಂಗವಿಲ್ಲದ ನಿರುತ, ಪ್ರಸಾದವಿಲ್ಲದ ಪರಿಣಾಮಿ, ಇವನಿಗೆ ಆಯೋನಿ ಸಂಭವನಾಗಿ ಕುಲಮದವೆಂಬುದಿಲ್ಲ; ಆಸಾಧ್ಯವ ಸಾಧಿಸಿದನಾಗಿ ವಿದ್ಯಾಮದವೆಂಬುದಿಲ್ಲ; ಸೀಮೆ-ಭೂಮಿ, ಕಾಮ-ಕತ್ತಲೆ, ನೇಮ-ನಿತ್ಯ, ಸಾಲ-ಶೀಲ ಎಲ್ಲ ಮೀರಿನಿಂತವನವನು. ಇಷ್ಟೇ ಅಲ್ಲ ಸ್ಥಲ-ನೆಲರಹಿತ, ನಿತ್ಯತೃಪ್ತ, ಸತ್ಯಜ್ಞಾನಿ, ಸ್ವಯಂಜ್ಯೋತಿಪ್ರಕಾಶ. ಸತ್ತು ಹುಟ್ಟುವನಲ್ಲ, ಸಂದೇಹಸೂತಕಿಯಲ್ಲಿ, ಆಕಾರ ನಿರಾಕಾರನಲ್ಲ, ಕಾಯ, ಜೀವವಂಚಕನಲ್ಲ; ನಿರಂತರ ಸಹಜ. ತಾಗು-ನಿರೋಧ, ಆಗು-ಹೋಗುಗಳನರಿಯದವ. ತಾನೇ ಶಿವನೆಂದು ಕುರುಹುದೋರುವವ ಎಂದು ಶರಣಸ್ತೋತ್ರದ ವಚನಗಳ ವೈಶಿಷ್ಟ್ಯವನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ.

- Advertisement -

ಇವನ ಸರ್ವಾಂಗವು ಲಿಂಗದಂಗವು. ಇವನು ನಡೆವ ಗತಿ ಲಿಂಗದಲ್ಲಿ, ನುಡಿವ ನುಡಿ ಲಿಂಗದನುಡಿ, ಸ್ವಭಾವದಿರುವು ಲಿಂಗದಿರವು. ಇವನ ತೋರುವ ಜಾಗ್ರ ಸ್ವಪ್ನ ಸುಪುಪ್ತಿಗಳೆಲ್ಲವು ಲಿಂಗಮಿಡಿದು ತೋರುವವು. ಇವನು ಶಿವಯೋಗಿ, ಇಂಥ ಶರಣನ ಉರವೇ ಕುರುಕ್ಷೇತ್ರ, ಶಿರವೇ ಶ್ರೀಪವರ್ತ, ಲಲಾಟವೇ ಕೇದಾರ, ಭ್ರೂನಾಶಿಕದ ನಡುವೇ ವಾರಣಾಸಿ ಹೃದಯವೇ ಪ್ರಯಾಗ, ಸರ್ವಾಂಗವೇ ಸರ್ವತೀರ್ಥಂಗಳು. ಅವನ ಸುಳಿವು ಜಗತ್ವಾವನ ಎಂದು ಶಿವನ ಮಹಿಮೆಯನ್ನೇ ಕೊಂಡಾಡಿದ ವಿವರವನ್ನು ಗುರುತಿಸಿದ್ದಾರೆ.

ಉಪಮಾತೀತನಾದ ಈ ಶರಣನ ಹಿರಿಮೆ-ಗರಿಮೆ, ಮಹಿಮಾತಿಶಯಗಳ ವರ್ಣನೆ; ವಿಲಕ್ಷಣವಾದ ವ್ಯಕ್ತಿತ್ವದ ವ್ಯಾಖ್ಯಾನ; ನಡೆ-ನುಡಿ. ಗುಣಾತಿರಯಗಳ ಕಥನ ಈ ಸಂಕಲನದ ವಚನಗಳ ವಸ್ತು ಹಾಗೂ ಗುರಿ. ಇದರಲ್ಲಿ 21 ಜನ ವಚನಕಾರರಿಂದ ರಚಿತವಾದ 110 ವಚನಗಳು ಎಡೆಪಡೆದಿದೆ ಎಂದು ಸಂಕ್ಷಿಪ್ತವಾಗಿ ಕೃತಿ ಪರಿಚಯ ಮಾಡಿಕೊಟ್ಟಿದ್ದಾರೆ.
ಈ ಕೃತಿಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ಭಾಂಡಾರಕ್ಕೆ ಸೇರಿದ ತಾಳೆಗರಿ ಪ್ರತಿ ಸಂಖ್ಯೆ 384 ರಿಂದ ಪರಿಷ್ಕರಣೆ ಮಾಡಿದ್ದಾರೆ. ಹಸ್ತಪ್ರತಿ ಶುದ್ದವಾಗಿದೆ. ಇದು ಈ ಮೊದಲು ಇವರ ಸಂಪಾದಿಸಿ, ಗದುಗಿನ ತೋಂಟದಾರ್ಯ ಮಠದ ಲಿಂಗಾಯ ಅಧ್ಯಯನ ಸಂಸ್ಥೆಯಿಂದ ಪ್ರಕಟಿಸಿದ (1983) ಎಳಮಲೆಯ ಗುರುಶಾಂತದೇವನ ವಚನ ಸಂಕಲನಗಳು ಕೃತಿಯಲ್ಲಿ ಅಳವಡಿಸಲಾಗಿದೆ. ಈಗ ಇದನ್ನು ಪ್ರತ್ಯೇಕಿಸಿ ಸ್ವತಂತ್ರವಾಗಿ ಮೊದಲ ಬಾರಿಗೆ ಪ್ರಕಟಿಸಿದ್ದಾರೆ. ಕೃತಿಯ ಕೊನೆಯಲ್ಲಿ ವಚನಗಳ ಆಕಾರಾದಿ, ವಚನಕಾರರು-ಅಂಕಿತ-ವಚನಸಂಖ್ಯೆ ಕೊಟ್ಟಿರುವದು ಓದುಗರಿಗೆ ಉಪಯುಕ್ತವೆನಿಸಿದೆ.

ಡಾ. ವ್ಹಿ.ಬಿ.ಸಣ್ಣಸಕ್ಕರಗೌಡರ
ಉಪನ್ಯಾಸಕರು, ಬಾದಾಮಿ

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!